ಸಂಪುಟದಲ್ಲಿ ಸಚಿವ ಸ್ಥಾನ ನೀಡದ್ದಕ್ಕೆ ಶಿವಸೇನೆ ಅಸಮಾಧಾನ; ಪದಗ್ರಹಣ ಸಮಾರಂಭಕ್ಕೆ ಬಹಿಷ್ಕಾರ

By Suvarna Web DeskFirst Published Sep 3, 2017, 6:24 PM IST
Highlights

ಸಂಪುಟದಲ್ಲಿ ತಮ್ಮ ಸಂಸದರಿಗೆ ಸ್ಥಾನ ನೀಡದಕ್ಕೆ  ಬಿಜೆಪಿ ಮಿತ್ರಪಕ್ಷ ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದ್ದು ನೂತನ ಸಚಿವರ ಪದಗ್ರಹಣ ಸಮಾರಂಭವನ್ನು ಬಹಿಷ್ಕರಿಸಿದೆ.

ಬೆಂಗಳೂರು (ಸೆ.03): ಸಂಪುಟದಲ್ಲಿ ತಮ್ಮ ಸಂಸದರಿಗೆ ಸ್ಥಾನ ನೀಡದಕ್ಕೆ  ಬಿಜೆಪಿ ಮಿತ್ರಪಕ್ಷ ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದ್ದು ನೂತನ ಸಚಿವರ ಪದಗ್ರಹಣ ಸಮಾರಂಭವನ್ನು ಬಹಿಷ್ಕರಿಸಿದೆ.

ಪೂರ್ಣ ಪ್ರಮಾಣದ ಪುನಾರಚನೆ ಇಲ್ಲ:

ಜೆಡಿಯು ಮತ್ತು ಎಐಎಡಿಎಂಕೆ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ಗೊಂದಲ ಮುಂದುವರಿದಿದ್ದರಿಂದ ಪ್ರಧಾನಿ ಮೋದಿ ಅಂದುಕೊಂಡಂತೆ ದೊಡ್ಡ ಗಾತ್ರದ ಸಂಪುಟ ಪುನಾರಚನೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದ್ದು, ಅಕ್ಟೋಬರ್‌ ಕೊನೆಗೆ ಅಥವಾ ನವೆಂಬರ್‌ ತಿಂಗಳಲ್ಲಿ ಮತ್ತೊಮ್ಮೆ ಪುನಾರಚನೆ ಮಾಡುವ ಸಾಧ್ಯತೆಗಳಿದ್ದು, ಆಗ ರಾಜ್ಯದ ಮತ್ತೊಬ್ಬ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ಸಿಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಕನಿಷ್ಟ 20 ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅಷ್ಟೇ ಸಂಖ್ಯೆಯ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಮತ್ತು ಹಾಲಿ ಸಚಿವರ ಖಾತೆಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಮಾಡುವ ಮೂಲಕ ಸಂಪುಟಕ್ಕೆ ಹೊಸ ಲುಕ್‌ ಕೊಡಬೇಕು. ಈ ಹೊಸ ಟೀಂ ಜತೆ 2019ರ ಚುನಾವಣೆಗೆ ಸಿದ್ಧವಾಗಬೇಕು ಎಂಬ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತು ಎನ್ನಲಾಗಿದ್ದು, ಆದರೆ, ಜೆಡಿಯು ಮತ್ತು ಎಐಎಡಿಎಂಕೆ ಸದಸ್ಯರ ಸಂಪುಟ ಸೇರ್ಪಡೆ ವಿಷಯದಲ್ಲಾದ ಗೊಂದಲದಿಂದಾಗಿ ಸದ್ಯಕ್ಕೆ ಸಣ್ಣ ಪ್ರಮಾಣದ ಪುನಾರಚನೆ ಮಾಡಿ ಮುಗಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಗೊತ್ತಾಗಿದೆ.

click me!