ಮದುವೆ ಮಂಟಪದಲ್ಲಿ ವಧು-ವರರು ಹಾರ ಬದಲಾಯಿಸಿ ಆಗಿದೆ. ಜೀವನದಲ್ಲಿ ಬಹುತೇಕರಿಗೆ ಒಮ್ಮೆ ಒದಗಿ ಬರುವ ಈ ವಿಶೇಷ ಸಂದರ್ಭ ಎಲ್ಲರನ್ನು ಪುಳಕಿತರನ್ನಾಗಿ ಮಾಡುತ್ತೆ. ಹೀಗೆ ಕೊಂಚ ಹೆಚ್ಚಾಗಿ ಪುಳಕಿತನಾದ ವರ ನಾಗಿನಿ ಸ್ಟೆಪ್ ಹಾಕಿದ್ದಾನೆ. ಅಷ್ಟೇ ನೋಡಿ, ಮಂಟಪದಲ್ಲೇ ಮದುವೆ ರದ್ದಾಗಿದೆ. ಕ್ಯಾನ್ಸಲ್‌ಗೆ ಕಾರಣ ರೋಚಕವಾಗಿದೆ.
ಬರೇಲಿ(ನ.11): ಕಂಕಣ ಭಾಗ್ಯ ಕೂಡಿ ಬರಲು ಹಲವು ಕಾರಣಗಳಿರಬೇಕು. ಇಬ್ಬರಿಗೂ ಪ್ರೀತಿ ಇರಬೇಕು, ಪ್ರೀತಿಸಿದವರಾಗಿದ್ದರೆ ಧರ್ಯ ಇರಬೇಕು, ಅರೇಂಜ್ ಮ್ಯಾರೇಜ್ ಆಗಿದ್ದರೆ, ಜಾತಕ ಕೂಡಿ ಬರಬೇಕು, ಹಣೆಯಲ್ಲಿ ಬರೆದಿರಬೇಕು..ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಕಾರಣಗಳು ನೀಡಬಹುದು. ಆದರೆ ಅದೇ ಮದುವೆ ರದ್ದಾಗಲು ಕಾರಣವೇ ಬೇಕಿಲ್ಲ. ಮಂಟಪದಲ್ಲೇ ಹಲವು ಮದುವೆಗಳು ಮುರಿಬಿದ್ದ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ಬಾರಿ ನಾವು ಹೇಳುತ್ತಿರುವ ರದ್ದಾಗಿರೋ ಮದುವೆ ಕೊಂಚ ಭಿನ್ನ.
ಇದನ್ನೂ ಓದಿ: ಕೇರಳದಿಂದ ಬಂದು IPS ಎಂದೇಳಿ ಮದುವೆಯಾಗ್ತಾರೆ! ಆಮೇಲೆ
ವಧು ಸಿಂಗಾರಗೊಂಡು ವೇದಿಕೆಯಲ್ಲಿ ಕುಳಿತಿದ್ದಾಳೆ. ಇತ್ತ ವರ ಅರಬ್ ರಾಷ್ಟ್ರದ ಎಲ್ಲಾ ಸೆಂಟ್ ಹೊಡೆದು ಸ್ಟೇಜ್ ಹತ್ತಿದ್ದಾನೆ. ಹಾರ ಬದಲಾಯಿಸಿ ಆಗಿದೆ. ಇದೇ ಸಂಭ್ರಮದಲ್ಲಿ ಹುಡುಗ ಎರಡು ಸ್ಟೆಪ್ ಹಾಕಿದ್ದಾನೆ. ಕೇವಲ ಸ್ಟೆಪ್ಸ್ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಮದ್ಯದ ಅಮಿಲಿನಲ್ಲಿ ನಾಗಿನಿ ಡ್ಯಾನ್ಸ್ ಮಾಡಿದ್ದಾನೆ. ಕುಡಿದಿದ್ದು ಹೆಚ್ಚಾಗಿದೆ, ಡ್ಯಾನ್ಸ್ ಕೂಡ ಮಿತಿ ಮೀರಿದೆ. ತಕ್ಷಣವೇ ವಧು ಮಿತಿ ಮೀರಿದ ಡ್ಯಾನ್ಸ್‌ಗೆ ಆಕ್ಷೇಪ ಎತ್ತಿದ್ದಾಳೆ.
ಇದನ್ನೂ ಓದಿ: ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ
ಮೊದಲೇ ಅಮಲು, ಹಾರ ಬದಲಾಯಿಸಿದ ತಕ್ಷಣವೇ ಸವಾರಿ ಮಾಡುತ್ತಿದ್ದಾಳೆ ಎಂದ ವರ, ಹುಡುಗಿಯ ಕಪಾಳಕ್ಕೆ ಭಾರಿಸಿದ್ದಾನೆ. ಸಿಟ್ಟಿಗೆದ್ದ ವಧು ಮದುವೆ ಬೇಡ ಎಂದಿದ್ದಾಳೆ. ಎರಡು ಕುಟಂಬದ ನಡುವೆ ಮರಾಮಾರಿಯೇ ಏರ್ಪಟ್ಟಿದೆ. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗಲು ಇಷ್ಟವಿಲ್ಲ, ಏನು ಮಾಡಲಿ?
ಮದುವೆ ಕ್ಯಾನ್ಸಲ್ ಮಾಡಿದ ನಿರ್ಧಾರವನ್ನು ಹುಡಿಯ ಪೋಷಕರು ಹಾಗೂ ಸಹೋದರ ಬೆಂಬಲಿಸಿದ್ದಾರೆ. ಶಿಸ್ತಿಲ್ಲದ ವರನ ಜೊತೆ ನನ್ನ ತಂಗಿ ಮದುವೆಯಾಗುವುದಕ್ಕಿಂತ ರದ್ದು ಮಾಡಿದ್ದೇ ಉತ್ತಮ. ವರನ ಕಡೆಯವರು ನೀಡಿದ ಎಲ್ಲಾ ಉಡುಗೊರೆ, ಸೀರೆಗಳನ್ನು ಹಿಂತಿರುಗಿಸಿದ್ದೇವೆ ಎಂದು ವಧುವಿನ ಸಹೋದರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ. ಎರಡೂ ಕಡೆಯವರು ಯಾವುದೇ ದೂರು ನೀಡಿಲ್ಲ. ಹೀಗಾಗಿ ಪ್ರಕರಣ ದಾಖಲಾಗಿಲ್ಲ.