
ನವದೆಹಲಿ (ಜೂ.12): ನಟ ಸಂಜಯ್ ದತ್'ಗೆ ಮತ್ತೆ ಸಂಕಷ್ಟ ಎದುರಾಗಿದೆ. 1993 ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ನಟ ಸಂಜಯ್ ದತ್ ರನ್ನು ಶಿಕ್ಷೆ ಅವಧಿಗೂ ಮುನ್ನವೇ ಬಿಡುಗಡೆಗೊಳಿಸಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕರ ಮುಂಬೈ ಹೈಕೋರ್ಟ್ ಸಮರ್ಥನೆ ಕೇಳಿದೆ.
ಸಂಜಯ್ ದತ್'ರನ್ನು 2016 ಫೆಬ್ರವರಿಯಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ 8 ತಿಂಗಳು ಮುನ್ನವೇ ಬಿಡುಗಡೆಗೊಳಿಸಲಾಗಿತ್ತು. ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಜೈಲುಶಿಕ್ಷೆ ಅನುಭವಿಸುತ್ತಿರುವ ವೇಳೆ ಸಂಜಯ್ ದತ್'ರನ್ನು ಪೆರೋಲ್ ಮೇಲೆ ಆಗಾಗ ಹೊರಗೆ ಬಿಡುತ್ತಿದ್ದನ್ನು ಪ್ರಶ್ನಿಸಿ ಪುಣೆ ನಿವಾಸಿ ಪ್ರದೀಪ್ ಬಾಲೇಕರ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾ. ಆರ್. ಎಂ ಸಾವಂತ್ ಮತ್ತು ಸಾಧನಾ ಜಾಧವ್ ನ್ಯಾಯಾಮಗ ಪೀಠ ಸಂಜಯ್ ದತ್'ರನ್ನು ಬಿಡುಗಡೆ ಮಾಡುವ ಮುನ್ನ ಏನೇನು ಮಾನದಂಡಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಯಾವ್ಯಾವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದೆ.
100 ಕ್ಕೂಹೆಚ್ಚು ದಿನ ಅವರು ಪೆರೋಲ್ ಮೇಲೆ ಹೊರಗಿದ್ದರು.ಅವರನ್ನೇನು ವಿಐಪಿ ರೀತಿಯಲ್ಲಿ ಟ್ರೀಟ್ ಮಾಡಲಾಗುತ್ತಿತ್ತೇ? ಅವರು ಅರ್ಧಕ್ಕಿಂತ ಹೆಚ್ಚು ಸಮಯ ಹೊರಗೆ ಇರುತ್ತಿದ್ದರಿಂದ ಅವರ ಸನ್ನಡತೆಯನ್ನು ತಿಳಿಯಲು ಸಮಯವೆಲ್ಲಿ ಸಿಗುತ್ತಿತ್ತು? ಯಾವ ಆಧಾರದ ಮೇಲೆ ಅವರ ನಡವಳಿಕೆಯನ್ನು ಪರಿಗಣಿಸಲಾಯಿತು ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.