ಯಡಿಯೂರಪ್ಪನವರ ಶ್ರಮದ ಶಕ್ತಿಯನ್ನು ಸಮರ್ಪಿಸಿದ 'ಕಮಲ ರಥ', CKR-45 - ಬೆಸುಗೆಯ ಬಂಧ!

Published : Sep 04, 2025, 08:05 PM ISTUpdated : Sep 04, 2025, 08:18 PM IST
 BY Vijayendra BS Yediyurappa

ಸಾರಾಂಶ

ಹಳೆಯ ನೆನಪುಗಳನ್ನೊತ್ತು ಬಿಎಸ್‌ವೈ ಅವರ ಪರಿಶ್ರಮ ಹಾಗೂ ಜನರೊಂದಿಗಿನ ಭಾವನಾತ್ಮಕ ಸಂಬಂಧದ ಕೊಂಡಿಯಾಗಿ ನಮ್ಮೊಂದಿಗೆ ದೀರ್ಘ ಕಾಲ ಜತೆಗಿರಲಿದೆ. CKR-45 ಬಿಜೆಪಿ-ಬಿಎಸ್‌ವೈ ಹಾಗೂ ಕಾರ್ಯಕರ್ತರ ನಡುವಿನ ಐತಿಹಾಸಿಕ ಹೆಜ್ಜೆಯ ಗುರುತಾಗಿ ಉಳಿದಿದೆ.

ಪೂಜ್ಯ ತಂದೆ ಬಿ. ಎಸ್. ಯಡಿಯೂರಪ್ಪನವರು ಅತ್ಯಂತ ಪ್ರೀತಿಯಿಂದ ಕೊಂಡುಕೊಂಡ ಮೊದಲ ವಾಹನ CKR 45 ಅಂಬಾಸಿಡರ್ ಕಾರಿನಲ್ಲಿ ಇಂದು ಕ್ಷೇತ್ರದ ಪ್ರಮುಖರೊಂದಿಗೆ ಕುಳಿತು ಶಿಕಾರಿಪುರದ ಕ್ಷೇತ್ರ ಪ್ರವಾಸ ಕೈಗೊಂಡ ಸಂದರ್ಭ ಭಾವುಕತೆಯ ರೋಮಾಂಚನ ಉಂಟುಮಾಡಿತು. ಏಕೆಂದರೆ ಈ ಕಾರು ತಂದೆಯವರ ರಾಜಕೀಯ ಜೀವನದಲ್ಲಿ ಭಾವನಾತ್ಮಕ ಮೈಲಿಗಲ್ಲು. ಬೈಸಿಕಲ್, ಎತ್ತಿನಗಾಡಿ, ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಊರೂರು ಸುತ್ತಿ ಪಕ್ಷ ಸಂಘಟನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಬಿಎಸ್‌ವೈ ಅವರು ಬಹಳ ಕಷ್ಟಪಟ್ಟು 1988 ರಲ್ಲಿ ಈ ಕಾರನ್ನು ಖರೀದಿಸಿದ್ದರು.

ಈ ಕಾರು ತಂದೆಯವರ ರಾಜಕೀಯ ಜೀವನದ ಸುದೀರ್ಘ ಪಯಣದ ಸಾಕ್ಷಿಯಷ್ಟೇ ಆಗಲಿಲ್ಲ, ನೂರಾರು ಸಂಘಟಕರನ್ನು, ಸಾವಿರಾರು ಕಾರ್ಯಕರ್ತರನ್ನು ಹೊತ್ತೊಯ್ದು ರಾಜ್ಯಾದ್ಯಂತ ಪ್ರಯಾಣಿಸಿ, ಇಂದು ಹೆಮ್ಮರವಾಗಿ ಬೆಳೆದಿರುವ ಭಾರತೀಯ ಜನತಾ ಪಾರ್ಟಿಯ ಸಂಘಟನೆಗೆ ತನ್ನ ಶ್ರಮದ ಶಕ್ತಿಯನ್ನು ಸಮರ್ಪಿಸಿದ

‘ಕಮಲ ರಥ’ವಾಗಿದೆ.

ಧರ್ಮ ಸಂಸ್ಥಾಪನೆಗಾಗಿ ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಪರಮಾತ್ಮ ಪಾಂಚಜನ್ಯ ಮೊಳಗಿಸಿದ ರೀತಿಯಲ್ಲೇ ಭಾರತದಲ್ಲಿ ಭಾರತೀಯತೆಯ ಸಂರಕ್ಷಣೆಗಾಗಿ ಹಾಗೂ ಧರ್ಮ ರಾಜಕಾರಣಕ್ಕಾಗಿ ಭಾರತೀಯ ಜನತಾ ಪಾರ್ಟಿಯು ಜನ್ಮ ತಾಳಿತು. ಹಿರಿಯರಾದ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿ, ಲಾಲ್ ಕೃಷ್ಣ ಅಡ್ವಾಣಿಯವರೂ ಸೇರಿದಂತೆ ರಾಷ್ಟ್ರೀಯ ಪ್ರಮುಖರು ಹಾಗೂ ಸಂಘದ ಹಿರಿಯರು ರಾಜ್ಯ ಪ್ರವಾಸ ಕೈಗೊಂಡಾಗಲೆಲ್ಲಾ ಕರುನಾಡಿನ ಮೂಲೆ ಮೂಲೆಗೂ ಈ ಕಾರು ಸಂಚರಿಸಿ, ಕಮಲ ಪಡೆಯ ಸೇನಾನಿಗಳು ಹಾಗೂ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿ ವಿಜಯರಥದ ಸಂಕೇತದಂತೆ ಅಭಯದ ಮುದ್ರೆ ಒತ್ತಿದ ನೆನಪನ್ನು ಇಂದಿಗೂ ಲಕ್ಷಾಂತರ ಕಾರ್ಯಕರ್ತರು ಮರೆತಿಲ್ಲ.

