ಕೊರೋನಾ ಹತೋಟಿಗೆ CM ಮಹತ್ವದ ನಿರ್ಧಾರ, EMIಗೆ ವಿನಾಯಿತಿ ನೀಡಿದ ಸರ್ಕಾರ; ಮಾ.27ರ ಟಾಪ್ 10 ಸುದ್ದಿ!

By Chethan KumarFirst Published Mar 27, 2020, 6:43 PM IST
Highlights

ರಾಜ್ಯದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ತಡೆಯಲು ಹಾಗೂ ಸೋಂಕಿತರ ಚಿಕಿತ್ಸೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದೇಶದಲ್ಲಿ ಕೊರೋನಾ ಸೋಂಕಿತ ಸಂಖ್ಯೆ 700 ದಾಟಿದೆ. ಇನ್ನು ಕರ್ನಾಟಕದಲ್ಲಿ 3ನೇ ಬಲಿಯಾಗಿದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟಿಗರು, ಸೆಲೆಬ್ರೆಟಿಗಳು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಣ ನೀಡಿದ್ದಾರೆ. ಇತ್ತ ಲಾಕ್‌ಡೌನ್‌ನಿಂದ ಜನರ ಆದಾಯಕ್ಕೆ ಕತ್ತರಿ ಬಿದ್ದಿದೆ. ಹೀಗಾಗಿ ಎಲ್ಲಾ ಲೋನ್ ಮರುಪಾವತಿ 3 ತಿಂಗಳು ಮೂಂದೂಡಲಾಗಿದೆ. ಭಾರತ ಲಾಕ್‌ಡೌನ್ 3ನೇ ದಿನವಾದ ಮಾರ್ಚ್ 27ರ ಟಾಪ್ 10 ಸುದ್ದಿ ಇಲ್ಲಿವೆ.

BSY ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರ ಪ್ರಕಟಿಸಿದ CM!

ಕೊರೋನಾ ವೈರಸ್‌ಗೆ ರಾಜ್ಯದಲ್ಲಿ 3ನೇ ಬಲಿಯಾಗಿದೆ. ವೈರಸ್ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ ಜನರು ಗಂಬೀರವಾಗಿ ತೆಗದುಕೊಂಡಿಲ್ಲ. ಇದೀಗ ವೈರಸ್ ಹರಡದಂತೆ ಹಾಗೂ ಸೋಂಕಿತರ ಚಿಕಿತ್ಸೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ತೆಗೆದುಕೊಂಡ ತೀರ್ಮಾನಗಳ ಕುರಿತ ವಿವರ ಇಲ್ಲಿದೆ. 

ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 727 ಕ್ಕೆ ಏರಿಕೆ...

ದೇಶದಲ್ಲಿ ಏಕಾಏಕಿ ಕೊರೋನಾ ಸೋಂಕಿತರ ಸಂಖ್ಯೆ, ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 727 ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಒಟ್ಟು 5 ಲಕ್ಷ 10 ಸಾವಿರ ಮಂದಿ ಕೊರೋನಾ ಸೋಂಕಿತರಾಗಿದ್ದಾರೆ.  ನಿನ್ನೆ ಇಟಲಿಯಲ್ಲಿ 712, ಸ್ಪೇನ್‌ನಲ್ಲಿ 718 ಮಂದಿ ಸಾವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ಕೊರೋನಾಗೆ 3ನೇ ಬಲಿ, ತುಮಕೂರಿನ ವ್ಯಕ್ತಿ ಸಾವು; ಅನುಮಾನ ಸೃಷ್ಟಿಸಿದ ಜಿಲ್ಲಾಡಳಿತ ನಡೆ...

