ನನಗೆ ಸಂತೋಷ ಬೇಕು ಎಂದವನಿಗೆ ಬುದ್ಧ ಹೇಳಿದ್ದೇನು?

By Suvarna Web DeskFirst Published Sep 4, 2017, 11:26 PM IST
Highlights

ನನಗೆ ಸಂತೋಷ ಬೇಕು ಎಂದವನಿಗೆ ಬುದ್ಧ ಹೇಳಿದ್ದೇನು?

ಗೌತಮ ಬುದ್ದನನ್ನು ಕಾಣಲು ಬಹುದೂರದಿಂದ ಯಾತ್ರಿಕನೊಬ್ಬ ಬಂದ. ಧ್ಯಾನದೊಳಗೆ ಮಗ್ನನಾಗಿದ್ದ ಬುದ್ಧನ ಮುಖದಲ್ಲಿ ಮುಗುಳ್ನಗುವಿತ್ತು. ಸ್ವಲ್ಪ ಹೊತ್ತಿನಲ್ಲಿ ಆತ ಧ್ಯಾನದಿಂದ ಎಚ್ಚೆತ್ತ. ಮುಖದ ಪ್ರಫುಲ್ಲತೆ ಹಾಗೇ ಇತ್ತು. ಯಾತ್ರಿಕನಿಗೆ ಬುದ್ಧನ ಪ್ರಶಾಂತ ಮುಖ, ಮುಗುಳ್ನಗೆ ಬಗ್ಗೆ ಸವಾಲಾಗಿ ಕಂಡಿತು. ಆತ ಬುದ್ಧನಲ್ಲಿ ಹೇಳಿದ, ‘ ನನಗೆ ಸಂತೋಷ

ಬೇಕು’ ಬುದ್ಧ ಮುಗುಳ್ನಗುತ್ತ, ‘ ನನ್ನ ಮತ್ತು ಬೇಕು’ ಈ ಎರಡನ್ನು ತೆಗೆದುಹಾಕು. ನಿನಗೆ ಸಂತೋಷ ಸಿಗುತ್ತದೆ’ ಅಂದ. ಇಲ್ಲಿ ನಾನು, ನನ್ನ ಎನ್ನುವುದು ಅಹಂ, ಬೇಕು ಎನ್ನುವುದು ಆಸೆ. ಈ ಎರಡನ್ನು ತೊರೆದರೆ ಸಂತೋಷ ಸಿಗುತ್ತದೆ ಅನ್ನುವುದು ಬುದ್ದನ ಮಾತಿನ ಸಾರ.

 

click me!