ವಿದ್ಯಾಭ್ಯಾಸಕ್ಕೆ ಜರ್ಮನಿಗೆ ಹೋದ ಬಾಗಲಕೋಟೆಯ ಹುಡುಗ ನಿಗೂಢ ನಾಪತ್ತೆ

Published : Jun 22, 2017, 08:39 AM ISTUpdated : Apr 11, 2018, 12:59 PM IST
ವಿದ್ಯಾಭ್ಯಾಸಕ್ಕೆ ಜರ್ಮನಿಗೆ ಹೋದ ಬಾಗಲಕೋಟೆಯ ಹುಡುಗ ನಿಗೂಢ ನಾಪತ್ತೆ

ಸಾರಾಂಶ

ಆತ ಉತ್ತರ ಕರ್ನಾಟಕದ ಇಂಜೀನಿಯರಿಂಗ್ ಹುಡುಗ. ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋದವನು ಮನೆಗೆ ವಾಪಸ್ ಆಗಿಲ್ಲ. ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಬಂದ ಸುದ್ದಿಯಿಂದ ಇದೀಗ ಆತನ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಷ್ಟಕ್ಕೂ  ಬಂದ ಆ ಅಘಾತ ಸುದ್ದಿ ಏನಂತೀರಾ? ಇಲ್ಲಿದೆ ವಿವರ.

ಬಾಗಲಕೋಟೆ(ಜೂ.22): ಆತ ಉತ್ತರ ಕರ್ನಾಟಕದ ಇಂಜೀನಿಯರಿಂಗ್ ಹುಡುಗ. ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋದವನು ಮನೆಗೆ ವಾಪಸ್ ಆಗಿಲ್ಲ. ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಬಂದ ಸುದ್ದಿಯಿಂದ ಇದೀಗ ಆತನ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಷ್ಟಕ್ಕೂ  ಬಂದ ಆ ಅಘಾತ ಸುದ್ದಿ ಏನಂತೀರಾ? ಇಲ್ಲಿದೆ ವಿವರ.

ಈ ಯುವಕನ ಹೆಸರು ಮಂಜುನಾಥ ಸಿದ್ದಣ್ಣ ಚೂರಿ. ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಗ್ರಾಮದ ನಿವಾಸಿ. ಬಿಇ ಮುಗಿಸಿ ಎಂ.ಎಸ್ ಅಧ್ಯಯನಕ್ಕೆ ಅಂತಾ ಜರ್ಮನಿಗೆ ತೆರಳಿದ್ದ ಮಗ  ನಾಪತ್ತೆಯಾಗಿದ್ದಾನೆ. ದಿಡೀರ್  ನಾಪತ್ತೆ ಸುದ್ದಿ ಕೇಳಿ ಇದೀಗ  ಇಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಕಳೆದ ವರ್ಷ ಮಾಸ್ಟರ್ ಆಪ್ ಸಾಪ್ಟವೇರ್  ಅಧ್ಯಯನಕ್ಕೆ ಅಂತಾ ಮಂಜುನಾಥ್ ಜರ್ಮನಿಯ ಹ್ಯಾಂಬರ್ಗ್ ಯೂನಿವರ್ಸಿಟಿಗೆ ತೆರಳಿದ್ದ. ಪ್ರತಿನಿತ್ಯ ಮಂಜು ತನ್ನ ತಾಯಿಗೆ ಫೋನ್ ಮಾಡುತ್ತಿದ್ದ. ಈ ಮಧ್ಯೆ ತಂದೆ ಅಪಘಾತದಲ್ಲಿ ಮೃತರಾಗಿದ್ದರಿಂದ ಮಂಜು ಕೊಂಚ ವಿಚಲಿತನಾಗಿದ್ದ. ಆದರೆ ಭಾನುವಾರದಿಂದ ಇತ್ತೀಚಿಗೆ ಒಂದೇ ಒಂದು ಕರೆಯನ್ನೂ ಮಾಡಿಲ್ಲ. ಹೀಗಾಗಿ ತಾಯಿ ಮಹಾನಂದೆ ಮನೆಗೆ ಬಂದವರನ್ನೇಲ್ಲಾ ಮಗನನ್ನ ಹುಡುಕಿಸಿಕೊಡುವಂತೆ ಗೋಳಿಡುತ್ತಿದ್ದಾರೆ.

ಇನ್ನು ಮಂಜುನಾಥ ತಾನಿದ್ದ ರೂಮ್'ನ ಕೀಯನ್ನ ತನ್ನ ಸ್ನೇಹಿತನಿಗೆ ಕೋರಿಯರ್ ಮೂಲಕ ತಲುಪಿಸಿ, ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಜರ್ಮನಿಯ ವಿದೇಶಾಂಗ ಇಲಾಖೆಯಿಂದ ಭಾರತೀಯ ವಿದೇಶಾಂಗ ಇಲಾಖೆಗೆ ಮಂಜುನಾಥನ ನಾಪತ್ತೆಯ ಮಾಹಿತಿ ಬಂದಿದ್ದು, ಮಂಜುನಾಥನ ಪೋಷಕರಿಗೆ ಸುದ್ದಿ ತಲುಪಿಸಿದ್ದಾರೆ. ಸುದ್ದಿ ತಿಳಿದ ಮಂಜುನಾಥನ ಪೋಷಕರು ಮಗನನ್ನ ಹುಡುಕಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಂತಾ ಹೋದ ಮಗ ನಾಪತ್ತೆಯಾಗಿದ್ದಾನೆ ಅಂದರೆ ಅದು ಪೋಷಕರಿಗೆ ಬರಸಿಡಿಲಿನ ಸುದ್ದಿಯೇ ಸರಿ.  ಈ ಮೂಲಕ ಪೋಷಕರ ಅಳಲನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೇಳಿಸಿಕೊಂಡು ಮಂಜುನಾಥನ ಪತ್ತೆಗೆ ಕ್ರಮ ಕೈಗೊಳ್ಳಬೇಕಿದೆ. ಮತ್ತೆ ತಾಯಿ ಮಡಿಲಿಗೆ ಮಗನನ್ನ ಸೇರಿಸಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!