
ಬೆಂಗಳೂರು (ಆ.08): ಅತ್ಯಂತ ಪ್ರಸಿದ್ದ ಕಾರ್ಯಕ್ರಮಗಳ ಪೈಕಿ ಒಂದಾದ ಡ್ರಾಮಾ ಜೂನಿಯರ್ಸ್’ನಲ್ಲಿ ಬ್ರಾಹ್ಮಣ ಪುರೋಹಿತರನ್ನು ಆಡಿಕೊಂಡು ನಗಲಾಗಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ವಿರೋಧಕ್ಕೆ ಕಾರಣವಾಗಿದೆ. ಜಾತಿ ಧರ್ಮಗಳ ಆದಾರದ ಮೇಲೆ ಈ ರೀತಿ ಕಾಮಿಡಿ ಮಾಡೋದು ಸರಿಯಲ್ಲ ಅನ್ನೋದು ಒಂದು ವಾದವಾದರೆ, ಕಲೆಯನ್ನು ಜಾತಿ ಧರ್ಮಗಳ ಜೊತೆ ಸಮೀಕರಣ ಮಾಡಿ ನೋಡಬೇಡಿ ಅಷ್ಟೊಂದು ಅಸಹುಷ್ಣುಗಳಾಗಬೇಡಿ ಅನ್ನೊಂದು ಇನ್ನೊಂದು ವಾದ. ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರವನ್ನು ಇಟ್ಟುಕೊಂಡು ಸುವರ್ಣ ನ್ಯೂಸ್ ನೋಯಿಸುತ್ತೆ ನಾಟಕ ಎನ್ನುವ ಪ್ಯಾನಲ್ ನಡೆಸಿತು.
ಖ್ಯಾತ ನಿರ್ದೇಶಕರಾದ ಎ.ಎಂ,ಆರ್ ರಮೇಶ್, ಚಿಂತಕರಾದ ಚಕ್ರವರ್ತಿ ಸೂಲಿಬೆಲೆ, ಪುರೋಹಿತರಾದ ಸಮೀರ್ ಆಚಾರ್ಯ, ಚಿಂತಕರಾದ ಕೆ.ಎಲ್ ಅಶೋಕ್, ದಲಿತ ಮುಖಂಡ ಶಿವರಾಮ್ ಪ್ಯಾನೆಲ್’ನಲ್ಲಿ ಭಾಗವಹಿಸಿದರು.
ನಾಟಕವನ್ನು ನಾಟಕವಾಗಿ ನೋಡಿ. ಮಕ್ಕಳು ಮನರಂಜನೆಗಾಗಿ ಮಾಡುತ್ತಾರೆ. ಅದನ್ನು ಕಲೆಯಾಗಿ ಸ್ವೀಕರಿಸಿ ಎಂದು ಕೆ.ಎಲ್ ಅಶೋಕ್ ಹಾಗೂ ಶಿವರಾಮ್ ವಾದಿಸಿದರೆ ಅದಕ್ಕೆ ಪ್ರತಿಯಾಗಿ ಚಕ್ರವರ್ತಿ ಸೂಲಿಬೆಲೆ, ಇದೇ ರೀತಿಯ ವಾದವನ್ನು ಬೇರೆ ಧರ್ಮದ, ಮತೀಯ ವಿಚಾರ ಬಂದಾಗ ಮಾಡುತ್ತಿದ್ರಾ ಅನ್ನೋ ಪ್ರಶ್ನೆ ಹುಟ್ಟುತ್ತೆ. ಯಾವುದೋ ಒಂದು ಪಂಥ, ಪಂಗಡ ಅನೇಕ ವರ್ಷಗಳಿಂದ ಇದನ್ನು ಸಹಿಸಿಕೊಂಡಿದೆ. ಕಳೆದ 70 ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯ ಇವೆಲ್ಲವನ್ನು ಸಹಿಸಿಕೊಂಡಿದೆ. ಒಪ್ಪಿಕೊಂಡಿದೆ. ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಹೆಜ್ಜೆಯಿಟ್ಟಿದ್ದಾರೆ. ಆದರೆ ಅಪಹಾಸ್ಯದ ಮಟ್ಟ ಯಾವ ತಳಮಟ್ಟಕ್ಕೆ ತಲುಪಿದೆ ಅಂದರೆ ಬ್ರಾಹ್ಮಣರನ್ನು ಬೈಯೋದಲ್ದೇ ಮಕ್ಕಳ ಕೈಲಿ ಇದನ್ನ ಮಾಡಿಸಿ ಮುಂದಿನ ಪೀಳಿಗೆಗೆ ಇದನ್ನು ಹೇಳ್ತಾ ಈ ವರ್ಗವೇ ಕೆಟ್ಟದ್ದು ಎಂದು ಬಿಂಬಿಸೊದಿದೆಯೆಲ್ಲಾ ಇದನ್ನೇ ಬೇರೆ ಪಂಥದವರೇ ಮಾಡಿದ್ರೆ ನಾಟಕವನ್ನು ನಾಟಕವಾಗಿ ಸ್ವೀಕರಿಸಿ ಅಂತ ಹೇಳಲಿಕ್ಕೆ ಆಗುತ್ತಾ? ಸಾಹಿತ್ಯವನ್ನು ಸಾಹಿತ್ಯವಾಗಿ ಸ್ವೀಕರಿಸುವುದಾದರೆ ಯಾಕೆ ಸಲ್ಮಾನ್ ರಶ್ದಿಗೆ ಬ್ಯಾನ್ ಇದೆ? ಇದೇ ಚರ್ಚೆಯನ್ನು ಬೇರೆ ಜಾತಿಯ ಬಗ್ಗೆ ಮಾಡಿದ್ರೆ ಹೀಗೆ ಸ್ವೀಕರಿಸುತ್ತಿದ್ದರಾ? ಯಾಕೆ ಒಂದೇ ಪಂಗಡವನ್ನು ಟಾರ್ಗೆಟ್ ಮಾಡ್ತೀರಿ? ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.