
ಬೆಂಗಳೂರು (ಸೆ.03): ಬಸವಣ್ಣ ಕೇವಲ ಕರ್ನಾಟಕ, ಮಹಾರಾಷ್ಟ್ರಕ್ಕೆ ಪ್ರಸ್ತುತ ಇಲ್ಲ ವಿಶ್ವಕ್ಕೆ ಪ್ರಸ್ತುತ ಇದ್ದಾರೆ. ಯಾವ ರೀತಿ ಬೌಧ ಧರ್ಮ ಇದೆ, ಯಾವ ರೀತಿ ಇಸ್ಲಾಂ ಧರ್ಮವಿದೆ ಕ್ರಿಶ್ಚಿಯನ್ ಧರ್ಮವಿದೆ ಆ ಒಂದು ಮಟ್ಟದಲ್ಲಿ ಬಸವಣ್ಣ ಇರಬೇಕಾಗಿತ್ತು. ನಮ್ಮಲಿರುವ ಗೊಂದಲಗಳಿಂದ 900 ವರ್ಷಗಳಿಂದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ ಎಂದು ಲಾತೂರಿನಲ್ಲಿ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಈಗ ಜನರಿಗೆ ತಿಳಿದಿದೆ ಈಗ ಪ್ರತ್ಯೇಕ ಧರ್ಮ ಆಗದಿದ್ದರೆ ಮುಂದೆ ಎಂದು ಸಾಧ್ಯವಿಲ್ಲ ಎಂದು. ಬಸವಣ್ಣನವರಿಗೆ ನಾವು ಇವತ್ತು ನ್ಯಾಯ ದೊರಕಿಸಿ ಕೊಡಬೇಕಾಗಿದೆ. ಮುಂದೆ ಬೆಂಗಳೂರಿನಲ್ಲಿ ವಿನಯ್ ಕುಲಕರ್ಣಿ, ಬಸವರಾಜ್ ಹೊರಟ್ಟಿ, ನಾವು ಸೇರಿ 25 ಲಕ್ಷ ಲಿಂಗಾಯತರು ಕೂಡಬೇಕೆಂದಿದ್ದೇವೆ. ಯಾವ ರೀತಿ ಇಸ್ಲಾಂ ಧರ್ಮಕ್ಕೆ, ಕ್ರಿಶ್ಚನ್ ಧರ್ಮಕ್ಕೆ, ಬೌಧ ಧರ್ಮಕೆ ಮಾನ್ಯತೆ ನೀಡಲಾಗಿದೆ ಅದೇ ರೀತಿ ಲಿಂಗಾಯತ ಧರ್ಮಕ್ಕೂ ಮಾನ್ಯತೆ ನೀಡಬೇಕು. ಇದು ಯಾವುದೇ ಪಕ್ಷದ ಚಳುವಳಿ ಅಲ್ಲ, ಧರ್ಮದ ಚಳುವಳಿ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಇಲ್ಲಿ ಯಾವುದೇ ಪಕ್ಷ ಇಲ್ಲ, ಇದು ಬಸವ ಪಕ್ಷ ಎಂದು ಪಾಟೀಲ್ ಹೇಳಿದ್ದಾರೆ.
ಸಿದ್ದಗಂಗಾ ಶ್ರೀಗಳ ಮಾರ್ಗದಲ್ಲೇ ಯಡಿಯೂರಪ್ಪ ಬರುತ್ತಾರೆ, ಜಗದೀಶ್ ಶೆಟ್ಟರ್ ಬರುತ್ತಾರೆ ಎಂದು ನಾವು ಆಶಿಸಿದ್ದೇವೆ. ಯಾವುದೋ ಒಂದು ಸಂದರ್ಭದಲ್ಲಿ ವೀರಶೈವ ಮಹಾಸಭ ಆಗಿದೆ. ಲಿಂಗಾಯತರಲ್ಲಿ 1951ರಿಂದ ದಾಖಲಾತಿಗಳಿವೆ. ಬಸವಣ್ಣನವರು ಜಾತಿ ಸೃಷ್ಟಿ ಮಾಡುವಷ್ಟು ಸಣ್ಣವರಲ್ಲ. ಬಸವಣ್ಣನವರು ಜಾತ್ಯಾತೀತ ಧರ್ಮ ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.