ಕುಸಿದ ಮೇಲ್ಸೇತುವೆ: ಅರ್ಧ ಈ ಕಡೆ , ಇನ್ನರ್ಧ ಆ ಕಡೆ!

Published : Sep 04, 2018, 05:49 PM ISTUpdated : Sep 09, 2018, 09:13 PM IST
ಕುಸಿದ ಮೇಲ್ಸೇತುವೆ: ಅರ್ಧ ಈ ಕಡೆ , ಇನ್ನರ್ಧ ಆ ಕಡೆ!

ಸಾರಾಂಶ

ಏಕಾಏಕಿ ಕುಸಿದು ಬಿದ್ದ ಮೇಲ್ಸೇತುವೆ! ಅವಶೇಷಗಳಡಿ ಹತ್ತಾರು ವಾಹನಗಳು! ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಘಟನೆ! ನಗರದ ಅತ್ಯಂತ ಹಳೆಯ ಮೇಲ್ಸೇತುವೆ! 6 ಜನರಿಗೆ ಗಂಭೀರ ಗಾಯ, ಓರ್ವ ಸಾವು

ಕೋಲ್ಕತ್ತಾ(ಸೆ.4): ದಕ್ಷಿಣ ಕೋಲ್ಕತ್ತಾದಲ್ಲಿ ಮೇಲ್ಸೇತುವೆಯೊಂದು  ಏಕಾಏಕಿ ಕುಸಿದುಬಿದ್ದಿದೆ.  ಆಲಿಪೋರ್ ನಲ್ಲಿರುವ ಈ ಸೇತುವೆ  ನಗರದ ಅತ್ಯಂತ ಹೆಚ್ಚಿನ ಸಂಚಾರ ಹೊಂದಿರುವ ಸೇತುವೆಗಳಲ್ಲಿ ಒಂದು.

ಈ ಮೇಲ್ಸುತುವೆ ರೈಲ್ವೆ ಹಳಿಯ ಮೇಲೆ ಕುಸಿದಿದ್ದು, ಅನೇಕ ವಾಹನಗಳು ಅಸವಶೇಷಗಳ ಅಡಿಯಲ್ಲಿ ಸಿಲುಕಿವೆ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. 

ಹಲವರು ಸೇತುವೆಯ ಅವಶೇಷಗಳಡಿ ಕುಸಿದಿರುವ ಶಂಕೆ ಇದೆ. ದುರಂತ ನಡೆದ ಸ್ಥಳ ನಿರ್ಮಾಣ ಹಂತದ ಕಟ್ಟಡಗಳಿಂದ ಕೂಡಿದೆ. ಸದ್ಯ 6 ಜನಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದಾಗ ಓರ್ವ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

 

ಇನ್ನು ಸುದ್ದಿ ತಿಳಿಯುತ್ತಿದ್ದಂತೇ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ, ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಲಾಡ್ಜ್‌ವೊಂದರಲ್ಲಿ ಅಪ್ರಾಪ್ತೆ ಮೇಲಿನ ಸ್ವಾಮೀಜಿ ರೇ*ಪ್‌ ಸಾಬೀತು: ಇಂದು ಶಿಕ್ಷೆ ಪ್ರಕಟ
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಕೋರ್ಟ್‌ ಆದೇಶ, ಏನಿದು ಪ್ರಕರಣ?