ಸಂಪುಟ ವಿಸ್ತರಣೆಯಾದ್ರೂ ಕಗ್ಗಂಟಾಯ್ತು ಖಾತೆ ಹಂಚಿಕೆ : ದಿಲ್ಲಿಯತ್ತ ಸಿಎಂ

By Web DeskFirst Published Aug 22, 2019, 12:21 PM IST
Highlights

ಕರ್ನಾಟದಲ್ಲಿ ಸರ್ಕಾರ ರಚನೆಯಾಗಿ ಒಂದು ತಿಂಗಳ ಬಳಿಕ ಸಂಪುಟ ವಿಸ್ತರಣೆಯಾಗಿದೆ. ಆದರೆ ಇದೀಗ ಸಚಿವ ಸ್ಥಾನದ ಹಂಚಿಕೆ ಕಗ್ಗಂಟಾಗಿದೆ. ಈ ನಿಟ್ಟಿನಲ್ಲಿ ಸಿಎಂ ದಿಢೀರ್ ದಿಲ್ಲಿಯತ್ತ ಹೊರಟಿದ್ದಾರೆ. 

ಬೆಂಗಳೂರು [ ಆ.22]: ಬಿಜೆಪಿ ಸರ್ಕಾರದ ಮೊದಲ ಹಂತದ ಸಂಪುಟ ವಿಸ್ತರಣೆ ನಡೆದು ಎರಡು ದಿನವಾದರೂ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ನಡೆದಿಲ್ಲ. ಬಹುತೇಕ ಗುರುವಾರ ಖಾತೆಗಳು ಹಂಚಿಕೆಯಾಗಲಿವೆ ಎಂದು ಹೇಳಿದ್ದು, ಆದರೆ ಇಂದೂ ಖಾತೆ ಹಂಚಿಕೆ ಡೌಟ್ ಆಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 17 ನೂತನ ಸಚಿವರಿಗೆ ಯಾವ ಯಾವ ಖಾತೆ ನೀಡಬಹುದು ಎಂಬುದರ ಬಗ್ಗೆ ಪಟ್ಟಿ ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಅನರ್ಹ ಶಾಸಕರಿಗೆ ಖಾತೆ ಹಂಚಿಕೆ ಕಗ್ಗಂಟಾಗಿದ್ದು, ಈ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ  ಚರ್ಚೆ ನಡೆಸಲು ಮುಂದಾಗಿದ್ದಾರೆ. 

ಹೊಸ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?

ಗುರುವಾರ ಸಂಜೆ ಸಿಎಂ ಯಡಿಯೂರಪ್ಪ ದಿಲ್ಲಿ ತೆರಳಿ ಖಾತೆ ಹಂಚಿಕೆ ಬಗ್ಗೆ ಬಿಜೆಪಿ ಹೈ ಕಮಾಂಡ್ ಜೊತೆಗೆ ಚರ್ಚೆ ಮಾಡಲಿದ್ದಾರೆ. ಬಿಜೆಪಿ ‌ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಜೊತೆ ಚರ್ಚೆ ನಡೆಸಿ, ಖಾತೆ ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. 

ಕೈ ತೊರೆದ ಅತೃಪ್ತ ನಾಯಕನಿಗೆ BSY ಬಂಪರ್ ಆಫರ್ ?

ಈಗಾಗಲೇ ನರ್ಹ ಶಾಸಕರನೇಕರಿಂದ ವಿವಿಧ ಖಾತೆಗಳಿಗೆ ಬೇಡಿಕೆ ಬಂದಿದ್ದು, ಈ ನಿಟ್ಟಿನಲ್ಲಿ ಬಿಎಸ್ ವೈ ದಿಲ್ಲಿಗೆ ತೆರಳಲು ಮುಂದಾಗಿದ್ದಾರೆ. 
ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜೊತೆ ಮಾತನಾಡಿ ಹಸಿರು ನಿಶಾನೆ ತೋರಿದ ತಕ್ಷಣ ಯಡಿಯೂರಪ್ಪ ಅವರು ಖಾತೆಗಳ ಹಂಚಿಕೆಯ ಪಟ್ಟಿಯನ್ನು ರಾಜ್ಯಪಾಲರ ಅನುಮೋದನೆಗೆ ರವಾನಿಸಲಿದ್ದಾರೆ ಎನ್ನಲಾಗಿದೆ.

click me!