
ಲಕ್ನೋ[ಆ.27]: ಉತ್ತರ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಅನಾಥ ಶಿಶುವನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ಚರಂಡಿಗೆಸೆದಿದ್ದ ಮಗುವನ್ನು, ಕಾಪಾಡಿದ ಪೊಲೀಸ್ ಸಿಬ್ಬಂದಿಯ ಈ ಮಾನವೀಯ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಬದಾಯೂನ್ ಪೊಲೀಸ್ ತಮ್ಮ ಟ್ವೀಟ್ ಖಾತೆಯಿಂದ ಟ್ವೀಟ್ ಒಂದನ್ನು ಮಾಡುತ್ತಾ ಅನಾಥ ನವಜಾತ ಶಿಶುವನ್ನು ಕಾಪಾಡಿದ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದೆ. ಟ್ವೀಟ್ ಅನ್ವಯ ಈ ನವಜಾತ ಶಿಶುವನ್ನು ಯಾರೋ ಚರಂಡಿಗೆ ಎಸೆದು ಹೋಗಿದ್ದರು. ಆದರೆ ಈ ಮಾಹಿತಿ ಪಡೆದ ಖುಷಿಪಾಲ್ ಕೂಡಲೇ ಸ್ಥಳಕ್ಕೆ ಧಾವಿಸಿ, ಶಿಶುವನ್ನು ಆಸ್ಪತ್ರೆಗೊಯ್ದಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು, ಮಗು ಅಪಾಯದಿಂದ ಪಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಗುವನ್ನು ಕಾಪಾಡಿದ ಪೊಲೀಸ್ ಅಧಿಕಾರಿಗಳ ಕುರಿತು ಮಾಡಿರುವ ಟ್ವೀಟ್ ನಲ್ಲಿ 'ದೇವದೂತರಂತೆ ಬಂದ #budaunpolice, @up100 ನಲ್ಲಿ ಸೇವೆ ಸಲ್ಲಿಸುತ್ತಿರುವ ಖುಷಿಪಾಲ್, ಚರಂಡಿಯಲ್ಲಿ ಅನಾಥ ಶಿಶುವಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ದನ್ನೆತ್ತಿ ಆಸ್ಪತ್ರೆಗೊಯ್ದಿದ್ದಾರೆ. ಸದ್ಯ ಮಗು ಅಪಾಯದಿಂದ ಪಾರಾಗಿದೆ' ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.