40 ವರ್ಷಗಳ ನಂತರ ದೊರಕಿದ ಕೊಲೆಯಾದ ವ್ಯಕ್ತಿಯ ಶವ

By Web DeskFirst Published Sep 26, 2018, 9:00 PM IST
Highlights

ಸೈಪ್ರಸ್ ಸಮೀಪದ ಪ್ರದೇಶದ ಅಂಜೂರ ಮರದಲ್ಲಿ ವಿಚಿತ್ರ ವಿದ್ಯಾಮಾನ ಸಂಭವಿಸುತ್ತಿರುವುದಕ್ಕೆ ಸಂಶೋಧನಾಕಾರರೊಬ್ಬರು 2011ರಲ್ಲಿ ಮರದ ಸುತ್ತಲು ಪರಿಶೋಧನೆ ಕೈಗೊಂಡಿದ್ದಾಗ ಹೆರ್ಗ್ಯೂನ್ ಸೇರಿದಂತೆ ಕೆಲವು ಮೃತದೇಹಗಳು ಪತ್ತೆಯಾಗಿದ್ದವು. 

ಅಥೆನ್ಸ್[ಸೆ.26]:  ಸುಮಾರು 40 ವರ್ಷದ ಹಿಂದೆ ಕೊಲೆಯಾದ ವ್ಯಕ್ತಿಯೊಬ್ಬರ ಮೃತದೇಹ ಇದೀಗ ಪತ್ತೆಯಾಗಿದ್ದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ. ಮೃತ ವ್ಯಕ್ತಿಯ ಹೆಸರು ಅಮತ್ ಹೆರ್ಗ್ಯೂನ್ ಈತ 1974ರಲ್ಲಿ ಗ್ರೀಕ್ ಹಾಗೂ ಟರ್ಕಿ ಸ್ಥಳೀಯರಿಗೂ ಆದಂತಹ ಗುಂಪು ಸಂಘರ್ಷಣೆಯಲ್ಲಿ ಹೆರ್ಗ್ಯೂನ್ ಮೃತಪಟ್ಟಿದ್ದರು. 40 ವರ್ಷದ ಹಿಂದಿನ ಸಾವು ಎಂಬುದು ಗೊತ್ತಾಗಿದ್ದು ಸಂಶೋಧನಾಕಾರರ ಸಂಶೋಧನೆಯಿಂದ.

ಸೈಪ್ರಸ್ ಸಮೀಪದ ಪ್ರದೇಶದ ಅಂಜೂರ ಮರದಲ್ಲಿ ವಿಚಿತ್ರ ವಿದ್ಯಾಮಾನ ಸಂಭವಿಸುತ್ತಿರುವುದಕ್ಕೆ ಸಂಶೋಧನಾಕಾರರೊಬ್ಬರು 2011ರಲ್ಲಿ ಮರದ ಸುತ್ತಲು ಪರಿಶೋಧನೆ ಕೈಗೊಂಡಿದ್ದಾಗ ಹೆರ್ಗ್ಯೂನ್ ಸೇರಿದಂತೆ ಕೆಲವು ಮೃತದೇಹಗಳು ಪತ್ತೆಯಾಗಿದ್ದವು. ಅನುಮಾನಗೊಂಡ ಸಂಶೋಧನಾಕಾರ ಪತ್ತೇದಾರಿ ಸಂಸ್ಥೆಗೆ ಮೃತದೇಹ ಪರಿಶೀಲಿಸಲು ಮನವಿ ಮಾಡಿಕೊಂಡಿದ್ದ. ತನಿಖೆ ಆರಂಭಿಸಿದ ಪತ್ತೇದಾರಿಗಳು 7 ವರ್ಷಗಳ ಕಾಲ ವಿಚಾರಣೆ ನಂತರ  ಸತ್ಯಾಂಶ ಬಯಲಿಗೆಳೆದರು. 

ಈ ವರದಿಯಲ್ಲಿ ತಿಳಿದು ಬಂದ ಅಂಶವೇನೆಂದರೆ ಗ್ರೀಕ್ ಹಾಗೂ ಟರ್ಕಿ ಸ್ಥಳೀಯರಿಗೂ ಘರ್ಷಣೆ ನಡೆದ ಸಂದರ್ಭದಲ್ಲಿ ಗುಹೆಯಲ್ಲಿದ್ದ  ಹೆರ್ಗ್ಯೂನ್ ಹಾಗೂ ಸಹಚರರು ಗ್ರೀಕರು ಸಿಡಿಸಿದ  ಡೈನಾಮೈಟ್ ಸ್ಪೋಟದಿಂದ ಮೃತಪಟ್ಟಿದ್ದರು. ಮೃತದೇಹ ತಮ್ಮ ಸೋದರನದ್ದು ಎಂದು 87 ವರ್ಷದ  ಹೆರ್ಗ್ಯೂನ್ ಸೋದರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾಳೆ. ಅದಲ್ಲದೆ 40 ವರ್ಷದ ನಂತರ ಪತ್ತೆಯಾದ ಸಹೋದರನ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದು ವೃದ್ಧೆಯ ಖುಷಿಗೆ ಕಾರಣವಾಗಿದೆಯಂತೆ. 

click me!