ಮಹಿಳಾ ಉದ್ಯೋಗಿಗಳ ಸಂಬಳ ಏರಿಕೆ – ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ

By Suvarna Web DeskFirst Published Feb 1, 2018, 3:43 PM IST
Highlights

ಇಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್’ನಲ್ಲಿ  ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ನವದೆಹಲಿ : ಇಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್’ನಲ್ಲಿ  ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆಯರ ಟೇಕ್ ಹೋಮ್ ಸಂಬಳವನ್ನು ಏರಿಕೆ ಮಾಡಿ, ಘೋಷಣೆ ಮಾಡಿದ್ದಾರೆ.

ಮಹಿಳಾ ಉದ್ಯೋಗಿಗಳ ಹೆರಿಗೆ ರಜೆಯನ್ನು 26 ವಾರಗಳಿಗೆ ಏರಿಕೆ ಮಾಡಲಾಗಿದೆ.

ಮಹಿಳಾ ಉದ್ಯೋಗಿಗಳ ಇಪಿಎಫ್ ಕಡಿತದ ಕೊಡುಗೆಯ ಪ್ರಮಾಣವನ್ನು ಶೇ.12ರಿಂದ  ಶೇ.8ಕ್ಕೆ ಇಳಿದಿದೆ.

ಸರ್ಕಾರ ಇಪಿಎಫ್’ಗೆ ಶೇ.12ರಷ್ಟು ಪ್ರಮಾಣವನ್ನು ಭರಿಸುತ್ತದೆ.  ಸಾವಯವ ಕೃಷಿ ಮಾಡಲು ಮಹಿಳೆಯರಿಗೆ ಉತ್ತೇಜನ ನೀಡಲಾಗುತ್ತದೆ.

ಮಹಿಳಾ ಸಂಘಗಳಿಗೆ ನೀಡುವ ಲೋನ್ ಪ್ರಮಾಣವನ್ನು 2019ರ ವೇಳೆ 75000ಕ್ಕೆ ಏರಿಕೆ ಮಾಡುವ ಬಗ್ಗೆಯೂ ಬಜೆಟ್’ನಲ್ಲಿ ಘೋಷಣೆ ಮಾಡಲಾಗಿದೆ.

ಬಡತನ ರೇಖೆಗಳಿಗಿಂತ ಕಡಿಮೆ ಜೀವನ ಮಟ್ಟ ಹೊಂದಿರುವ ಮಹಿಳೆಯರಿಗೆ 8 ಕೋಟಿ ಉಚಿತ ಗ್ಯಾಸ್ ಸಂಪರ್ಕವನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.

ಸೌಭಾಗ್ಯ ಯೋಜನೆಯ ಅಡಿಯಲ್ಲಿ ಬುಡಕಟ್ಟು ಜನಾಘದ ಮಹಿಳೆಯರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.

click me!