ನಮ್ಮ ಮೆಟ್ರೋ ಸಿಬ್ಬಂದಿಗೆ ಬಂಪರ್ ಕೊಡುಗೆ: ನಿಲ್ಲುತ್ತಾ ಪ್ರತಿಭಟನೆ ಭಯ?

First Published Jun 22, 2018, 6:27 PM IST
Highlights

ನಮ್ಮ ಮೆಟ್ರೋ ಸಿಬ್ಬಂದಿಗೆ ಬಂಪರ್ ಕೊಡುಗೆ

6 ನೂತನ ಬೋಗಿ ಉದ್ಘಾಟನೆ ಸಮಾರಂಭ

ರಾತ್ರಿ ಪಾಳಿ ಭತ್ಯೆ, ಹಾರ್ಡ್ ಭತ್ಯೆ ಸೇರಿದಂತೆ ಅಹಲವು ಸೌಲಭ್ಯ ಘೊಷಣೆ

ಮೆಜಿಸ್ಟಿಕ್ ನಿಲ್ದಾಣದಲ್ಲಿ ೧೦೮ ಆ್ಯಂಬುಲೆನ್ಸ್ ಸೇವೆ
 

ಬೆಂಗಳೂರು(ಜೂ.22): ಸದಾ ಪ್ರತಿಭಟನೆ ಗುಂಗಿನಲ್ಲೇ ಇರುತ್ತಿದ್ದ ನಮ್ಮ ಮೆಟ್ರೋ ಸಿಬ್ಬಂದಿಗೆ ಇಂದು ಬಂಪರ್ ಕೊಡುಗೆ ಸಿಕ್ಕಿದೆ. ಇಂದು ನಮ್ಮ ಮೆಟ್ರೋದ ನೂತನ 6 ಬೋಗಿ ಉದ್ಘಾಟನೆ ಸಮಾರಂಭದಲ್ಲಿ ಮೆಟ್ರೋ ಸಿಬ್ಬಂದಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಯಿತು.

ರಾತ್ರಿ ಪಾಳಿ ಭತ್ಯೆ, ಹಾರ್ಡ್ ಡ್ಯೂಟಿ ಭತ್ಯೆ, ವಾಷಿಂಗ್ ಭತ್ಯೆ, ಹಾಗೂ ಸಾರಿಗೆ ಭತ್ಯೆ ವಾರದ ರಜೆ ಜೊತೆಗೆ ಜನರಲ್ ಹಾಲಿಡೆ ಭತ್ಯೆ ನೀಡಲು ಸಂಸ್ಥೆ ನಿರ್ಧರಿಸಿದೆ. ಇಷ್ಟೇ ಅಲ್ಲದೇ ಬಿಎಂ ಆರ್ ಸಿಎಲ್ ಡಿಪೋದಲ್ಲಿ ಸಬ್ಸಿಡಿ ದರದಲ್ಲಿ ಸಿಬ್ಬಂದಿಗೆ ಆಹಾರ ವಿತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಮೆಟ್ರೋದಲ್ಲಿ ಕನ್ನಡ ಸಂಘಕ್ಕೆ ಮಾನ್ಯತೆ ಕೂಡ ನೀಡಲಾಗಿದೆ.

ಕೆಂಪೇಗೌಡ ನಿಲ್ದಾಣದಲ್ಲಿ 108 ಆಂಬ್ಯುಲೆನ್ಸ್ ಸೇವೆಗೆ ಅನುಮತಿ ನೀಡಲಾಗಿದ್ದು, ಸಿಬ್ಬಂದಿಗೆ ಹೆಚ್ಚುವರಿ ಸಮವಸ್ತ್ರ ನೀಡಲು ನಿರ್ಧಾರಿಸಲಾಗಿದೆ. ಈ ಕುರಿತು ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದ್ದು, ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದ ಸಿಬ್ಬಂದಿ ಇದೀಗ ನಿರಾಳರಾಗಿದ್ದಾರೆ.

ಇದೇ ವೇಳೆ ಈ ಎಲ್ಲ ಸೌಲಭ್ಯಗಳು ಆಪರೇಷನ್ ಮತ್ತು ನಿರ್ವಹಣಾ ಸಿಬ್ಬಂದಿಗೆ ಮಾತ್ರ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ ಮುಂದಿನ ದಿನಗಳಲ್ಲಿ ಈ ಸೌಲಭ್ಯಗಳನ್ನು ಎಲ್ಲ ಸಿಬ್ಬಂದಿಗಳಿಗೂ ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದೂ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!