
ಬೆಂಗಳೂರು(ಜೂ.04):ಲೇಖಕ ಹಾಗೂ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರ ಸಹಜ ಖುಷಿ ಕೃತಿಯನ್ನು ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಓದುಗರಿಗೆ ಅರ್ಪಿಸಿದರು.
ಇದು ಜೋಗಿಯ 52ನೇ ಪುಸ್ತಕ. ಜೋಗಿ ಚೆನ್ನಾಗಿ ಬರೆಯುತ್ತಾರೆ, ಓದುಗರು ಮೆಚ್ಚುವಂತೆ ಬರೆಯುತ್ತಾರೆ ಎಂಬುದೆಲ್ಲ ನಿಜವೇ. ಹೀಗೆ ಬರೆಯತ್ತಿರುವ ಜೋಗಿ ನನ್ನ ಮಿತ್ರನೂ ಹೌದು ಎಂಬುದು ನನಗೆ ಮತ್ತಷ್ಟುಸಂತೋಷ ಕೊಡುವಂಥ ಸಂಗತಿ. ಈ ಪುಸ್ತಕ ಓದುಗರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ಸಪ್ನ ಬುಕ್ ಹೌಸ್ ಇದನ್ನು ಸೊಗಸಾಗಿ ಮುದ್ರಿಸಿದೆ. ಅಂಕಣ ಬರಹಗಳನ್ನು ಸೇರಿಸಿ ಮಾಡಿ ರುವ ಈ ಸಂಕಲನದ ಬರಹಗಳು ಮನಸ್ಸಿಗೆ ಮುದ ನೀಡುತ್ತವೆ ಎಂದು ರವಿ ಹೆಗಡೆ ಹೇಳಿದರು.
ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮಾತನಾಡಿ, ಜೋಗಿಯವರ ಪುಸ್ತಕಗಳನ್ನು ಪ್ರಕಟಿಸಲು ಸಂತೋಷವಾಗುತ್ತದೆ. ಪುಸ್ತಕದ ಮುಖ ಪುಟ ಮತ್ತು ಒಳಪುಟಗಳ ವಿನ್ಯಾಸ ಅದ್ಭುತ ವಾಗಿದೆ. ಜೋಗಿಯವರಿಗೆ ಅಪಾರ ವಾದ ಓದುಗರ ಬಳಗವೂ ಇದೆ. ಈ ಪುಸ್ತಕವನ್ನು ನಾವು ಹೆಮ್ಮೆ ಯಿಂದ ಪ್ರಕಟಿಸಿದ್ದೇವೆ ಎಂದರು.
ಸಪ್ನ ಬುಕ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥ ಆರ್. ದೊಡ್ಡೇಗೌಡ ಅವರು ಸಪ್ನ ಬುಕ್ ಹೌಸ್ ಹೊಸಬರಿಗೆ ಪ್ರೋ ತ್ಸಾಹ ನೀಡುತ್ತಾ ಬಂದಿದೆ. ಅನೇಕ ಹೊಸಬರ ಪುಸ್ತಕಗಳನ್ನು ಮುದ್ರಿಸಿದೆ. ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಪ್ರಕಾಶನ ಮಾಡಿದೆ. ಇದೀಗ ಓದುಗರು ಮೆಚ್ಚು ವಂಥ ಪುಸ್ತಕ ವೊಂದನ್ನು ಕೊಟ್ಟಿರುವ ಜೋಗಿ ಅವರ ಇತರ ಪುಸ್ತಕಗಳಂತೆಯೇ ಇದು ಕೂಡ ಜನಮೆಚ್ಚುಗೆಗಳಿಸಲಿದೆ ಎಂದರು. ಸುವರ್ಣ ನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಪುಸ್ತಕ ಬಿಡುಗಡೆಯಲ್ಲಿ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.