ಕಾರ್ಯಕರ್ತರು ಹಾಗೂ ಬಿಎಸ್‌ವೈ ಅವರ ನಡುವಿನ ಬಾಂಧವ್ಯದ ಕೊಂಡಿಯಂತೆ ಈ ಕಾರು ದಶಕಗಳಿಗೂ ಹೆಚ್ಚಿನ ಕಾಲ ತನ್ನ ಸೇವೆಯನ್ನು ಸಮರ್ಪಿಸಿದೆ. ಬಿಎಸ್‌ವೈ ಅವರ ಪ್ರತಿ ಚುನಾವಣೆಯಲ್ಲಿ ಕಮಲವನ್ನು ಅರಳಿಸಿ, ವಿಜಯದ ನಗೆ ಬೀರಿ ಸಂಚರಿಸಿದೆ. ಈ ಕಾರಣಕ್ಕಾಗಿಯೇ ಬಿಎಸ್ವೈ ಅವರು CKR-45 ಅಂಬಾಸಿಡರ್ ಅನ್ನು ಕುಟುಂಬ ಸದಸ್ಯನಂತೆ ಈ ಕ್ಷಣಕ್ಕೂ ಪ್ರೀತಿಸುತ್ತಾರೆ, ಅದರ ದ್ಯೋತಕವಾಗಿ ನೆನಪಾದಾಗಲೆಲ್ಲ ಇದರಲ್ಲಿ ಪಯಣಿಸುತ್ತಾರೆ.

CKR -45 ನಮ್ಮ ಕುಟುಂಬದ ಸದಸ್ಯ ಮಾತ್ರವಲ್ಲ, ಬಿಜೆಪಿಯ ಒಬ್ಬ ಹಿರಿಯ ಕಾರ್ಯಕರ್ತನೂ ಹೌದೆನ್ನುವುದು ಶಿಕಾರಿಪುರದ ಹಿರಿಯ ಕಾರ್ಯಕರ್ತರ ಅಭಿಮತ. ಈ ಹಿನ್ನೆಲೆಯ ಪ್ರೇರಣೆ CKR-45 ನನ್ನಲ್ಲೂ ಭಾವನಾತ್ಮಕ ಸಂಬಂಧ ಬೆಸೆಯಲು ಕಾರಣವಾಗಿದೆ,ಇದರ ಪ್ರತೀಕವಾಗಿ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರಲ್ಲಿ ಬಾಂಧವ್ಯದ ಬೆಸುಗೆ ಸ್ಥಿರವಾಗಿ ಉಳಿಸಲು ಇಂದಿಗೂ,ಮುಂದೆಯೂ CKR-45 ಶಿಕಾರಿಪುರದ ಪ್ರತಿ ರಸ್ತೆಗಳಲ್ಲಿ ಆಗಾಗ ಸಂಚರಿಸಲಿದೆ.

ಹಳೆಯ ನೆನಪುಗಳನ್ನೊತ್ತು ಬಿಎಸ್‌ವೈ ಅವರ ಪರಿಶ್ರಮ ಹಾಗೂ ಜನರೊಂದಿಗಿನ ಭಾವನಾತ್ಮಕ ಸಂಬಂಧದ ಕೊಂಡಿಯಾಗಿ ನಮ್ಮೊಂದಿಗೆ ದೀರ್ಘ ಕಾಲ ಜತೆಗಿರಲಿದೆ. CKR-45 ಬಿಜೆಪಿ-ಬಿಎಸ್‌ವೈ ಹಾಗೂ ಕಾರ್ಯಕರ್ತರ ನಡುವಿನ ಐತಿಹಾಸಿಕ ಹೆಜ್ಜೆಯ ಗುರುತಾಗಿ ಉಳಿದಿದೆ.

CKR -45 ಗೆ ನಿಮ್ಮ ಪ್ರೀತಿಯ ಹಾರೈಕೆಯಿರಲಿ, ಅದರ ಪ್ರೇರಣೆಯ ಸ್ಪರ್ಶ ಪಡೆಯುತ್ತಿರುವ ನನಗೆ ನಿಮ್ಮ ಆಶೀರ್ವಾದವಿರಲಿ.

ನಿಮ್ಮ

ಬಿ ವೈ ವಿಜಯೇಂದ್ರ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೋಟಿ ಜನರ ಹೃದಯ ಮೀಟಿದ ಮಾನವ: ನಾನು ರಾಜಕೀಯಕ್ಕೆ ಬಂದಿದ್ದು ದೊಡ್ಡ ತಪ್ಪು ಎಂದಿದ್ದ ವಾಜಪೇಯಿ
'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!