ನಾಳೆಯಿಂದ ಹಳೆ ನೋಟು ಬದಲಾವಣೆಗೆ ಅವಕಾಶ

By suvarna web deskFirst Published Nov 9, 2016, 2:40 PM IST
Highlights

ನವೆಂಬರ್​ 10ರಿಂದ ಡಿಸೆಂಬರ್​ 30ರವರೆಗೆ ಹಣ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್`​ಗಳಲ್ಲಿ ಪ್ರತಿದಿನ 4 ಸಾವಿರ ರೂ. ಮಾತ್ರ ವಿನಿಮಯ ಮಾಡಬಹುದಾಗಿದೆ. ಎಲ್ಲಾ ಕಡೆ ಗುರುತಿನ ಚೀಟಿ ತೋರಿಸಿ ಹಣ ಬದಲಿಸಿಕೊಳ್ಳಬಹುದು. ಖಾತೆಗೆ ಎಷ್ಟು ಬೇಕಾದರೂ ಹಣ ಜಮಾ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರಿಸರ್ವ್ ಬ್ಯಾಂಕ್‌ನಲ್ಲಿ ಮಾರ್ಚ್ 31ರವರೆಗೆ ಅವಕಾಶವಿದ್ದು, ಇಲ್ಲಿ ವಿನಿಮಯಕ್ಕೆ ಅಫಿಡವಿಟ್ ಕಡ್ಡಾಯವಾಗಿದೆ.

ಬೆಂಗಳೂರು(ನ.09): 500 ಮತ್ತು 1000 ರೂ. ನೋಟು ನಿಷೇಧ ಹಿನ್ನೆಲೆಯಲ್ಲಿ ನಾಳೆಯಿಂದ ಹಳೆ ನೋಟು ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್​, ಪೋಸ್ಟ್ಆಫೀಸ್​`ಗಳಲ್ಲಿ ಹಳೆ ನೋಟು ಕೊಟ್ಟು ಹೊಸ ನೋಟು ಪಡೆಯಬಹುದಾಗಿದೆ.

ನವೆಂಬರ್​ 10ರಿಂದ ಡಿಸೆಂಬರ್​ 30ರವರೆಗೆ ಹಣ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್`​ಗಳಲ್ಲಿ ಪ್ರತಿದಿನ 4 ಸಾವಿರ ರೂ. ಮಾತ್ರ ವಿನಿಮಯ ಮಾಡಬಹುದಾಗಿದೆ. ಎಲ್ಲಾ ಕಡೆ ಗುರುತಿನ ಚೀಟಿ ತೋರಿಸಿ ಹಣ ಬದಲಿಸಿಕೊಳ್ಳಬಹುದು. ಖಾತೆಗೆ ಎಷ್ಟು ಬೇಕಾದರೂ ಹಣ ಜಮಾ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರಿಸರ್ವ್ ಬ್ಯಾಂಕ್‌ನಲ್ಲಿ ಮಾರ್ಚ್ 31ರವರೆಗೆ ಅವಕಾಶವಿದ್ದು, ಇಲ್ಲಿ ವಿನಿಮಯಕ್ಕೆ ಅಫಿಡವಿಟ್ ಕಡ್ಡಾಯವಾಗಿದೆ.

ತುರ್ತು ಸೇವೆಗಳಲ್ಲಿ ಹಳೆ ನೋಟುಗಳ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಏರ್‌ಪೋರ್ಟ್‌ಗಳಲ್ಲಿ ಏರ್ ಟಿಕೆಟ್ ಕೌಂಟರ್‌`ನಲ್ಲಿ ಸ್ವೀಕಾರ, ರೈಲ್ವೆ ಟಿಕೆಟ್ ಕೌಂಟರ್‌ಗಳಲ್ಲಿಯೂ ಹಳೇ ನೋಟು ಸ್ವೀಕಾರ, ಸಾರ್ವಜನಿಕ ಸಹಭಾಗಿತ್ವದ ಪೆಟ್ರೋಲ್ ಬಂಕ್​ಗಳಲ್ಲೂ ಸ್ವೀಕಾರ, ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲೂ ಹಳೇ ನೋಟು ಸ್ವೀಕಾರ, ಸರ್ಕಾರಿ ಆಸ್ಪತ್ರೆ ಔಷಧಿ ಮಳಿಗೆಗಳಲ್ಲಿಯೂ ಹಳೆಯ 500, 1000 ರೂ. ನೋಟುಗಳನ್ನ ಸ್ವೀಕರಿಸಲಾಗುತ್ತೆ. ನವೆಂಬರ್​ 11 ರಿಂದ ಎಲ್ಲಾ ಎಟಿಎಂಗಳು ಕಾರ್ಯನಿರ್ವಹಣೆ ಮಾಡಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಧ್ಯಮ ಪ್ರಕಟಣೆ ಹೊಡಿಸಿದೆ.

ಇದೇವೇಳೆ, ಹಣ ಬದಲಾವಣೆಗಾಗಿ ಶನಿವಾರ ಮತ್ತು ಭಾನುವಾರವೂ ಬ್ಯಾಂಕ್`ಗಳು ಕಾರ್ಯನಿರ್ವಹಿಸಲಿವೆ.

click me!