ಬೆಂಗಳೂರು ಈಗ 3ಜಿ ಸಿಟಿ : ಬಿಎಸ್‌ವೈ ವ್ಯಂಗ್ಯ

By Suvarna Web DeskFirst Published Mar 3, 2018, 8:08 AM IST
Highlights

ಡೈನಾಮಿಕ್‌ ಸಿಟಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಬೆಂಗಳೂರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 3ಜಿ (ಗೂಂಡಾ, ಗಾರ್ಬೇಜ್‌ ಮತ್ತು ಗಾಂಜಾ) ಸಿಟಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದ್ದಾರೆ.

ಬೆಂಗಳೂರು: ಡೈನಾಮಿಕ್‌ ಸಿಟಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಬೆಂಗಳೂರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 3ಜಿ (ಗೂಂಡಾ, ಗಾರ್ಬೇಜ್‌ ಮತ್ತು ಗಾಂಜಾ) ಸಿಟಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಯಡಿಯೂರಪ್ಪ ಅವರು, ಒಂದು ಕಾಲದಲ್ಲಿ ಬೆಂಗಳೂರು ಡೈನಾಮಿಕ್‌ ಸಿಟಿ ಎಂಬ ಹೆಸರು ಗಳಿಸಿತ್ತು. ಅದೀಗ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸುರಕ್ಷಿತವಲ್ಲದ ನಗರವಾಗಿ ಮಾರ್ಪಡುತ್ತಿದೆ.

ಜಗತ್ತು 5ಜಿ ತಂತ್ರಜ್ಞಾನದತ್ತ ಹೆಜ್ಜೆ ಹಾಕುತ್ತಿರುವ ವೇಳೆ ಬೆಂಗಳೂರು ಹಿಮ್ಮುಖವಾಗಿ 3ಜಿಯತ್ತ (3ಜಿ ಅಂದರೆ ಗೂಂಡಾ, ಗಾರ್ಬೇಜ್‌ ಮತ್ತು ಗಾಂಜಾದತ್ತ) ಚಲಿಸುತ್ತಿದೆ ಎಂದು ತೀಕ್ಷ$್ಣವಾಗಿ ಹೇಳಿದ್ದಾರೆ.

click me!