ಬ್ಲೂ ವೇಲ್'ನವರು ಸಾಯಿಸ್ತಾರೆ ಕಾಪಾಡಿ!: 12 ವರ್ಷದ ಬಾಲಕನಿಂದ ಸಹಾಯವಾಣಿಗೆ ದಯನೀಯ ಮೊರೆ

Published : Sep 03, 2017, 09:20 AM ISTUpdated : Apr 11, 2018, 12:49 PM IST
ಬ್ಲೂ ವೇಲ್'ನವರು ಸಾಯಿಸ್ತಾರೆ ಕಾಪಾಡಿ!: 12 ವರ್ಷದ ಬಾಲಕನಿಂದ ಸಹಾಯವಾಣಿಗೆ ದಯನೀಯ ಮೊರೆ

ಸಾರಾಂಶ

ಮಾರಣಾಂತಿಕ ಬ್ಲೂವೇಲ್ ರಹಸ್ಯವಾಗಿ ದೇಶಾದ್ಯಂತ ತನ್ನ ಜಾಲವನ್ನು ಬೀಸಿದೆ ಎಂಬುದನ್ನು ಸಾಬೀತುಪಡಿಸುವ ಮತ್ತಷ್ಟು ಉದಾಹರಣೆಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಬೆಳಕಿಗೆ ಬಂದ ಕೆಲ ಬ್ಲೂವೇಲ್ ಗೇಮ್ ಪ್ರಕರಣಗಳ ಪೈಕಿ ಕೆಲವನ್ನು ಪೋಷಕರು ಹಾಗೂ ಇನ್ನು ಕೆಲವನ್ನು ಶಾಲಾ ಶಿಕ್ಷಕರು ಬಹಿರಂಗಪಡಿಸಿದ್ದರು. ಆದರೆ ಬಹಳಷ್ಟು ವಿದ್ಯಾರ್ಥಿ ಗಳು, ತಾವು ಆಟ ಆಡುತ್ತಿರುವ ವಿಷಯ ಬಹಿರಂಗ ಪಡಿಸಿದರೆ ತಾವೂ ಸೇರಿದಂತೆ ತಮ್ಮ ಇಡೀ ಕುಟುಂಬ ಸರ್ವನಾಶ ಆಗುವ ಭೀತಿಯಿಂದಾಗಿ ಇದನ್ನು ಮುಚ್ಚಿಡುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಇದಕ್ಕೊಂದು ತಾಜಾ ನಿದರ್ಶನ ತಮಿಳುನಾಡಿನಲ್ಲಿ ಸಿಕ್ಕಿದೆ.

ಚೆನ್ನೈ(ಸೆ.03): ಮಾರಣಾಂತಿಕ ಬ್ಲೂವೇಲ್ ರಹಸ್ಯವಾಗಿ ದೇಶಾದ್ಯಂತ ತನ್ನ ಜಾಲವನ್ನು ಬೀಸಿದೆ ಎಂಬುದನ್ನು ಸಾಬೀತುಪಡಿಸುವ ಮತ್ತಷ್ಟು ಉದಾಹರಣೆಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಬೆಳಕಿಗೆ ಬಂದ ಕೆಲ ಬ್ಲೂವೇಲ್ ಗೇಮ್ ಪ್ರಕರಣಗಳ ಪೈಕಿ ಕೆಲವನ್ನು ಪೋಷಕರು ಹಾಗೂ ಇನ್ನು ಕೆಲವನ್ನು ಶಾಲಾ ಶಿಕ್ಷಕರು ಬಹಿರಂಗಪಡಿಸಿದ್ದರು. ಆದರೆ ಬಹಳಷ್ಟು ವಿದ್ಯಾರ್ಥಿ ಗಳು, ತಾವು ಆಟ ಆಡುತ್ತಿರುವ ವಿಷಯ ಬಹಿರಂಗ ಪಡಿಸಿದರೆ ತಾವೂ ಸೇರಿದಂತೆ ತಮ್ಮ ಇಡೀ ಕುಟುಂಬ ಸರ್ವನಾಶ ಆಗುವ ಭೀತಿಯಿಂದಾಗಿ ಇದನ್ನು ಮುಚ್ಚಿಡುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಇದಕ್ಕೊಂದು ತಾಜಾ ನಿದರ್ಶನ ತಮಿಳುನಾಡಿನಲ್ಲಿ ಸಿಕ್ಕಿದೆ.

