ನಾಪತ್ತೆಯಾಗಿ ನಿವೃತ್ತಿಯಾಗುತ್ತಿರುವ ಮೊದಲ ಹೈಕೋರ್ಟ್​​ ನ್ಯಾಯಮೂರ್ತಿ ಸಿ.ಎಸ್ ಕರ್ಣನ್

By Suvarna Web DeskFirst Published Jun 12, 2017, 6:27 PM IST
Highlights

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಅವರು ಇಂದು ನಿವೃತ್ತಿಯಾಗಿದ್ದಾರೆ. ಈ ಮೂಲಕ ನಾಪತ್ತೆಯಾಗಿ ನಿವೃತ್ತಿಯಾಗುತ್ತಿರುವ ಮೊದಲ ಹೈಕೋರ್ಟ್​​ ನ್ಯಾಯಮೂರ್ತಿ ಎಂಬ ದಾಖಲೆಗೆ ಪಾತ್ರರಾದರು.  

ನವದೆಹಲಿ (ಜೂ.12): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಅವರು ಇಂದು ನಿವೃತ್ತಿಯಾಗಿದ್ದಾರೆ. ಈ ಮೂಲಕ ನಾಪತ್ತೆಯಾಗಿ ನಿವೃತ್ತಿಯಾಗುತ್ತಿರುವ ಮೊದಲ ಹೈಕೋರ್ಟ್​​ ನ್ಯಾಯಮೂರ್ತಿ ಎಂಬ ದಾಖಲೆಗೆ ಪಾತ್ರರಾದರು.  

ಜೂ. 12, 1955ರಂದು ಜನಿಸಿದ್ದ ಕರ್ಣನ್, ದೇಶದ ನ್ಯಾಯಾಂಗ  ವ್ಯವಸ್ಥೆಯಲ್ಲಿ  ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ವಿವಾದ ಎಬ್ಬಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ನ್ಯಾಯಾಂಗ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಮೇಲೆ ನ್ಯಾಯಾಂಗ ನಿಂದನೆ, ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ಮತ್ತು ಮಾನಸಿಕ ಸ್ಥಿತಿ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಅಪರೂಪದ ಪ್ರಕರಣಗಳಿಗೆ ಕರ್ಣನ್ ಮುಖ್ಯಭೂಮಿಕೆ ಒದಗಿಸಿದರು. ನಿವೃತ್ತಿಯಾಗುವ ನ್ಯಾಯಾಧೀಶರಿಗೆ ಸಾಮಾನ್ಯವಾಗಿ ವೈಭವದ ವಿದಾಯ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಅವರ ಸಹೋದ್ಯೋಗಿಗಳನ್ನೂ ಒಳಗೊಂಡಂತೆ ಪ್ರಮುಖ ಘಟ್ಟದಲ್ಲಿ ಅವರೊಂದಿಗಿದ್ದ ಒಡನಾಡಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು.

click me!