‘ಪಪ್ಪು’ಅನ್ನೋರಿಗೆ ಉಪ್ಪು ತಿನ್ನಿಸಬೇಕಾದ್ರೆ ರಾಹುಲ್ ‘ಇವರ’ ಮಾತು ಕೇಳ್ಬೇಕು!

By Web DeskFirst Published Sep 4, 2018, 5:21 PM IST
Highlights

ರಾಜಕೀಯವಾಗಿ ಇನ್ನೂ ಪಕ್ವಗೊಳ್ಳಬೇಕಿದೆ ರಾಹುಲ್! ರಾಹುಲ್ ಅಪ್ರಬುದ್ಧತೆಗೆ ಇವೆ ನೂರಾರು ಪುರಾವೆ! ಕಣ್ಸನ್ನೆ ಬಿಟ್ಟು ಗಂಭೀರ ರಾಜಕಾರಣದತ್ತ ಚಿತ್ತ ಯಾವಾಗ?! ಅಗತ್ಯ ಸಂದರ್ಭದಲ್ಲೇ ಪಕ್ಷದ ಜೊತೆಗಿರದ ರಾಹುಲ್ ಗಾಂಧಿ!
ದೇಶಾದ್ಯಂತ ಜನಾಂದೋಲನ ರೂಪಿಸುವ ಯೋಜನೆಯಲ್ಲಿ ಕಾಂಗ್ರೆಸ್! ಮಾನಸ ಸರೋವರ ಯಾತ್ರೆಯಲ್ಲಿ ರಾಹುಲ್ ಗಾಂಧಿ! ಕೇವಲ ಆರೋಪಗಳಷ್ಟೇ ಯಶಸ್ವಿ ರಾಜಕಾರಣವಲ್ಲ! ತಳಮಟ್ಟದಲ್ಲೂ ಗಟ್ಟಿಯಾಗಿ ನಿಲ್ಲಬೇಕಾದ ಪಾಠ ಕಲಿಯಬೇಕು ರಾಹುಲ್ 

ನವದೆಹಲಿ(ಸೆ.4): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜಕೀಯವಾಗಿ ಇನ್ನೂ ಪಳಗಬೇಕು ಎಂಬ ಮಾತನ್ನು ಖುದ್ದು ಕಾಂಗ್ರೆಸ್ ನಾಯಕರೇ ಒಪ್ಪುತ್ತಾರೆ. ಅತ್ಯಂತ ಗಂಭೀರ ವಿಷಯದಲ್ಲೂ ರಾಹುಲ್ ಕೆಲವೊಮ್ಮೆ ಅಪ್ರಬುದ್ಧರಾಗಿ ವರ್ತಿಸುವುದುಂಟು.

ರಾಹುಲ್ ಅಪ್ರಬುದ್ಧತೆಗೆ ನೂರಾರು ಘಟನೆಗಳನ್ನು ಸಾಕ್ಷಿಯಾಗಿ ನೀಡಬಹುದು. ಲೋಕಸಭೆಯಲ್ಲಿ ಗಂಭೀರ ವಿಷಯಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ರಾಹುಲ್ ಕಣ್ಸನ್ನೆ, ತಮ್ಮ ಭಾಷಣದ ಬಳಿಕ ಪ್ರಧಾನಿ ಅವರನ್ನು ಸದನದಲ್ಲೇ ಅಪ್ಪಿಕೊಂಡಿದ್ದು, ಸಾರ್ವಜನಿಕ ಭಾಷಣದಲ್ಲಿ ತಪ್ಪುಗಳ ಸರಮಾಲೆ ಹೀಗೆ ರಾಹುಲ್ ಅಪ್ರಬುದ್ಧತೆ ವ್ಯಕ್ತವಗುತ್ತಲೇ ಇರುತ್ತದೆ.

ಪಕ್ಷಕ್ಕೆ ಚೈತನ್ಯ ತುಂಬಬೇಕಾದ ರಾಹುಲ್ ಎಲ್ಲಿ?:

ಅದರಲ್ಲೂ ಪಕ್ಷದ ರಣತಂತ್ರ, ನೀತಿ ನಿಯಮಗಳನ್ನು ರೂಪಿಸುವಿಕೆಯಲ್ಲಿ ರಾಹುಲ್ ಸಾಕಷ್ಟು ಪಳಗಬೇಕಿದೆ. ಇದಕ್ಕೆ ಉದಾಹರಣೆ ಎಂದರೆ ಸದ್ಯ ಕಾಂಗ್ರೆಸ್ ಪಕ್ಷ ರಫೆಲ್ ಯುದ್ಧ ವಿಮಾನದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಬೃಹತ್ ಜನಾಂದೋಲನ ರೂಪಿಸುವ ಯೋಜನೆಯಲ್ಲಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅರ್ಥಿಕ ವಿಫಲತೆ ಕುರಿತು ಜನಜಾಗೃತಿಗಾಗಿ ಪಕ್ಷ ಸಜ್ಜಾಗುತ್ತಿದೆ.

