
ಬೆಂಗಳೂರು (ಜ.21): ಮದುವೆಯಾಗುವುದಾಗಿ ನಂಬಿಸಿ ಮಡಿಕೇರಿಯಲ್ಲಿ ಬೆಂಗಳೂರಿನ ಯುವತಿಯನ್ನು ರೇಪ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಿಯಕರ ದಿನೇಶ್ ಸ್ನೇಹಿತೆಯನ್ನು ಮುರಡೇಶ್ವರಕ್ಕೆ ಕರೆದೊಯ್ದಿದ್ದ. ಬಸ್ ಮಿಸ್ ಆಯ್ತು ಅಂತಾ ಹೋಂ ಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಎಳನೀರಲ್ಲಿ ಮತ್ತು ಬರಿಸೋ ಔಷಧಿ ಬೆರೆಸಿ ರೇಪ್ ಮಾಡಿದ್ದಾನೆ. ಮದುವೆಯಾಗುವುದಾಗಿ ಯುವತಿಗೆ ಭರವಸೆ ಕೊಟ್ಟಿದ್ದ ದೀನೇಶ್ ಸ್ವಲ್ಪ ದಿನದ ನಂತರ ಬೇರೆ ಹುಡುಗಿಯೊಂದಿಗೆ ಮದುವೆಗೆ ಸಜ್ಜಾಗಿದ್ದರು. ನೊಂದ ಯುವತಿ ನ್ಯಾಯ ದೊರಕಿಸಿಕೊಡಬೇಕು ಎಂದು ಹೆಚ್'ಎಎಲ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಯುವತಿ ಪ್ರಕರಣ ದಾಖಲು ಮಾಡಿಕೊಂಡು ಮಹಜಾರ್ ಮಾಡಿದ ಎಚ್'ಎಎಲ್ ಪೊಲೀಸರು ಬಳಿಕ ಪ್ರಕರಣವನ್ನ ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.