ಕೊನೆಗೂ ವಿಧಾನ ಪರಿಷತ್ತಿಗೆ ಸಿ.ಎಂ.ಲಿಂಗಪ್ಪ ನೇಮಕ: ಲಿಂಗಪ್ಪ ಆಯ್ಕೆ ಹಿಂದೆ ‘ಕೈ’ ಮಾಸ್ಟರ್ ಪ್ಲಾನ್!

Published : Jun 10, 2017, 09:19 AM ISTUpdated : Apr 11, 2018, 01:13 PM IST
ಕೊನೆಗೂ ವಿಧಾನ ಪರಿಷತ್ತಿಗೆ ಸಿ.ಎಂ.ಲಿಂಗಪ್ಪ ನೇಮಕ: ಲಿಂಗಪ್ಪ ಆಯ್ಕೆ ಹಿಂದೆ ‘ಕೈ’ ಮಾಸ್ಟರ್ ಪ್ಲಾನ್!

ಸಾರಾಂಶ

ಮರಳಿ ಯತ್ನವ ಮಾಡು ಎನ್ನುವ ಮಾತು ಸಿ.ಎಂ.ಲಿಂಗಪ್ಪನವರ ವಿಷಯದಲ್ಲಿ ನಿಜವಾಗಿದೆ. ಕೊನೆಗೂ ಸಿ.ಎಂ.ಲಿಂಗಪ್ಪ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮೊದಲನೇ ಬಾರಿ ಲಿಂಗಪ್ಪನವರನ್ನು ರಿಜೆಕ್ಟ್ ಮಾಡಿದ್ದ ರಾಜ್ಯಪಾಲರು, ಎರಡನೇ ಬಾರಿಗೆ ಲಿಂಗಪ್ಪ ಆಯ್ಕೆಗೆ ಅಂಕಿತ ಹಾಕಿದ್ದಾರೆ. ಆದ್ರೆ ಈ ಆಯ್ಕೆ ಹಿಂದೆ ‘ಕೈ’ ಪಾಳಯದ ಮಾಸ್ಟರ್ ಪ್ಲಾನ್ ಅಡಗಿದೆ.

ಬೆಂಗಳೂರು(ಜೂ.10): ಮರಳಿ ಯತ್ನವ ಮಾಡು ಎನ್ನುವ ಮಾತು ಸಿ.ಎಂ.ಲಿಂಗಪ್ಪನವರ ವಿಷಯದಲ್ಲಿ ನಿಜವಾಗಿದೆ. ಕೊನೆಗೂ ಸಿ.ಎಂ.ಲಿಂಗಪ್ಪ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮೊದಲನೇ ಬಾರಿ ಲಿಂಗಪ್ಪನವರನ್ನು ರಿಜೆಕ್ಟ್ ಮಾಡಿದ್ದ ರಾಜ್ಯಪಾಲರು, ಎರಡನೇ ಬಾರಿಗೆ ಲಿಂಗಪ್ಪ ಆಯ್ಕೆಗೆ ಅಂಕಿತ ಹಾಕಿದ್ದಾರೆ. ಆದ್ರೆ ಈ ಆಯ್ಕೆ ಹಿಂದೆ ‘ಕೈ’ ಪಾಳಯದ ಮಾಸ್ಟರ್ ಪ್ಲಾನ್ ಅಡಗಿದೆ.

ಸಿ.ಎಂ.ಲಿಂಗಪ್ಪರನ್ನು ವಿಧಾನ ಪರಿಷತ್ ಮೆಟ್ಟಿಲು ಏರಿಸಬೇಕು ಎನ್ನುವುದು ಕೈ ಪಾಳಯದ ನಿರ್ಧಾರವಾಗಿತ್ತು. ವಿಧಾನ ಪರಿಷತ್ತಿಗೆ ಹಿರಿಯ ಮುಖಂಡರಾದ ಕೊಂಡಜ್ಜಿ ಮೋಹನ್, ಪಿ ಆರ್ ಲಿಂಗಪ್ಪ ಮತ್ತು ಸಿಎಂ ಲಿಂಗಪ್ಪ ಹೆಸರನ್ನು ನಾಮನಿರ್ದೇಶನ ಮಾಡಿತ್ತು. ಇಬ್ಬರನ್ನು ಒಪ್ಪಿದ ರಾಜ್ಯಪಾಲರು, ಸಿ.ಎಂ.ಲಿಂಗಪ್ಪರನ್ನು ತಿರಸ್ಕರಿಸಿದ್ದರು. ಆದರೆ ಪಟ್ಟು ಬಿಡದ ಕಾಂಗ್ರೆಸ್ ಕೊನೆಗೂ ಲಿಂಗಪ್ಪರನ್ನು ಪರಿಷತ್ ಸದಸ್ಯರನ್ನಾಗಿಸಿದೆ.

ಅಷ್ಟಕ್ಕೂ ಲಿಂಗಪ್ಪರನ್ನ ಪರಿಷತ್​ ಸದಸ್ಯರನ್ನಾಗಿ ಮಾಡಲೇಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದ್ದಕ್ಕೂ ಒಂದು ಕಾರಣವಿದೆ. ಲಿಂಗಪ್ಪ ಬೆಂಗಳೂರು ಗ್ರಾಮೀಣ ಭಾಗದ ಒಕ್ಕಲಿಗ ಸಮುದಾಯದಲ್ಲಿ ಪ್ರಬಲರಾಗಿದ್ದು, ರಾಜಕೀಯದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ. ಕನಕಪುರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಡಿ.ಕೆ.ಶಿವಕುಮಾರ್'ಗೆ, ರಾಮನಗರ ಕೈ ತಪ್ಪಿ ಹೋಗಿದೆ. ಅಲ್ಲಿ ಎಚ್​.ಡಿ.ಕೆ ಹವಾ ಜೋರಾಗಿದೆ. ಹೀಗಾಗಿ ರಾಮನಗರ, ಮಾಗಡಿಯಲ್ಲಿ ಲಿಂಗಪ್ಪನವ್ರನ್ನ ದಾಳವಾಗಿಸಿಕೊಂಡು, ಎಚ್ಡಿಕೆಯನ್ನ ಮಣಿಸಬೇಕು ಅನ್ನೋದು ಡಿಕೆಶಿ ತಂತ್ರ.

ಒಂದೆಡೆ ಲಿಂಗಪ್ಪನನ್ನು ಆಯ್ಕೆ ಮಾಡಿ, ಎಚ್'​ಡಿಕೆಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದರೆ, ಇನ್ನೊಂದೆಡೆ ಸೋದರ ಸುರೇಶ್'ನನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬರಲೇಬೇಕು ಎನ್ನುವ ಪಟ್ಟು ಡಿಕೆಶಿಯದ್ದು. ಕನಕಪುರ, ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿ ಕ್ಷೇತ್ರಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪೂರಕ ವಾತವರಣವನ್ನು ಡಿಕೆಶಿ ಸೃಷ್ಟಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಲಿಂಗಪ್ಪರನ್ನ ಆಯ್ಕೆ ಮಾಡಿದ್ದಾರೆ ಎನ್ನುವುದು ಡಿಕೆಶಿ ಆಪ್ತ ವಲಯದಿಂದಲೇ ಕೇಳಿ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?