
ವಾಷಿಂಗ್ಟನ್[ಮೇ.04]: ಅಮೆರಿಕಾದ ಫ್ಲೋರಿಡಾದಲ್ಲಿ 136 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 737 ವಿಮಾನವೊಂದು ಆಯ ತಪ್ಪಿ ಸೇಂಟ್ ಜಾನ್ ನದಿಗೆ ಬಿದ್ದಿದೆ. ನೌಕಾ ಸೇನೆಯ ವಕ್ತಾರರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯವುದೇ ಸಾವು ನೋವು ಸಂಭವಿಸಿಲ್ಲ.
ಲಭ್ಯವಾದ ಮಾಹಿತಿ ಅನ್ವಯ ಈ ಘಟನೆ ರಾತ್ರಿ 09.40ಕ್ಕೆ ನಡೆದಿದ್ದು, ರನ್ ವೇ ಮೇಲೆ ಇಳಿಯಲು ಯತ್ನಿಸುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ನದಿಗುರುಳಿದೆ. ಜ್ಯಾಕ್ಸ್ ನವಿಲೆ ಮೇಯರ್ ಈ ಕುರಿತಾಗಿ ಟ್ವೀಟ್ ಮಾಡುತ್ತಾ 'ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕೆರೂ ಸುರಕ್ಷಿತವಾಗಿದ್ದಾರೆ. ಸಿಬ್ಬಂದಿಗಳು ನೀರಿನಲ್ಲಿರುವ ವಿಮಾನವನ್ನು ನಿಯಂತ್ರಿಸಿ ಮೇಲೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ.
ನದಿಗುರುಳಿದ ಈ ವಿಮಾನದಲ್ಲಿ ಮಿಯಾಮಿ ಏರ್ ಇಂಟರ್ ನ್ಯಾಷನಲ್ ಲೋಗೋ ಇತ್ತು ಎನ್ನಲಾಗಿದೆ. ಹೀಗಿದ್ದರೂ ಈ ಘಟನೆ ಕುರಿತಾಗಿ ವಿಮಾನ ಸಂಸ್ಥೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.