ಸೋಶಿಯಲ್ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಪಾಕ್ ಮಹಿಳಾ ಪೈಲೆಟ್ಸ್..!

First Published Jun 22, 2018, 6:00 PM IST
Highlights

ಸೋಶಿಯಲ್ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಪಾಕ್ ಮಹಿಳಾ ಪೈಲೆಟ್ಸ್

ದುರ್ಗಮ ಗಿಲ್ಗಿಟ್ ಪ್ರದೇಶದಲ್ಲಿ ಯಶಸ್ವಿ ವಿಮಾನ ಹಾರಾಟದ

ಮರಿಯಂ ಮಸೂದ್ ಮತ್ತು ಶುಮಾಲಿಯಾ ಮಝರ್ ಸಾಧನೆ

ಮಹಿಳಾ ಪೈಲೆಟ್ ಗಳ ಸಾಧನೆಗೆ ಭಾರೀ ಪ್ರಶಂಸೆ

ಇಸ್ಲಾಮಾಬಾದ್(ಜೂ.22): ಪಾಕಿಸ್ತಾನ್ ಇಂಟರನ್ಯಾಶನಲ್ ಏರಲೈನ್ಸ್ ನ ಇಬ್ಬರು ಮಹಿಳಾ ಪೈಲೆಟ್ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಪಾಕಿಸ್ತಾನದ ಅತ್ಯಂತ ದುರ್ಗಮ ವಾಯ ಸಂಚಾರಗಳಲ್ಲಿ ಒಂದಾದ ಗಿಲ್ಗಿಟ್ ಪ್ರದೇಶದಲ್ಲಿ ಯಶಸ್ವಿ ವಿಮಾನ ಹಾರಾಟ ನಡೆಸಿದ ಈ ಮಹಿಳಾ ಪೈಲೆಟ್ ಗಳನ್ನು ದೇಶದ ಗಡಿಗಳನ್ನೂ ಮೀರಿ ಜನ ಅಭಿನಂದಿಸಿದ್ದಾರೆ.

ಪಾಕಿಸ್ತಾನ್ ಏರಲೈನ್ಸ್ ಮಹಿಳಾ ಪೈಲೆಟ್ ಗಳಾದ ಮರಿಯಂ ಮಸೂದ್ ಮತ್ತು ಶುಮಾಲಿಯಾ ಮಝರ್ ದುರ್ಗಮ ವಾಯು ಸಂಚಾರದಲ್ಲಿ ಯಶಸ್ವಿಯಾಗಿ ವಿಮಾನ ಹಾರಾಟ ನಡೆಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಪಾಕಿಸ್ತಾನ್ ಏರಲೈನ್ಸ್, ಈ ಮಹಿಳಾ ಪೈಲೆಟ್ ಗಳ ಸಾಧನೆಯನ್ನು ಕೊಂಡಾಡಿದೆ.

The flight to Gilgit is very challenging and requires a lot of precision and technique. Our dynamic duo, Captain Maryam Masood and First Officer Shumaila Mazhar make it look so easy as they fly through the mountains celebrating the beauty of our northern areas! Way to go!! pic.twitter.com/UOQC8VbRUZ

— PIA (@Official_PIA)

ಪಾಕಿಸ್ತಾನ್ ಏರಲೈನ್ಸ್ ಮಾಡಿರುವ ಈ ಟ್ವಿಟ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಭಾರತವೂ ಸೇರಿದಂತೆ ಇತರ ದೇಶಗಳಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಈ ಮಹಿಳಾ ಪೈಲೆಟ್ ಗಳ ಧಯರ್ಯವನ್ನು ಮೆಚ್ಚಿಕೊಂಡು ಬಹುತೇಕರು ಟ್ವಿಟ್ ಮಾಡಿದ್ದಾರೆ. ದುರ್ಗಮ ಗಿಲ್ಗಿಟ್ ಪ್ರದೇಶದಲ್ಲಿ ಹಾರಾಟ ನಡೆಸಿದ ಅನುಭವ ಹಂಚಿಕೊಂಡಿರುವ ಮಸೂದ್ ಮತ್ತು ಶುಮಾಲಿಯಾ, ವಿಮಾನ ಆ ಪ್ರದೇಶಕ್ಕೆ ಪ್ರವೇಶ ಮಾಡಿದಾಗ ನಾವಿಬ್ಬರೂ ಪರಸ್ಪರರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದೆವು ಎಂದು ಹೇಳಿದ್ದಾರೆ. ಅಲ್ಲದೇ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಮಾಡಬೇಕಾದ ಕರ್ತವ್ಯದತ್ತ ಚಿತ್ತ ಹರಿಸಿದ್ದಾಗಿ ಈ ಮಹಿಳಾ ಪೈಲೆಟ್ ಗಳು ಹೇಳಿದ್ದಾರೆ.

Winning smile 💯 So proud of them, Captain Maryam Masood and First Officer Shumaila Mazhar after their first flight to Gilgit. 👩‍✈️👩‍✈️ 🇵🇰 pic.twitter.com/Xs1Uz0Whr0

— Nazia Memon (@NaziaMemon01)
click me!