
ಬೆಂಗಳೂರು: ಆಟೋ ಚಾಲಕರೇ ಪ್ರಯಾಣಿಕರ ಬಳಿ ಹೆಚ್ಚು ಹಣ ಸುಲಿಗೆ ಮಾಡಿದ್ರೆ ಎಚ್ಚರ!.. ಪ್ರಯಾಣಿಕರ ಬಳಿ ಹೆಚ್ಚು ಹಣ ಕೇಳಿದರೆ ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ- ಬಾಹುಬಲಿ ಮೇಲೆ ಸಿಟ್ಟಾದಂತೆ ಜನರೂ ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು ಎಂಬರ್ಥದಲ್ಲಿ ಮಾಹಿತಿ ನೀಡಿದ್ದಾರೆ.
ಹೌದು ಇಂತಹದೊಂದು ಚಿತ್ರವನ್ನು ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲ ‘ಫೇಸ್‌ಬುಕ್', ಮತ್ತು ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಚಿತ್ರದಲ್ಲಿ ಆಟೋದ ಹಿಂಬದಿ ಪ್ರಯಾಣಿಕನಾಗಿ ಕಟ್ಟಪ್ಪ ಕುಳಿತಿದ್ದು, ಬಾಹುಬಲಿ ಆಟೋ ಚಾಲಕನಾಗಿದ್ದಾನೆ.
ಬಾಹುಬಲಿ ಪ್ರಯಾಣಿಕ ಕಟ್ಟಪ್ಪನ ಬಳಿ ಪ್ರಯಾಣಿಸಿದ ದರಕ್ಕಿಂತ ಹೆಚ್ಚು ಹಣ ಕೇಳುತ್ತಾನೆ. ಇದರಿಂದ ಕಟ್ಟಪ್ಪ ಕೋಪಗೊಳ್ಳುತ್ತಾನೆ ಎಂಬರ್ಥದಲ್ಲಿ ವಿಡಂಬನಾತ್ಮಕವಾಗಿ, ಹಾಸ್ಯದಾಟಿಯಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.