
ಬೆಂಗಳೂರು: ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಗಣೇಶ ಹಬ್ಬದ ನಂತರಕ್ಕೆ ಮುಂದೂಡಿಕೆಯಾಗುವ ಲಕ್ಷಣಗಳಿವೆ. ಮೂಲಗಳ ಪ್ರಕಾರ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಮುಕ್ತ ಅವಕಾಶವನ್ನು ಸಿಎಂ ಸಿದ್ದರಾಮಯ್ಯಗೆ ನೀಡಿದೆ.
ಸಿದ್ದರಾಮಯ್ಯ ಅವರು ಸೂಚಿಸಿರುವ ಹೆಸರುಗಳಿಗೆ ಕುರುಬರ ಕೋಟಾದಲ್ಲಿ ಎಚ್.ಎಂ. ರೇವಣ್ಣ, ಲಿಂಗಾಯತರ ಕೋಟಾದಲ್ಲಿ ಕೆ. ಷಡಕ್ಷರಿ ಹಾಗೂ ಪರಿಶಿಷ್ಟರ ಕೋಟಾದಲ್ಲಿ ತಿಮ್ಮಾಪುರ ಹೆಸರಿಗೆ ಸಮ್ಮತಿ ನೀಡಿದೆ.
ಆದರೆ, ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗದಿರಲು ಕಾರಣ ಪರಿಶಿಷ್ಟರ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ಎಡ-ಬಲ ಪಂಗಡಗಳ ನಡುವೆ ನಡೆದಿರುವ ಪೈಪೋಟಿ ಎಂದು ಹೇಳಲಾಗ್ತಿದೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪರಿಶಿಷ್ಟರ ಎಡಗೈ ಪಂಗಡದವರು, ಎಡಗೈ ಪಂಗಡಕ್ಕೆ ದೊರೆಯಬೇಕು ಎಂದು ಪ್ರಬಲ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನು ಬಲಗೈ ಪಂಗಡದಿಂದ ಮೋಟಮ್ಮ ಹಾಗೂ ನರೇಂದ್ರಸ್ವಾಮಿ ಅವರು ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಸಿಎಂ ಎಡಗೈಗೆ ಈ ಸ್ಥಾನವನ್ನು ನೀಡಿದರೆ, ಅದು ಸಹಜವಾಗಿಯೇ ಬಲಗೈ ಪಂಗಡದ ಬೇಸರಕ್ಕೆ ಕಾರಣವಾಗುತ್ತದೆ.
ಈ ವಿಚಾರ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿದೆ. ಹೀಗಾಗಿ ಪರಿಶಿಷ್ಟರ ಎಡಗೈ-ಬಲಗೈ ಪೈಕಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯರಿಗೆ ತಲೆನೋವಾಗಿದೆ. ಬಹುತೇಕ ಗಣೇಶ ಹಬ್ಬದ ನಂತರ ಅಂದರೆ ಮುಂದಿನ ವಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.