ರೈತರ ಸಾಲ ಮನ್ನಾ ಬಗ್ಗೆ ಮುಖ್ಯಮಂತ್ರಿ ಸುಳಿವು?: ಮೀಸಲಾತಿ ಶೇ.70ಕ್ಕೆ ಏರಿಸಲು ಪರಿಶೀಲನೆ

By Suvarna Web DeskFirst Published Jun 4, 2017, 12:56 PM IST
Highlights

ರಾಜ್ಯವನ್ನು ಸತತ ಬರಗಾಲ ಕಾಡಿರುವ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬ ಕೂಗಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮೊದಲು ಮನ್ನಾ ಮಾಡಲಿ ಎಂದು ಪುನರುಚ್ಚರಿಸಿದ್ದಾರೆ. ಆದರೆ ಇದೇ ವೇಳೆ, ನಾವು ಸಾಲ ಮನ್ನಾದ ಪರವಾಗಿಯೇ ಇದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಕಾಯುತ್ತಿದ್ದೇನೆ. ಇನ್ನೂ ಸ್ವಲ್ಪ ದಿನ ಕಾಯುತ್ತೇನೆ. ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ರೈತರ ಸಾಲಮನ್ನಾ ಮಾಡುವ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.

ಬೆಂಗಳೂರು(ಜೂ.04): ರಾಜ್ಯವನ್ನು ಸತತ ಬರಗಾಲ ಕಾಡಿರುವ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬ ಕೂಗಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮೊದಲು ಮನ್ನಾ ಮಾಡಲಿ ಎಂದು ಪುನರುಚ್ಚರಿಸಿದ್ದಾರೆ. ಆದರೆ ಇದೇ ವೇಳೆ, ನಾವು ಸಾಲ ಮನ್ನಾದ ಪರವಾಗಿಯೇ ಇದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಕಾಯುತ್ತಿದ್ದೇನೆ. ಇನ್ನೂ ಸ್ವಲ್ಪ ದಿನ ಕಾಯುತ್ತೇನೆ. ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ರೈತರ ಸಾಲಮನ್ನಾ ಮಾಡುವ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.

ನಗರದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ‘ಕೊಟ್ಟಮಾತು-ದಿಟ್ಟಸಾಧನೆ' ಕಾರ‍್ಯಕ್ರಮದಲ್ಲಿ ಮಾತನಾಡಿ ಅವರು, ರಾಜ್ಯದ ರೈತರ ಮೇಲೆ . 52 ಸಾವಿರ ಕೋಟಿ ಸಾಲ ಇದೆ. ಈ ಪೈಕಿ .42 ಸಾವಿರ ಕೋಟಿಯನ್ನು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳು ನೀಡಿವೆ. ಉಳಿದ .10.5 ಸಾವಿರ ಕೋಟಿ ಸಾಲ ಸಹಕಾರ ಬ್ಯಾಂಕ್‌ನಲ್ಲಿ ಇದೆ. ಅದ್ದರಿಂದ ಕೇಂದ್ರದವರು ಅರ್ಧದಷ್ಟುಸಾಲ ಮನ್ನಾ ಮಾಡಲಿ ಎಂದು ಕಾಯುತ್ತಿದ್ದೇನೆ. ಆದರೆ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಖಚಿತ ಎಂದು ತಿಳಿಸಿದರು.
ಎರಡು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ವಿದ್ಯುತ್‌, ಮೇವು, ನೀರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಆದರೆ ರೈತರ ಸಾಲ ಮನ್ನಾ ಪರ ಬಿಜೆಪಿಯ 17 ಸಂಸದರ ಪೈಕಿ ಯಾರೊಬ್ಬರೂ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿಲ್ಲ ಎಂದು ಟೀಕಿಸಿದರು.

