
ಬರೇಲಿ(ನ.09:): ನಿನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರಮೋದಿ, 500 ಮತ್ತು 1000 ರೂಪಾಯಿ ನೋಟುಗಳನ್ನ ರದ್ದುಗೊಳಿಸಿದ ಆದೇಶ ಪ್ರಕಟಿಸಿದ ಬೆನ್ನಲ್ಲೇ ಕಪ್ಪುಹಣ ಅಡಗಿಸಿಟ್ಟಿರುವವರ ಎದೆಯಲ್ಲಿ ನಡುಕ ಉಂಟಾಗಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರಪ್ರದೇಶದ ರಾಯ್ ಬರೇಲಿ ಬಳಿ ಮೂಟೆಗಳಲ್ಲಿ ಹಣವನ್ನ ತಂದು ಬೆಂಕಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿಯೊಂದರ ನೌಕರರು ಮೂಟೆಗಳಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನ ತಂದು ಸಿಬಿ ಗಂಜ್`ನ ಪಾರ್ಸಾ ಖೇಡಾ ರಸ್ತೆಯಲ್ಲಿ ಒಂದೆಡೆ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಎನ್`ಡಿಟಿವಿ ವರದಿ ಮಾಡಿದೆ.
ಮೊದಲಿಗೆ ನೋಟುಗಳನ್ನ ಕಟ್ ಮಾಡಿ ಹಾಳುಗೆಡವಲಾಗಿದೆ. ಬಳಿಕ ಬೆಂಕಿಹಚ್ಚಲಾಗಿದೆ ಎಂದು ಪೊಳಿಸರು ತಿಳಿಸಿದ್ದಾರೆ. ಘಟನೆ ಕುರಿತಂತೆ ಅಧಿಕಾರಿಗಳು ಆರ್`ಬಿಐಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.