ಬೆಂಗಳೂರಿಗೆ ಬರುತ್ತಿವೆ 150 ಎಲೆಕ್ಟ್ರಿಕ್ ಬಸ್

Published : Dec 30, 2017, 11:05 AM ISTUpdated : Apr 11, 2018, 12:43 PM IST
ಬೆಂಗಳೂರಿಗೆ ಬರುತ್ತಿವೆ 150 ಎಲೆಕ್ಟ್ರಿಕ್  ಬಸ್

ಸಾರಾಂಶ

ಬೆಂಗಳೂರ ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಗುತ್ತಿಗೆ ಆಧಾರದಲ್ಲಿ  150 ಎಲೆಕ್ಟ್ರಿಕ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ. ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿರುವ ಬಿಎಂಟಿಸಿ, ತ್ವರಿತಗತಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚ ರಣೆಗೆ ಇಳಿಸುವ ಉತ್ಸಾಹದಲ್ಲಿದೆ.

ಬೆಂಗಳೂರು (ಡಿ.30): ಬೆಂಗಳೂರ ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಗುತ್ತಿಗೆ ಆಧಾರದಲ್ಲಿ  150 ಎಲೆಕ್ಟ್ರಿಕ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ. ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿರುವ ಬಿಎಂಟಿಸಿ, ತ್ವರಿತಗತಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚ ರಣೆಗೆ ಇಳಿಸುವ ಉತ್ಸಾಹದಲ್ಲಿದೆ.

ಯೋಜನೆ ಪ್ರಕಾರ ಎಲ್ಲವೂ ಅಂದುಕೊಂಡಂತೆ ಸಾಗಿದರೆ 2018ರ ಏಪ್ರಿಲ್ ಅಥವಾ ಮೇ ತಿಂಗಳ ಅಂತ್ಯದ ವೇಳೆಗೆ ನಗರದಲ್ಲಿ ಸಾರ್ವಜನಿಕರಿಗೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗಲಿದೆ. ದೇಶ ಅಥವಾ ವಿದೇಶದಲ್ಲಿ ಕನಿಷ್ಠ 300 ಎಲೆಕ್ಟ್ರಿಕ್ ಬಸ್‌ಗಳನ್ನು ಎರಡು ವರ್ಷ ನಿರ್ವಹಣೆ ಮಾಡಿದ ಅನುಭವ ಹೊಂದಿರುವ ಕಂಪನಿಗಳಿಂದ 10 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯಲು ನಿಗಮ ತೀರ್ಮಾನಿಸಿದೆ.32 ಆಸನ ಸಾಮರ್ಥ್ಯದ 9 ಮೀಟರ್ ಉದ್ದ ಅಥವಾ 41 ಆಸನದ 11ರಿಂದ 12 ಮೀಟರ್ ಉದ್ದದ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಪಡೆಯಲು ನಿರ್ಧರಿಸಿದೆ. 

 ಬಸ್‌ಗಳ ನೋಂದಣಿ, ವಿಮೆ, ಮೋಟಾರು ವಾಹನ ತೆರಿಗೆ, ಸೇವಾ ತೆರಿಗೆಯನ್ನು ಗುತ್ತಿಗೆ ಪಡೆಯುವ ಕಂಪನಿ ಭರಿಸಬೇಕು. ಚಾಲಕರು ಹಾಗೂ ಬಸ್ ನಿರ್ವಹಣೆಯನ್ನೂ ಕಂಪನಿಯೇ ಮಾಡಬೇಕು. ಬಿಎಂಟಿಸಿ ಯಿಂದ ನಿರ್ವಾಹಕ ಹಾಗೂ ಟಿಕೆಟ್ ವಿತರಿಸುವ ಯಂತ್ರ ನೀಡಲಾಗುವುದು ಎಂದು ಟೆಂಡರ್‌ನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಬಸ್ ದಿನಕ್ಕೆ ಕನಿಷ್ಠ 200 ಕಿ.ಮೀ.ಸಂಚರಿಸಬೇಕು. ಪ್ರತಿ ಕಿ.ಮೀಗೆ ನಿಗಮವೇ ನಿರ್ದಿಷ್ಟ ಹಣ, ಹೆಚ್ಚುವರಿ ಸಂಚಾರಕ್ಕೆ ಪ್ರತ್ಯೇಕ ದರ ನೀಡುವುದಾಗಿ ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಟಿ ಜನರ ಹೃದಯ ಮೀಟಿದ ಮಾನವ: ನಾನು ರಾಜಕೀಯಕ್ಕೆ ಬಂದಿದ್ದು ದೊಡ್ಡ ತಪ್ಪು ಎಂದಿದ್ದ ವಾಜಪೇಯಿ
'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!