ಅನುಮಾನಸ್ಪದ ರೀತಿಯಲ್ಲಿ ಸನ್ಯಾಸಿನಿಯ ಶವ ಪತ್ತೆ

Published : Sep 09, 2018, 06:11 PM ISTUpdated : Sep 09, 2018, 09:17 PM IST
ಅನುಮಾನಸ್ಪದ ರೀತಿಯಲ್ಲಿ ಸನ್ಯಾಸಿನಿಯ ಶವ ಪತ್ತೆ

ಸಾರಾಂಶ

ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ  ಮರಣೋತ್ತರ ಪರೀಕ್ಷೆ ಕೈಗೊಂಡಿದ್ದು ಪೊಲೀಸರು ಮೃತದೇಹ ಹಸ್ತಾಂತರಿಸಲು ಸನ್ಯಾಸಿನಿಯ ಸಂಬಂಧಿಕರ ಬರುವಿಕೆಗಾಗಿ ಕಾಯುತ್ತಿದ್ದಾರೆ.

ತಿರುವನಂತಪುರಂ[ಸೆ.09]: ಸನ್ಯಾಸಿನಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪಟನಾಪುರಂ ಬಳಿ ಪತ್ತೆಯಾಗಿದೆ.

ಸುಸಾನ್ ಮ್ಯಾಥ್ಯೋ[54] ಮೃತರು. ಇವರು ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂರ್ಚೆ ರೋಗಕ್ಕೆ ತುತ್ತಾಗಿದ್ದ ಇವರು ಶನಿವಾರ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಅವರ ಮೃತದೇಹ ಚರ್ಚಿನ ಹಿಂಭಾಗ ಪತ್ತೆಯಾಗಿದೆ.ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಅಶೋಕನ್ ತಿಳಿಸಿದ್ದಾರೆ.

ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ  ಮರಣೋತ್ತರ ಪರೀಕ್ಷೆ ಕೈಗೊಂಡಿದ್ದು ಪೊಲೀಸರು ಮೃತದೇಹ ಹಸ್ತಾಂತರಿಸಲು ಸನ್ಯಾಸಿನಿಯ ಸಂಬಂಧಿಕರ ಬರುವಿಕೆಗಾಗಿ ಕಾಯುತ್ತಿದ್ದಾರೆ. ವೈದ್ಯಕೀಯ ವರದಿ ಬಂದ ನಂತರ ಕೊಲೆ ಅಥವಾ ಸಹಜ ಸಾವೋ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗುವುದೆಂದು ಅಶೋಕನ್ ಮಾಹಿತಿ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