
2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಸರ್ಕಾರದ ಬಜೆಟ್ ಮಂಡಿಸಿದೆ. ರೈತರು, ಗ್ರಾಮೀಣ ಪ್ರದೇಶದ ಜನರು, ರೈಲ್ವೇ ಅಭಿವೃದ್ದಿ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಕಂಡುಬರುತ್ತಿದೆ. ಹಾಲಿ ಬಜೆಟ್ ಯಾರಿಗೆ ಲಾಭ ಹಾಗೆಯೇ ಯಾರಿಗೆ ನಷ್ಟ ಎನ್ನುವುದನ್ನು ನೋಡುವುದಾದರೆ,
ಲಾಭ:
ರೈತರಿಗೆ: ನಾನಾ ಕಾರಣಗಳಿಂದ ರೈತರು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ, ಮೀನುಗಾರಿಕೆ ಯೋಜನೆಗಳಿಗೆ, ಸೋಲಾರ್ ಪಂಪ್'ಸೆಟ್ ಬಳಸಲು ಉತ್ತೇಜನ ನೀಡುವಂತ ಯೋಜನೆಗಳಿಗೆ ಈ ಬಾರಿ ಒತ್ತು ನೀಡುವ ಮೂಲಕ ರೈತರಿಗೆ ಅನುಕೂಲಕರವೆನಿಸಿದೆ.
ಆರೋಗ್ಯ ಕ್ಷೇತ್ರಕ್ಕೆ: ಸರ್ಕಾರವು ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೆ ತರುವ ಮೂಲಕ 50 ಕೋಟಿ ಜನರಿಗೆ ಉಪಯುಕ್ತವಾಗಲಿದೆ ಎಂದು ಸರ್ಕಾರ ಹೇಳಿದೆ.
ಟ್ರಾನ್ಸ್'ಫೋರ್ಟ್ ಕಂಪನಿಗಳಿಗೆ: ಮೂಲಭೂತ ಸೌಕರ್ಯಗಳ ಉತ್ತೇಜನ ಸರ್ಕಾರದ ಮೂಲ ಆಧ್ಯತೆಯಾಗಿದ್ದು, ಸರ್ಕಾರ ರಸ್ತೆ ಹಾಗೂ ರೈಲ್ವೇ ಮಾರ್ಗವನ್ನು ತ್ವರಿತಗತಿಯಲ್ಲಿ ಉನ್ನತೀಕರಿಸುವುದಾಗಿ ಜೇಟ್ಲಿ ತಿಳಿಸಿದ್ದಾರೆ.
* ಆನ್'ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್
* ಸೋಲಾರ್ ಘಟಕದಲ್ಲಿ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್
* ರಕ್ಷಣಾ ಸೇವೆಗಳ ಗುಂಪು ವಿಮೆ
* ಗೃಹ ಬಳಕೆಯ RO ಮೆಂಬ್ರೇನ್ ವಸ್ತುಗಳು
ದುಬಾರಿ:
* ಆ್ಯಪಲ್-ಸ್ಯಾಮ್ಸಸಂಗ್ ಮೊಬೈಲ್'ಗಳು ದುಬಾರಿ
* ತಂಬಾಕು ಉತ್ಫನ್ನಗಳು
* ಅಲ್ಯೂಮೀನಿಯಂ ಅದಿರು
* ಬೆಳ್ಳಿ ನಾಣ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.