Latest Videos

ಬಿಎಸ್‌ವೈ ವಿರುದ್ಧ ಏಕವಚನ ಬಳಕೆ: ‘ನಾನು ಯಡಿಯೂರಪ್ಪನಂತೆ ಭಾಷೆ ಬಳಸುವುದಿಲ್ಲ. ಸಿದ್ದರಾಮಯ್ಯನಿಗೇನು ದಾಡಿ ಬಂದಿದೆ ಎಂದಿದ್ದಾನೆ. ನಾನು ಹಾಗೆ ಮಾತನಾಡುವುದಿಲ್ಲ' ಎಂದು ಸಿದ್ದರಾಮಯ್ಯ ಅವರು ಏಕವಚನದಲ್ಲಿಯೇ ಯಡಿಯೂರಪ್ಪಗೆ ತಿರುಗೇಟು ನೀಡಿದರು.

2009ರ ಡಿ.31ರಂದು ಸಾಲಮನ್ನಾ ಮಾಡಿ ಎಂದು ನಾವು ಪಟ್ಟು ಹಿಡಿದಾಗ ‘ನಾನು ನೋಟು ಪ್ರಿಂಟ್‌ ಮಾಡುವ ಮಷಿನ್‌ ಇಟ್ಟಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಹೀಗೆ ಪ್ರತಿಪಕ್ಷದಲ್ಲಿದ್ದಾಗ ಒಂದು ರೀತಿ, ಅಧಿಕಾರಕ್ಕೆ ಬಂದ ಮೇಲೆ ಮತ್ತೊಂದು ರೀತಿ ಮಾತನಾಡುವ ಇವರಿಗೆ ಎಷ್ಟುನಾಲಿಗೆ ಇದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು' ಎಂದು ಕುಟುಕಿದರು.

ನ್ನ ಅವಧಿಯಲ್ಲಿ 3 ಚಿನ್ನದ ಪದಕ ಬಂದಿದೆ, ಹೇಳಲೇ ಇಲ್ಲ

‘ಎಲ್ಲಾ ಇಲಾಖೆಯ ಸಾಧನೆಯನ್ನು ವಿವರವಾಗಿ ಹೇಳಿದ ಮುಖ್ಯಮಂತ್ರಿಗಳು, ನಾನು ವಸತಿ ಸಚಿವನಾಗಿದ್ದಾಗ ಇಲಾಖೆಗೆ 3 ಚಿನ್ನದ ಪದಕ ಬಂದಿದ್ದನ್ನು ಹೇಳಲೇ ಇಲ್ಲ. ಇದ್ಯಾವ ನ್ಯಾಯ' ಎಂದು ನಟ, ಶಾಸಕ ಅಂಬರೀಶ್‌ ಮುಖ್ಯಮಂತ್ರಿಗಳ ಕಾಲೆಳೆದರು. ಸಮಾವೇಶದಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಅವರು ಸುದೀರ್ಘವಾಗಿ ಎಲ್ಲಾ ವಿಷಯಗಳನ್ನೂ ವಿವರಿಸಿದರು. ನಾನು 230 ಸಿನಿಮಾದಲ್ಲಿ ನಟನೆ ಮಾಡಿದ್ದರೂ ಇಷ್ಟುಡೈಲಾಗ್‌ ಹೊಡೆದಿಲ್ಲ' ಎಂದು ಹಾಸ್ಯ ಚಟಾಕಿ ಹಾರಿಸಿದರು. ಪ್ರತಿ ಇಲಾಖೆ ಮಾಹಿತಿ ಹೇಳಿದ್ದಾರೆ. ಆದರೆ ವಸತಿ ಇಲಾಖೆಗೆ 3 ಚಿನ್ನದ ಪದಕ ಬಂದರೂ ಹೇಳಿಲ್ಲ. ಹೇಳದಿದ್ದರೂ ಪರವಾಗಿಲ್ಲ ಬಿಡಿ. ಜನರಿಗೆ ಅದು ಗೊತ್ತಿದೆ ಎಂದಾಗ ಎಲ್ಲರೂ ನಕ್ಕರು.

 

click me!