ರಾಮಲಿಂಗಾರೆಡ್ಡಿಯವರನ್ನು ಸೋಲಿಸಬೇಕೆಂದು ಪಣ ತೊಟ್ಟಿದೆಯೆ ಬಿಜೆಪಿ, ಹಾಗಾದರೆ ಸ್ಪರ್ಧಿಸುವವರು ಯಾರು ?

By Suvarna Web DeskFirst Published Mar 4, 2018, 4:20 PM IST
Highlights

ಈ ನಡುವೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರಸಂಬಂಧಿ ನಲ್ಲಾ ರೆಡ್ಡಿ ಎಂಬುವರು ಪ್ರಯತ್ನ ಆರಂಭಿಸಿದ್ದಾರೆ.

ಪ್ರಭಾವಿ ಸಚಿವ ರಾಮಲಿಂಗಾರೆಡ್ಡಿ ಈ ಬಾರಿಯೂ ಕಾಂಗ್ರೆಸ್ಸಿಂದ ಕಣಕ್ಕೆ ಇಳಿಯುವುದು ಖಚಿತ. ಅವರ ವಿರುದ್ಧ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು.

ಆದರೆ, ಇದು ಸಂಪೂರ್ಣ ಸುಳ್ಳು ಎನ್ನುವುದಕ್ಕೂ ಆಗುವುದಿಲ್ಲ. ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಸಹ ವಕ್ತಾರ ವಿವೇಕ್ ರೆಡ್ಡಿ ಪ್ರಮುಖರು. ಜತೆಗೆ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆಗಿರುವ, ಯಡಿಯೂರಪ್ಪ ಆಪ್ತ ಜಯದೇವ್ ಕೂಡ ನಿರೀಕ್ಷೆಯಲ್ಲಿದ್ದಾರೆ. ಇವರಿಬ್ಬರೂ ರಾಮಲಿಂಗಾರೆಡ್ಡಿ ಅವರನ್ನು ಎದುರಿಸುವುದು ಕಷ್ಟ ಎಂಬ ಮಾತು ಈಗಲೇ ಚಾಲ್ತಿಯಲ್ಲಿದೆ. ಈ ನಡುವೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಸಂಬಂಧಿ ನಲ್ಲಾ ರೆಡ್ಡಿ ಎಂಬುವರು ಪ್ರಯತ್ನ ಆರಂಭಿಸಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವ ಅವರನ್ನು ಕಣಕ್ಕಿಳಿಸಿದರೆ ರಾಮಲಿಂಗಾರೆಡ್ಡಿ ಅವರಿಗೆ ಪ್ರಬಲ ಪೈಪೋಟಿ ನೀಡಬಹುದು ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಬಿಬಿಎಂಪಿ ಸದಸ್ಯ ದೇವದಾಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ.

click me!