 ಕರ್ನಾಟಕದಲ್ಲಿ ಮುಂದುವರಿದ ಕೊರೋನಾ ಸಾವಿನ ಸರಣಿ ಮುಂದುವರಿದಿದ್ದು, ಸಂಖ್ಯೆ 3ಕ್ಕೇರಿದೆ. ತುಮಕೂರಿನಲ್ಲಿ ಕೊರೋನಾಗೆ 65 ವರ್ಷದ ವ್ಯಕ್ತಿ ಸಾವನ್ನಪ್ಪಿರುವುದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಲಬುರಗಿ, ಚಿಕ್ಕಬಳ್ಳಾಪುರದ ಬಳಿಕ ರಾಜ್ಯದಲ್ಲಿ  ಇದು ಮೂರನೇ ಸಾವಾಗಿದೆ. ಇಲ್ಲಿದೆ ವ್ಯಕ್ತಿ ಮತ್ತು ಆತನ ಟ್ರಾವೆಲ್ ಹಿಸ್ಟರಿ...

ಯುಗಾದಿ ನೆಪ ಮಾಡಿ ಬೆಂಗ್ಳೂರ್ ಬಿಟ್ಟವ್ರಿಗೆ ಹಳ್ಳೀಲಿ ತಪಾಸಣೆ ...

ಯುಗಾದಿ ನೆಪವೊಡ್ಡಿ ಪಟ್ಟಣಗಳಿಂದ ಸಿರಿಗೆರೆ ದೌಡಾಯಿಸಿದ್ದ 150 ಜನರನ್ನು ಸಿರಿಗೆರೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. 43 ಯುವಕ ಮತ್ತು ಯುವತಿಯರು ಹಬ್ಬಕ್ಕೆಂದು ನಗರಗಳಿಂದ ಆಗಮಿಸಿ ಹಳ್ಳಿಗರಿಗೆ ಆತಂಕ ತಂದಿದ್ದರು.


ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್; ಮದ್ಯ ಸಿಗದೇ ವ್ಯಕ್ತಿ ಆತ್ಮಹತ್ಯೆ!

ಸರ್ಕಾರಕ್ಕೆ ಕೊರೋನಾ ವೈರಸ್ ಹರಡದಂತೆ ತಡೆಯುವ ಚಿಂತೆ, ವೈದ್ಯರು, ನರ್ಸ್‌ಗಳಿಗೆ ಸೋಂಕಿತರನ್ನು ಗುಣಪಡಿಸುವ ಚಿಂತೆ, ಪೊಲೀಸರಿಗೆ ಜನರು ಹೊರಗೆ ಬಾರದಂತೆ ತಡೆಯುವ ಚಿಂತೆಯಾದರೆ ಇಲ್ಲೊಬ್ಬ ಕುಡುಕನಿಗೆ ಮದ್ಯದ ಚಿಂತೆ. ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್.. ಹೇಗಾದರೂ ಮಾಡಿ 21 ದಿನ ತಳ್ಳಿದರೆ ಕಂಠಪೂರ್ತಿ ಕುಡಿಯಬಹುದಿತ್ತು. ಆದರೆ ಆತನ ಆಲೋಚನೆ ಬೇರೆಯೇ ಆಗಿತ್ತು..

ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

ಕೊರೋನಾ ವೈರಸ್ ತಡೆಯಲು ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಲಾಗಿದೆ. ಇದು ಸರ್ಕಾರದ ಬೊಕ್ಕಸ ಅತೀ ದೊಡ್ಡ ಹೊಡೆತವಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಕೊರೋನಾ ಸೋಂಕಿತರ ಚಿಕಿತ್ಸೆ, ವೈರಸ್ ಹರಡದಂತೆ ತಡೆಯಲು ಕ್ರಮ ಹಾಗೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಕಾರ್ಯಗಳಿಗೆ ಕೋಟಿ ಕೋಟಿ ಹಣ ಖರ್ಚಾಗಲಿದೆ. ಇದೀಗ ಕೊರೋನಾ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಹಲವರು ಕೈಜೋಡಿಸಿದ್ದಾರೆ. ಪಿವಿ ಸಿಂಧು ಬೆನ್ನಲ್ಲೇ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹಾಯ ಹಸ್ತ ಚಾಚಿದ್ದಾರೆ.