ಇವೆರಡೂ ವಿಷಯಗಳ ಕುರಿತು ಸಂಸತ್ತು ಮತ್ತು ಸಾರ್ವಜನಿಕವಾಗಿ ಅತ್ಯಂತ ಜೋರು ಧ್ವನಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕನೆಂದರೆ ಅದು ರಾಹುಲ್ ಗಾಂಧಿ ಮಾತ್ರ. ಆದರೆ ಪಕ್ಷ ಇನ್ನೇನು ಈ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ರಾಹುಲ್ ದೀರ್ಘ ಕಾಲದ ಮಾನಸ ಸರೋವರ ಯಾತ್ರೆಗೆ ತೆರಳಿದ್ದಾರೆ. ಅಂದರೆ ತನ್ನದೇ ನಾಯಕನ ನಾಯಕತ್ವ ಇಲ್ಲದೇ ಕಾಂಗ್ರೆಸ್ ಪಕ್ಷ ಈ ಹೋರಾಟಗಳನ್ನು ಮಾಡಬೇಕಿದೆ.

ಸರಿಯಾದ ಸಮಯ, ಸರಿಯಾದ ನೀತಿಯೇ ಯಶಸ್ವಿ ರಾಜಕಾರಣದ ಸೂತ್ರ:

ಇನ್ನು ಕಳೆದ ಗುರುವಾರ ಯುತ್ ಕಾಂಗ್ರೆಸ್ ವತಿಯಿಂದ ಪ್ರಧಾನಿ ಅಧಿಕೃತ ನಿವಾಸದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಂದು ಪ್ರಧಾನಿ ನೇಪಾಳ ಪ್ರವಾಸದಲ್ಲಿದ್ದರು. ಅಂದು ಪ್ರಧಾನಿ ಮೋದಿ ದೆಹಲಿ ಅಥವಾ ದೇಶದಲ್ಲೇ ಇದ್ದರೂ ಆ ಪಗ್ರತಿಭಟನೆಗೆ ಮತ್ತಷ್ಟು ತೂಕ ಬರುತ್ತಿತ್ತು. ಹೀಗೆ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ರಾಹುಲ್ ಪದೇ ಪದೇ ಎಡವುತ್ತಿದ್ದಾರೆ ಎಂಬುದು ಮೇಲ್ನೋಟಕ್ಕಾದರೂ ಸ್ಪಷ್ಟವಾಗಿ ಗೋಚರವಾಗುತ್ತದೆ.

ಅಲ್ಲದೇ ರಾಹುಲ್ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಲು ಹೆಚ್ಚಾಗಿ ಬಳಸುವುದು ಟ್ವೀಟ್ವರ್. ಆದರೆ ದೇಶದ ಜನರ ಮನಸ್ಸನ್ನು ಮುಟ್ಟಬೇಕಾದರೆ ತಳಮಟ್ಟದಲ್ಲೂ ಅಷ್ಟೇ ಚಟುವಟಿಕೆಯಿಂದ ಇರಬೇಕು ಎಂಬುದು ರಾಜಕಾರಣದ ಸಾಮಾನ್ಯ ಜ್ಞಾನ.

ರಾಹುಲ್‌ಗೆ ಪಾಠ ಮಾಡ್ತಾರಾ ತೇಜಸ್ವಿ ಯಾದವ್?:

ಈ ವಿಷಯದಲ್ಲಿ ರಾಹುಲ್‌ಗೆ ಅರ್‌ಎಲ್‌ಡಿ ಯುವ ನಾಯಕ ತೇಜಸ್ವಿ ಯಾದವ್ ಮಾದರಿಯಾಗಬಲ್ಲರು. ಜೈಲು ಪಾಲಾಗಿರುವ ತಮ್ಮ ತಂದೆಯ ಅನುಪಸ್ಥಿತಿಯಲ್ಲೂ ತೇಜಸ್ವಿ ಪಕ್ಷವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ವಿರೋಧಿಗಳೇ ಅವರ ಕಾರ್ಯ ವೈಖರಿಯನ್ನು ಕೊಂಡಾಡುತ್ತಿದ್ದಾರೆ.

ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಚುಕ್ಕಾಣಿ ಹಿಡಿದಿರುವ ರಾಹುಲ್ ಗಾಂಧಿ, ಪಕ್ಷದ ನಾಯಕತ್ವಕ್ಕೆ ತಕ್ಕ ವ್ಯಕ್ತಿತ್ವ ಇನ್ನೂ ಬೆಳೆಸಿಕೊಳ್ಳಬೇಕಿದೆ ಎಂಬುದು ಮಾತ್ರ ಸರ್ವವಿಧಿತ.

click me!