ರಾಜ್ಯದ ಈ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಗೆದ್ದಿರುವುದು ಕೇವಲ ಇಬ್ಬರು ಮಹಿಳೆಯರು ಮಾತ್ರ

By Suvarna Web Desk  |  First Published Mar 4, 2018, 4:04 PM IST

1994ರಲ್ಲಿ ಮುದ್ದೇಬಿಹಾಳ ಕ್ಷೇತ್ರದಿಂದ ವಿಮಲಾಬಾಯಿ ದೇಶಮುಖಅವರು ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದುಬಂದಿದ್ದರು.


ವಿಜಯಪುರ ಜಿಲ್ಲೆಯಿಂದ ಈವರೆಗೆ ಕೇವಲ ಇಬ್ಬರು ಮಹಿಳೆಯರು ಮಾತ್ರ ವಿಧಾನಸಭೆ ಪ್ರವೇಶಿಸಿದ್ದಾರೆ. 1957ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಸವನಬಾಗೇವಾಡಿ ವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಶೀಲಾ ಬಾಯಿ ಹೀರಾಚಂದ ಆಯ್ಕೆ ಯಾಗಿದ್ದರು. 1962ರಲ್ಲಿ ಮತ್ತೊಮ್ಮೆ ಅವರು ಆಯ್ಕೆಯಾಗಿದ್ದರು.

1994ರಲ್ಲಿ ಮುದ್ದೇಬಿಹಾಳ ಕ್ಷೇತ್ರದಿಂದ ವಿಮಲಾಬಾಯಿ ದೇಶಮುಖ ಅವರು ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದರು. ಜೆ.ಎಚ್. ಪಟೇಲ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಸಚಿವೆಯಾಗಿದ್ದರು. 1999, 2004 ಹಾಗೂ 2008ರಲ್ಲಿ ಮರು ಆಯ್ಕೆ ಬಯಸಿ ದೇಶಮುಖ ಅವರು ಚುನಾವಣೆಗೆ ಸ್ಪರ್ಧಿಸಿದ್ದರಾದರೂ, ಗೆಲುವು ಅವರಿಗೆ ಒಲಿಯಲಿಲ್ಲ.

Tap to resize

Latest Videos

click me!