ಪ್ರಾಣಿವಧಾ ನಿಷೇಧ ಪಟ್ಟಿಯಿಂದ ಎಮ್ಮೆಯನ್ನು ಕೈಬಿಟ್ಟ ಕೇಂದ್ರ ಪರಿಸರ ಸಚಿವಾಲಯ

By Suvarna Web DeskFirst Published May 29, 2017, 9:31 PM IST
Highlights

ಗೋಹತ್ಯೆ ಮಾರಾಟ ನಿಷೇಧದ ಬಗ್ಗೆ ಕೆಲವೆಡೆ ಪ್ರತಿಭಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಮ್ಮೆಯನ್ನು ಪ್ರಾಣಿ ವಧಾ ನಿಷೇಧ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿದೆ.  

ನವದೆಹಲಿ (ಮೇ.29): ಗೋಹತ್ಯೆ ಮಾರಾಟ ನಿಷೇಧದ ಬಗ್ಗೆ ಕೆಲವೆಡೆ ಪ್ರತಿಭಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಮ್ಮೆಯನ್ನು ಪ್ರಾಣಿ ವಧಾ ನಿಷೇಧ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿದೆ.  

ಗೋ ಮಾರಾಟ/ಹತ್ಯೆಗೆ ಸಂಬಂಧಿಸಿದಂತೆ ನಾವು ಹೊರಡಿಸಿರುವ ಸುತ್ತೋಲೆಗೆ ಸಾಕಷ್ಟು ಪರ ವಿರೋಧಗಳು ಬರುತ್ತಿವೆ. ನಾವಿದರ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದು ಪರಿಸರ ಸಚಿವಾಲಯದ ಕಾರ್ಯದರ್ಶಿ ಎ.ಎನ್ ಜಾ ಹೇಳಿದ್ದಾರೆ.  

ಗೋಮಾಂಸ ನಿಷೇಧ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆಯಾಗುತ್ತಿದೆ.  ಇಂದು ಬೆಳಿಗ್ಗೆ ಸಾರ್ವಜನಿಕವಾಗಿಯೇ 18 ತಿಂಗಳ ಎಮ್ಮೆ ಕರುವೊಂದನ್ನು ಹತ್ಯೆಗೈದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಶು ಮಾರುಕಟ್ಟೆಯಲ್ಲಿ ಹತ್ಯೆ ಉದ್ದೇಶದಿಂದ ಪ್ರಾಣಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಷೇಧ ಪಟ್ಟಿಯಲ್ಲಿ ಎಮ್ಮೆ ಕೂಡಾ ಇತ್ತು. ಅದನ್ನು ಈಗ ಕೈಬಿಡಲಾಗಿದೆ.

click me!