
ಬೆಂಗಳೂರು (ಆ.25): ಕನ್ನಡದ ಹಾಸ್ಯ ನಟ,ಬಿಜೆಪಿಯ ಸಕ್ರಿಯ ಕಾರ್ಯಕರ್ತ ಬುಲೆಟ್ ಪ್ರಕಾಶ್ ರಾಂಗ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಮೀನಿನ ಊಟ ಮಾಡಿ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದರು. ಇದಕ್ಕೆ ಭಾರೀ ಟೀಕೆಗಳೇ ವ್ಯಕ್ತವಾಗಿವೆ. ನಂತರ ಸಿಎಂ ತಮ್ಮ ನಡೆಯ ಬಗ್ಗೆ ಸ್ಪಷ್ಟನೆ ಕೂಡಾ ಕೊಟ್ಟಿದ್ದಾರೆ. ಈಗ ನಟ ಬುಲೆಟ್ ಪ್ರಕಾಶ್ ಕೂಡ ಸಿಎಂ ಮಾತಿಗೆ ಸಿಎಂ ನಡೆಗೆ ಕಠುವಾಗಿಯೇ ಟೀಕಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ. ಈ ಕಾಲದಲ್ಲಿ ಹಾಲು ಕುಡಿಯೋ ಮಕ್ಕಳೇ ಬದುಕೋದಿಲ್ಲ. ಇನ್ನು ವಿಷ ಕುಡಿಯೋ ಮಕ್ಕಳು ಬದುಕ್ತಾವಾ? ಮೀನು ತಿಂದು ಧರ್ಮ ಸ್ಥಳಕ್ಕೆ ಹೋಗ್ತೀರಿ. ನೀವೂ ಮಾಡಿದ್ದು ಸರೀನಾ? ಜನರ ಹಾದಿ ತಪ್ಪಿಸ್ತಿರಾ ನೀವು. ಅಲ್ಲದೆ ಸಮರ್ಥನೇ ಬೇರೆ. ಬೇಡರ ಕಣ್ಣಪ್ಪ ಜಿಂಕೆ ಮಾಂಸವನ್ನ ನೈವೆದ್ಯಕ್ಕೆ ಇಟ್ಟು ಕಣ್ಣು ಕೊಟ್ಟ ಅಂತೆಲ್ಲಾ ಹೇಳುವ ನೀವೂ ಕಣ್ಣು ಕೊಡಿ ನೋಡೋಣ ಎಂದು ಬುಲೆಟ್ ಪ್ರಕಾಶ್ ತಮ್ಮದೇ ಕಾಮಿಡಿ ಶೈಲಿಯಲ್ಲಿ ಟೀಕಾಪ್ರಹಾರ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.