ಮರಗಪ್ಪೆಗಳ ಅಳಿವಿಗೆ ಕಾರಣವೇನು?

By Internet DeskFirst Published Oct 4, 2016, 9:05 PM IST
Highlights

ಅಳಿವಿನಂಚಿನ ಜೀವಿ ಪ್ರಭೇದಗಳಲ್ಲಿ ಮರಗಪ್ಪೆ ಕೂಡಾ ಒಂದು. ಮರಗಪ್ಪೆಗಳ ಅಳಿವಿನ ಬಗ್ಗೆ ಇಲ್ಲಿದೆ ಮಾಹಿತಿ.

ಮಾನವನ ಸ್ವಾರ್ಥದಿಂದಾಗಿಯೋ ಅಥವಾ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿಯೋ ನಮ್ಮ ನಡುವೆ ಬದುಕುತ್ತಿದ್ದ ಬಹಳಷ್ಟು ಪ್ರಾಣಿಗಳು ನಶಿಸಿ ಹೋಗಿವೆ, ಇನ್ನೂ ಕೆಲವು ಅಳಿವಿನಂಚಿಗೆ ಬಂದು ತಲುಪಿವೆ. ಅಂತಹ ಅಳಿವಿನಂಚಿನ ಜೀವಿ ಪ್ರಭೇದಗಳಲ್ಲಿ ಮರಗಪ್ಪೆ ಕೂಡಾ ಒಂದು. ಮರಗಪ್ಪೆಗಳ ಅಳಿವಿನ ಬಗ್ಗೆ ಇಲ್ಲಿದೆ ಮಾಹಿತಿ.

ಅಧಿಕೃತವಾಗಿಯೇ ಅಳಿದುಹೋಗಿವೆ ಇನ್ನಲಾಗುವ ಮರಗಪ್ಪೆಗಳ ಆಯಸ್ಸು 12 ವರ್ಷ. ವಿಷೇಶವಾದ ಅಂಗಗಳನ್ನು ಹೊಂದಿರುವ ಮರಗಪ್ಪೆಗಳು ಅಟ್ಲಾಂಟಾ ಪ್ರದೇಶದಲ್ಲಿ ಕಂಡುಬರುತ್ತದೆ. ಮಾನವನ ನಿರ್ಲಕ್ಷದಿಂದಾಗಿ ಈ ಪ್ರಬೇಧ ನಶಿಸಿಹೋಗಿವೆ ಎಂದು ಹೇಳಲಾಗಿದೆ.

Latest Videos

ಮರಗಪ್ಪೆಯ ನಾಶಕ್ಕೆ ಮಾರಕ ರೋಗವೊಂದರ ಕಾರಣವನ್ನು ಕೂಡಾ ವಿಜ್ಞಾನಿಗಳು ನೀಡುತ್ತಾರೆ. ಚಿಟ್ರಿಡ್ ಶಿಲೀದ್ರಗಳ ಸೋಂಕಿನಿಂದಾಗಿ ಮರಗಪ್ಪೆಗಳು ಮಾರಕ ರೋಗಕ್ಕೆ ತುತ್ತಾದ ಸಾಧ್ಯತೆಯನ್ನು ವಿಜ್ಞಾನಿಗಳು ವಿವರಿಸುತ್ತಾರೆ.

ಇನ್ನು ಶೇ. 85 ರಷ್ಟು ಕಪ್ಪೆಗಳನ್ನು ಆಹಾರಕ್ಕಾಗಿ ಕೊಲ್ಲುತ್ತಿದ್ದರಿಂದ ಮರಗಪ್ಪೆಗಳ ಸಂತತಿ ವಿನಾಶದ ಸಾದ್ಯತೆಯನ್ನು ಕೂಡಾ ವಿಜ್ಞಾನಿಗಳು ತಿಳಿಸುತ್ತಾರೆ.

ಮರಗಪ್ಪೆಗಳ ನಾಶಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಇನ್ನೂ ಸಂಶೋಧನೆ ನಡೆಯುತ್ತಿದೆ. ಒಟ್ಟಾರೆ ಮನುಷ್ಯನ ಸ್ವಾರ್ಥ ಮತ್ತು ವಾತಾವರಣಕ್ಕೆ ಸೇರುತ್ತಿರುವ ಮಾಲಿನ್ಯಕಾರಕ ಗಳ ಪರಿಣಾಮವಾಗಿ ಅಪರೂಪದ ಮರಗಪ್ಪೆಗಳು ನಾಶಹೊಂದಿವೆ.

click me!