ತಮಿಳುನಾಡಿನ ತಿರುಪೂರ್‌ನ 12 ವರ್ಷದ ಬಾಲಕನೊಬ್ಬ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ‘ಅವರು ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಸಾಯಿಸಿಬಿಡುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡಿ’ ಎಂದು ಮೊರೆ ಇಟ್ಟ ಘಟನೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮಕ್ಕಳ ನೆರವಿಗೆಂದೇ ಇರುವ 104 ಸಂಖ್ಯೆಗೆ ಇತ್ತೀಚೆಗೆ ಕರೆ ಮಾಡಿದ್ದ ಈ ಬಾಲಕ ತಾನು ಬ್ಲೂವೇಲ್ ಜಾಲಕ್ಕೆ ಸಿಕ್ಕಿರುವ ಬಗ್ಗೆ ಮಾತನಾಡಿದ್ದಾನೆ.

ತಾನು ಈ ಆಟದಿಂದ ಹೊರಬೇಕೆಂಬ ಆಸೆ ಹೊಂದಿದ್ದರೂ, ಆಟ ನಿರ್ವಹಣೆ ಮಾಡುತ್ತಿರುವವರು, ಹೊರಹೋದರೆ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ನಿರ್ನಾಮ ಮಾಡುವ ಬೆದರಿಕೆ ಹಾಕಿದ್ದಾರೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ಕಾಪಾಡಿ ಎಂದು ಸಹಾಯ ವಾಣಿ ತಜ್ಞರ ಬಳಿ ನೋವಿನಿಂದ ಹೇಳಿಕೊಂಡಿದ್ದಾನೆ. ಇದೇ ರೀತಿ ಮತ್ತೊಬ್ಬ ಬಾಲಕ ಕೂಡಾ ತನ್ನ ನೋವನ್ನು ಸಹಾಯವಾಣಿ ಬಳಿ ತೋಡಿಕೊಂಡಿದ್ದಾನೆ ಎನ್ನಲಾಗಿದೆ. ದೇಶದಲ್ಲಿ ಬ್ಲೂವೇಲ್ ಆಟದಿಂದ ಹಲವು ಆತ್ಮಹತ್ಯೆ ಪ್ರಕರಣಗಳು ನಡೆದ ಬೆನ್ನಲ್ಲೇ, ಯುವಕರು ಈ ಆಟದಿಂದ ಹೊರಬರುವ ಮಾರ್ಗವನ್ನು ಹುಡುಕುತ್ತಿದ್ದಾರೆ. ಬಹುತೇಕರು ಒಂದು ವೇಳೆ ತಾವು ಈ ಆಟದಿಂದ ಹೊರಬಂದರೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತದೆ ಅಥವಾ ತಮ್ಮ ಕುಟುಂಬ ಅಪಾಯಕ್ಕೆ ಸಿಲುಕುತ್ತದೆ ಎಂಬ ಭಯಕ್ಕೆ ಒಳಗಾಗಿದ್ದಾರೆ ಎಂದು ಆತ್ಮಹತ್ಯೆ ತಡೆ ಕೇಂದ್ರ- ’ಸ್ನೇಹಾ’ ಸ್ಥಾಪಕಿ ಡಾ. ಲಕ್ಷ್ಮಿ ವಿಜಯ್ ಹೇಳಿದ್ದಾರೆ.

ಬೆದರಿಕೆ ಹೇಗೆ:

ಆಟದ ಆರಂಭದಲ್ಲೇ, ಆಟಗಾರರ ಎಲ್ಲಾ ಮಾಹಿತಿಯನ್ನು ಆಟದ ನಿರ್ವಾಹಕರು ಪಡೆದುಕೊಂಡಿರುತ್ತಾರೆ. ಜೊತೆಗೆ ಗೇಮ್‌ನ 50ನೇ ಚಾಲೆಂಜ್ ಆತ್ಮಹತ್ಯೆಯದ್ದಾಗಿರುತ್ತದೆ ಎಂದೂ ಹೇಳಿರುತ್ತಾರೆ. ಇದಕ್ಕೆ ಒಪ್ಪಿದಲ್ಲಿ ಮಾತ್ರ ಆಟಕ್ಕೆ ಪ್ರವೇಶ. ಮಧ್ಯದಲ್ಲಿ ಹೊರಹೋದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ನಿರ್ನಾಮ ಮಾಡಿಬಿಡುತ್ತೇವೆ ಎಂದು ನಿರ್ವಾಹಕರು ಎಚ್ಚರಿಕೆ ನೀಡುತ್ತಾರೆ. ಇದರಿಂದ ಹೆದರಿಕೊಳ್ಳುವ ಬಹಳಷ್ಟು ವಿದ್ಯಾರ್ಥಿಗಳು ವಿಷಯವನ್ನು ಮನೆಯಲ್ಲಿ ಬಹಿರಂಗಪಡಿಸುವುದೂ ಇಲ್ಲ ಜೊತೆಗೆ ಆಟದಿಂದ ಹಿಂದೆ ಸರಿಯವುದಿಲ್ಲ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್