ಅಪ್ಪ, ಅಮ್ಮನ ಮಾತು ನಿರಾಕರಿಸಿ ಚಿತ್ರರಂಗಕ್ಕೆ ಬಂದೆ: ಸ್ಫೂರ್ತಿ

ಕಿರುಣ್‌ ಸೂರ್ಯ ನಿರ್ದೇಶನದ, ಕಾಶಿನಾಥ್‌ ಪುತ್ರ ಅಭಿಮನ್ಯು ನಟನೆಯ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ನಾಯಕಿ ಎಂಟ್ರಿ ಕೊಟ್ಟಿರುವ ಸ್ಫೂರ್ತಿ ಜತೆ ಮಾತುಕತೆ.


ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?

ದೇಶ ಲಾಕ್‌ಡೌನ್ ಸಂದರ್ಭದಲ್ಲಿ ಈಗಿನ ಅಗತ್ಯವನ್ನು ಮನಗಂಡು ಮುಂದಿನ ಮೂರು ತಿಂಗಳ ಕಾಲ ಲೋನ್ ಹಿಂಪಾತಿ ಮೇಲೆ ರಿಯಾಯಿತಿ ನೀಡುವಂತೆ ಆರ್‌ಬಿಐ ತಿಳಿಸಿದೆ. ಆರ್‌ಬಿಐ ಇಎಂಐ ಪಾವತಿಗೆ ವಿನಾಯಿತಿ ಏನೋ ಕೊಟ್ಟಿದೆ. ಆದರೆ ಈ ಬಗ್ಗೆ ಇನ್ನೂ ಜನರಲ್ಲಿ ಗೊಂದಲ ಬಾಕಿ ಇದೆ. ಜನರಲ್ಲಿ ಮೂಡುವ ಸಾಮಾನ್ಯ ಗೊಂದಲಗಳಿಗೆ ಇಲ್ಲಿವೆ ಉತ್ತರ.

ಮಾರಾಟ ಮಾಡುವಂತಿಲ್ಲ,ಗಡುವು ವಿಸ್ತರಿಸಿಲ್ಲ ; ವಾಹನ ಡೀಲರ್ಸ್‌ಗೆ 12 ಸಾವಿರ ಕೋಟಿ ನಷ್ಟ!

ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಭಾರತದ ಲಾಕ್‌ಡೌನ್ 3ನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ಸೇವೆಗಳು ಮಾತ್ರ ಲಭ್ಯವಿದೆ. ಇನ್ಯಾವ ಸೇವೆಗಳನ್ನು ನೀಡುವಂತಿಲ್ಲ. ಕೊರೋನಾ ವೈರಸ್ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. 21 ದಿನಗಳ ಲಾಕ್‌ಡೌನ್‌‍ನಿಂದ ವಾಹನ ಡೀಲರ್ ಪರದಾಡುವಂತಾಗಿದೆ. ಕಾರಣ BS4 ಎಂಜಿನ್ ವಾಹನ ಗಡುವು ಅಂತ್ಯಗೊಳ್ಳುತ್ತಿದೆ. ಇತ್ತ ಕೋರ್ಟ್ ಗಡುವು ವಿಸ್ತರಿಸಲು ಒಪ್ಪಿಲ್ಲ. ಹೀಗಾಗಿ  ಒಟ್ಟು 12 ಸಾವಿರ ಕೋಟಿ ನಷ್ಟವಾಗಿದೆ.

ಯುಗಾದಿ ನಂತ್ರ ದಿಢೀರ್ ಹೆಚ್ಚಿದ ಶಂಕಿತರ ಸಂಖ್ಯೆ: ಮೈಸೂರಿನಲ್ಲಿ 1122 ಮಂದಿ ಮೇಲೆ ನಿಗಾ

ಕೊರೋನಾ ವೈರಾಣು ಕಾಯಿಲೆ (ಕೋವಿಡ್‌-19) ಸಂಬಂಧ ಮೈಸೂರು ಜಿಲ್ಲೆಯಲ್ಲಿ ಈವರೆಗೂ ಒಟ್ಟು 1122 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

click me!