ಸಿಂಧಿಯಾ- ರಾಹುಲ್ ಮುನಿಸು; ಹೂಡಾಗೆ ಮಂಡಿಯೂರಿದ ‘ಕೈ​’ಕಮಾಂಡ್‌

By Kannadaprabha NewsFirst Published Mar 27, 2020, 12:51 PM IST
Highlights

ಸತತ ಸೋಲಿನ ಮೇಲೆ ಸೋಲು ಕಾಣುತ್ತಿರುವ ‘ಕೈ’ ಕಮಾಂಡ್‌ಗೆ ರಾಜ್ಯ ನಾಯಕರು ಬೆದರಿಕೆ ಹಾಕಿ ಮಂಡಿಯೂರಿಸುತ್ತಿದ್ದಾರೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ತನ್ನ ಮಗ ದೀಪಿಂದರ್‌ನನ್ನು ರಾಜ್ಯಸಭೆಗೆ ಕಳಿಸದೇ ಇದ್ದರೆ ಪರಿಣಾಮ ಅನುಭವಿಸಿ ಎಂದು ಹೂಡಾ ಟೆನ್‌ ಜನಪಥ್‌ಗೆ ಸಂದೇಶ ಕಳುಹಿಸಿ​ದಾರೆ. 

ಸತತ ಸೋಲಿನ ಮೇಲೆ ಸೋಲು ಕಾಣುತ್ತಿರುವ ‘ಕೈ’ ಕಮಾಂಡ್‌ಗೆ ರಾಜ್ಯ ನಾಯಕರು ಬೆದರಿಕೆ ಹಾಕಿ ಮಂಡಿಯೂರಿಸುತ್ತಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ರಾಹುಲ್  ಜೊತೆ ಮುನಿಸಿಕೊಂಡು ದೂರ ಹೋದ ನಂತರ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಸುಮ್ಮನಿರುತ್ತಾರೆಯೇ?

ತನ್ನ ಮಗ ದೀಪಿಂದರ್‌ನನ್ನು ರಾಜ್ಯಸಭೆಗೆ ಕಳಿಸದೇ ಇದ್ದರೆ ಪರಿಣಾಮ ಅನುಭವಿಸಿ ಎಂದು ಹೂಡಾ ಟೆನ್‌ ಜನಪಥ್‌ಗೆ ಸಂದೇಶ ಕಳುಹಿಸಿ​ದಾರೆ. ಇನ್ನೊಂದು ತಲೆನೋವೇ ಬೇಡ ಎಂದು ಸೋನಿಯಾ, ಹೂಡಾ ಹೇಳಿದಂಗೆ ಆಗಲಿ ಎಂದಿದ್ದಾರೆ. ಮಾಂಡಲಿಕರೇ ಹಾಗೆ, ಚಕ್ರವರ್ತಿ ಸ್ವಲ್ಪ ದುರ್ಬಲ ಎಂದು ಕಂಡರೆ ಸಾಕು ಬಾಲ ಬಿಚ್ಚುವುದೇ ನೋಡಿ.

ರಾಜಸ್ಥಾನಕ್ಕೆ ಕೈ ಹಾಕಲು ಶಾ ನಕಾರ; ಕಮಲ ಅರಳಿಸೋದು ಕಷ್ಟ ಕಷ್ಟ!

