ಬೇಡದಿದ್ದರೆ ಬಿಡಿ: ಬೀದರ್ ಬಿದರಿ ಕಲೆ ತಟ್ಟೆಯ ರಫ್ತು ತಡೆದ ಬ್ರಿಟನ್!

By Web DeskFirst Published Feb 10, 2019, 4:14 PM IST
Highlights

ಬೀದರ್ ಬಿದರಿ ಕಲೆ ತಟ್ಟೆಯ ರಫ್ತಿಗೆ ಬ್ರಿಟನ್ ತಡೆ!| ಹರಾಜು ಮೂಲಕ ತನ್ನಲ್ಲೇ ಉಳಿಸಿಕೊಳ್ಳಲು ಬ್ರಿಟನ್ ತಂತ್ರ| ರಫ್ತು ಪರವಾನಿಗೆ ಅರ್ಜಿ ವಿಲೇವಾರಿ ಮುಂದೂಡಿಕೆ

ಲಂಡನ್[ಫೆ.10]: 12ನೇ ಶತಮಾನದ ಕರ್ನಾಟಕದ ಪ್ರಸಿದ್ಧ ಬಿದರಿ ಕಲೆಯ ತಟ್ಟೆಯು ವಿದೇಶಗಳ ಪಾಲಾಗುವುದನ್ನು ತಡೆಯಲು ಬ್ರಿಟನ್ ಸರ್ಕಾರ ತಂತ್ರಗಾರಿಕೆ ಆರಂಭಿಸಿದೆ. ಬ್ರಿಟನ್ ನಲ್ಲಿ ಇದನ್ನು ಯಾರೂ ಕೊಳ್ಳದೇ ಹೋದರೆ ಈ ತಟ್ಟೆ ವಿದೇಶಿ ಖರೀದಿದಾರರ ಪಾಲಾಗುವ ಸಾಧ್ಯತೆ ಇರುವ ಕಾರಣ ಏಪ್ರಿಲ್ ವರೆಗೆ ರಫ್ತು ಪರವಾನಗಿ ಅರ್ಜಿ ವಿಲೇವಾರಿಯನ್ನು ತಡೆ ಹಿಡಿದಿದೆ. ಇದರ ಬದಲು ವಿಶ್ವದಲ್ಲೇ ಅತ್ಯಪರೂಪವಾದ ವಿಶಿಷ್ಟ ಕುಸುರಿ ಕಲೆಯನ್ನು ಹೊಂದಿದ ಈ ತಟ್ಟೆಯನ್ನು, ತನ್ನ ದೇಶದಲ್ಲೇ ಇದನ್ನು ಉಳಿಸಿಕೊಳ್ಳಲು ಬಿಡ್‌ದಾರರಿಗೆ ತಲಾಶೆ ಆರಂಭಿಸಿದೆ.

ಅನಾಮಧೇಯ ಶಿಲ್ಪಿಯಿಂದ ಕರ್ನಾಟಕದ ಬೀದರ್‌ನಲ್ಲಿ 17ನೇ ಶತಮಾನದಲ್ಲೇ ಈ ಬಿದರಿ ಕಲೆಯ ವಿಶಿಷ್ಟ ತಟ್ಟೆ (ಟ್ರೇ) ರೂಪುಗೊಂಡಿತ್ತು. ೧೮ನೇ ಶತಮಾನದಲ್ಲಿ ಲಂಡನ್‌ನಲ್ಲಿ ಕೈಗಾರಿಕಾ ಕ್ರಾಂತಿ ಆರಂಭಗೊಳ್ಳಲು ಈ ತಟ್ಟೆಯೂ ಪ್ರಮುಖ ಕಾರಣ ಎನ್ನಲಾಗಿದೆ. ಏಕೆಂದರೆ ಲೋಹಶಾಸ್ತ್ರದ ಬಗ್ಗೆ ಭಾರತೀಯರಿಗೆ ಬ್ರಿಟನ್‌ಗಿಂತ ೩೦೦ ವರ್ಷ ಮೊದಲೇ ಗೊತ್ತಿತ್ತು ಎಂಬುದು ಇದರಿಂದ ತಿಳಿದುಬರುತ್ತಿದ್ದು, ಇದರಿಂದ ಉತ್ತೇಜಿತರಾಗಿ ಬ್ರಿಟಿಷರು ಔದ್ಯಮಿಕ ಕ್ರಾಂತಿ ಆರಂಭಿಸಿದರು ಎನ್ನುತ್ತದೆ ಇತಿಹಾ

ಆದರೆ, ಮೊಟ್ಟೆಯಾಕಾರದಲ್ಲಿರುವ ಬಿದರಿ ಕಲೆಯ ತಟ್ಟೆಯು ಭಾರತದಿಂದ ಬ್ರಿಟನ್ ದೇಶಕ್ಕೆ ಹೇಗೆ ಹೋಯಿತು ಎಂಬ ಸೂಕ್ತ ದಾಖಲೆಗಳು ಲಭ್ಯವಿಲ್ಲ. ಆದರೆ ೧೯೭೪ರಲ್ಲಿ ಟಾಬಿ ಜಾಕ್ ಎಂಬ ಲಂಡನ್ ಮೂಲದ ಪ್ರಾಚ್ಯವಸ್ತು ಡೀಲರ್ ಬಳಿ ಇದು ಇತ್ತು ಎಂಬ ಮೊದಲ ಮಾಹಿತಿ ಇದೆ. ಬಳಿಕ 1978ರಿಂದ 2017ರವರೆಗೆ ಬಶೀರ್ ಮೊಹಮ್ಮದ್ ಎಂಬ ಡೀಲರ್ ಇದನ್ನು ಹೊಂದಿದ

ಇಂಥ ಐತಿಹ್ಯ ಹೊಂದಿರುವ ಇದನ್ನು ಬ್ರಿಟನ್‌ನಲ್ಲಿ ಯಾರೂ ಕೊಳ್ಳದೇ ಹೋದರೆ ವಿದೇಶೀ ಖರೀದಿದಾರರ ಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಬ್ರಿಟನ್‌ನಲ್ಲೇ ಇದಕ್ಕೆ ಯಾರಾದರೂ ಬಿಡ್‌ದಾರರು ಸಿಗಬಹುದು ಎಂಬುದು ತೆರೇಸಾ ಮೇ ಸರ್ಕಾರದ ಲೆಕ್ಕಾಚಾರ. ಒಂದು ವೇಳೆ ಇದು ಹರಾಜಾದರೆ ಸುಮಾರು ೬೯ರಿಂದ ೭೦ ಲಕ್ಷ ರುಪಾಯಿ ಆದಾಯ ಬ್ರಿಟನ್ ಸರ್ಕಾರಕ್ಕೆ ಹರಿದು ಬರಬಹುದು ಎಂದು ಹೇಳಲಾಗಿದೆ.

click me!