ಮಂಗಳೂರು ಬಿಜೆಪಿಯವರಿಗೆ ಕೋಮುವಾದದ ಪ್ರಯೋಗ ಶಾಲೆ: ರಮಾನಾಥ್ ರೈ ಗುಡುಗು

Published : Sep 04, 2017, 09:36 PM ISTUpdated : Apr 11, 2018, 12:50 PM IST
ಮಂಗಳೂರು ಬಿಜೆಪಿಯವರಿಗೆ ಕೋಮುವಾದದ ಪ್ರಯೋಗ ಶಾಲೆ: ರಮಾನಾಥ್ ರೈ ಗುಡುಗು

ಸಾರಾಂಶ

ಮಂಗಳೂರಲ್ಲಿ ನಡೆದ ಹತ್ಯೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು ಸರ್ವನಾಶವಾಗಬೇಕೆಂದು ರಮಾನಾಥ್ ರೈ ಗುಡುಗಿದ್ದಾರೆ.

ಬೆಂಗಳೂರು (ಸೆ.04): ಮಂಗಳೂರಲ್ಲಿ ನಡೆದ ಹತ್ಯೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು ಸರ್ವನಾಶವಾಗಬೇಕೆಂದು ರಮಾನಾಥ್ ರೈ ಗುಡುಗಿದ್ದಾರೆ.

ಬಿಜೆಪಿಯವರು ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾರೆ. ನಮ್ಮ ಜಿಲ್ಲೆ ಬಿಜೆಪಿ ಮುಖಂಡರಿಗೆ ನಾಗ್ಪುರ ಇದ್ದಂತೆ ಎಂದ ಅವರು, ಬಿಜೆಪಿಯವರ ನಾಟಕ, ಉದ್ದೇಶಗಳು ನಡೆಯಲ್ಲ ಅಂತಾ ರೈ ಹೇಳಿದ್ದಾರೆ.  ಬಿಜೆಪಿ ಮತ್ತೇ ಬೈಕ್  ರ್ಯಾಲಿ ಮೂಲಕ ಜಲ್ಲೆಯಲ್ಲಿಯ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಮುಸ್ಲಿಂ ಅಂತಾ ತಿಳಿದು ಅದೆಷ್ಟೋ ಹಿಂದೂಗಳ ಹತ್ಯೆ ನಡೆದಿವೆ. ಅದೆಲ್ಲವೂ ನಿಯೋಜಿತ ಹತ್ಯೆಗಳೇ ಆಗಿವೆ ಎಂದಿದ್ದಾರೆ. ಬಿಜೆಪಿಯ ಬೈಕ್  ರ್ಯಾಲಿ ಕಾನೂನು ಸುವ್ಯವಸ್ಥೆಗೆ ಮತ್ತು ಸಾಮರಸ್ಯ ಕದುಡುವ ಪ್ರಯತ್ನವಾಗಿದೆ ಎಂದಿದ್ದಾರೆ. ಇದೇ 12 ರಂದು ಪಿರಂಗಿ ಪೇಟೆಯಿಂದ ಮಾನಿವರೆಗೆ ಸಾಮರಸ್ಯ ಯಾತ್ರೆ ನಡೆಸುವುದಾಗಿ ರಮಾನಾಥ್ ರೈ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇರಳದ ರಾಜಕೀಯವೇ ವಿಚಿತ್ರ: ಶಾಸಕ ರಾಜೀವ್‌ ಚಂದ್ರಶೇಖರ್‌ ಬಣ್ಣನೆ
3000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ; 400 KG ಪುಠಾಣಿ, 500 KG ಈರುಳ್ಳಿ, 300 KG ಎಣ್ಣೆ