ಲಕ್ಷ ಕೋಟಿಯ ಸಿಂಧಿಯಾ ಖಾಂದಾನ್‌

ತುರ್ತು ಪರಿಸ್ಥಿತಿ ವೇಳೆ ತನ್ನ ತಾಯಿ ವಿಜಯರಾಜೇ ಸಿಂಧಿಯಾರನ್ನು ಇಂದಿರಾ ಗಾಂಧಿ ಜೈಲಿಗೆ ಅಟ್ಟಿದಾಗ ಹೆದರಿ ನೇಪಾಳಕ್ಕೆ ಓಡಿದ ಪುತ್ರ ಮಾಧವರಾವ್‌ ಸಿಂಧಿಯಾ ನಂತರ ಜನಸಂಘಕ್ಕೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಸೇರಿದರು. ಈಗ ಪುತ್ರ ಜ್ಯೋತಿರಾದಿತ್ಯ ಕೂಡ ಅಷ್ಟೇ. ಕಷ್ಟಕಾಲದಲ್ಲಿ ಕಾಂಗ್ರೆಸ್‌ ಜೊತೆ ನಿಲ್ಲದೆ ಹಸಿರು ಕಂಡಿತು ಎಂದು ಬಿಜೆಪಿಗೆ ಹೋಗಿದ್ದಾರೆ.

ಅಂದ ಹಾಗೆ ಜ್ಯೋತಿರಾದಿತ್ಯ ಬಿಜೆಪಿಗೆ ಬಂದರೂ ಸೋದರತ್ತೆ ವಸುಂಧರಾ ಮತ್ತು ಯಶೋಧರಾ ಜೊತೆಗಿನ ವ್ಯಾಜ್ಯ ಬಗೆಹರಿಯುವ ಲಕ್ಷಣಗಳಿಲ್ಲ. ಒಂದು ಅಂದಾಜಿನ ಪ್ರಕಾರ ಗ್ವಾಲಿಯರ್‌ ಸಿಂಧಿಯಾರ ಆಸ್ತಿ ಮೌಲ್ಯವೇ ಒಂದು ಲಕ್ಷ ಕೋಟಿ ಅಂತೆ. ಗ್ವಾಲಿಯರ್‌ ಸಿಂಧಿಯಾಗಳ ಮೂಲ ಪುರುಷ ರಾಣೋಜಿ ಸಿಂಧಿಯಾ ಮಹಾರಾಷ್ಟ್ರದ ಸಾತಾರಾದವರು.

ಮಂತ್ರಿಗಳಿಗೆ ಕೊರೋ​ನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ

ಮಗನ ಭವಿಷ್ಯಕ್ಕಾಗಿ ಮಗಳ ತ್ಯಾಗ

ಪ್ರಿಯಾಂಕಾ ಗಾಂಧಿಯನ್ನು ರಾಜ್ಯಸಭೆಗೆ ಕಳಿಸಲು ಕಾಂಗ್ರೆಸ್‌ ನಾಯಕರು ನಾ ಮುಂದು ನೀ ಮುಂದು ಎನ್ನುತ್ತಿದ್ದರೂ ಕೊನೆಗೆ ಬೇಡ ಎಂದು ಗಟ್ಟಿಯಾಗಿ ಹೇಳಿದ್ದು ಅಮ್ಮ ಸೋನಿಯಾ ಗಾಂಧಿಯಂತೆ. ಒಂದು ವೇಳೆ ಪ್ರಿಯಾಂಕಾ ರಾಜ್ಯಸಭೆಗೆ ಬಂದರೆ ಅವಳೇ ಪಾರ್ಟಿ ನೇತೃತ್ವ ವಹಿಸಿಕೊಳ್ಳಲಿ, ರಾಹುಲ್ ಬೇಡ ಎಂಬ ಕೂಗು ಶುರು ಆದರೆ ಎಂಬ ಭಯ ಅಮ್ಮನಿಗೆ. ಸೋನಿಯಾ ಪ್ಲಾನ್‌ ಪ್ರಕಾರ ಮುಂದಿನ ಎಐಸಿಸಿ ಅಧಿವೇಶನದಲ್ಲಿ ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷ ಆಗಬೇಕು. ಕೊಟ್ಟಕುದುರೆಯ ಏರದ ಮಗನಿಗೋಸ್ಕರ ಮಗಳ ಪ್ರತಿಭೆಯನ್ನು ಮುಚ್ಚಿಡುವುದು ಏಕೋ ಅರ್ಥವಾಗಲೊಲ್ಲದು ಬಿಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್ (ದೆಹಲಿಯಿಂದ ಕಂಡ ರಾಜಕಾರಣ)

 

click me!