ಶಾಕಿಂಗ್ ಮೋದಿ ಸಂಪುಟ!: 'ಯಾರೂ ಊಹಿಸದ ಮುಖಗಳಿಗೆ' ಪ್ರಧಾನಿ ಮಣೆ!

By Suvarna Web DeskFirst Published Sep 3, 2017, 7:54 AM IST
Highlights

ರಹಸ್ಯ ರಾಜಕೀಯ ನಿಲುವುಗಳ ಮೂಲಕ ಎದುರಾಳಿಗಳ ಜೊತೆಗೆ ಸ್ವಪಕ್ಷೀಯರನ್ನೂ ಸದಾ ಅಚ್ಚರಿಗೆ ಗುರಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ ಮತ್ತದೇ ಕೆಲಸ ಮಾಡಿದೆ. ಭಾನುವಾರ ಬೆಳಗ್ಗೆ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ 9 ಹೊಸ ಮುಖಗಳಿಗೆ ಮಣೆ ಹಾಕಲು ಮೋದಿ- ಶಾ ಜೋಡಿ ನಿರ್ಧರಿಸಿದ್ದು, ಅಚ್ಚರಿಯ ವಿಷಯವೆಂ ದರೆ ಹೀಗೆ ಸ್ಥಾನ ಪಡೆದಿರುವ 9 ಜನರ ಪೈಕಿ ಯಾರೊಬ್ಬರ ಹೆಸರು ಕೂಡಾ ಹಲವು ತಿಂಗಳುಗಳಿಂದ ಕೇಳಿ ಬರುತ್ತಿದ್ದ ಸಂಭಾವ್ಯರ ಪಟ್ಟಿಯಲ್ಲಿ ಇರಲಿಲ್ಲ!

ನವದೆಹಲಿ(ಸೆ.03): ರಹಸ್ಯ ರಾಜಕೀಯ ನಿಲುವುಗಳ ಮೂಲಕ ಎದುರಾಳಿಗಳ ಜೊತೆಗೆ ಸ್ವಪಕ್ಷೀಯರನ್ನೂ ಸದಾ ಅಚ್ಚರಿಗೆ ಗುರಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ ಮತ್ತದೇ ಕೆಲಸ ಮಾಡಿದೆ. ಭಾನುವಾರ ಬೆಳಗ್ಗೆ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ 9 ಹೊಸ ಮುಖಗಳಿಗೆ ಮಣೆ ಹಾಕಲು ಮೋದಿ- ಶಾ ಜೋಡಿ ನಿರ್ಧರಿಸಿದ್ದು, ಅಚ್ಚರಿಯ ವಿಷಯವೆಂ ದರೆ ಹೀಗೆ ಸ್ಥಾನ ಪಡೆದಿರುವ 9 ಜನರ ಪೈಕಿ ಯಾರೊಬ್ಬರ ಹೆಸರು ಕೂಡಾ ಹಲವು ತಿಂಗಳುಗಳಿಂದ ಕೇಳಿ ಬರುತ್ತಿದ್ದ ಸಂಭಾವ್ಯರ ಪಟ್ಟಿಯಲ್ಲಿ ಇರಲಿಲ್ಲ!

 

ಹೀಗೆ ಅಚ್ಚರಿಯ ಪಟ್ಟಿ ಯಲ್ಲಿ ಸ್ಥಾನ ಪಡೆದವರಲ್ಲಿ ಕರ್ನಾಟಕದ ಉತ್ತರ ಕನ್ನಡ ಕ್ಷೇತ್ರದಿಂದ 5ನೇ ಬಾರಿಗೆ ಲೋಕಸಭೆ ಪ್ರವೇಶಿಸಿರುವ ಅನಂತ್ ಕುಮಾರ್ ಹೆಗಡೆ ಸೇರಿದ್ದಾರೆ. ಈ ಹಿಂದಿನ ಯಾವುದೇ ಎನ್‌ಡಿಎ ಸರ್ಕಾರದ ಅವಧಿಯಲ್ಲೂ ಹೆಗಡೆ ಹೆಸರು ಸಂಭಾವ್ಯರ ಪಟ್ಟಿಯಲ್ಲೂ ಸೇರಿರಲಿಲ್ಲ. ಹೀಗಾಗಿ ಅವರ ಆಯ್ಕೆ ಭಾರೀ ಅಚ್ಚರಿಗೆ ಕಾರಣವಾಗಿದೆ.

 

ಇದೇ ವೇಳೆ 9 ಜನರ ಪೈಕಿ ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳು, ಓರ್ವ ನಿವೃತ್ತ ಎಎ್‌ಎಸ್ ಅಧಿಕಾರಿ ಮತ್ತು ಓರ್ವ ನಿವೃತ್ತ ಐಪಿಎಸ್ ಅಧಿಕಾರಿ ಕೂಡಾ ಸೇರಿದ್ದಾರೆ. ಈ ಪೈಕಿ ಐಎ್‌ಎಸ್ ಮತ್ತು ಓರ್ವ ಐಎಎಸ್ ಅಧಿಕಾರಿ, ಹಾಲಿ ಸಂಸದರಲ್ಲ. ಜೊತೆಗೆ ಪಟ್ಟಿಯಲ್ಲಿ ಯಾವುದೇ ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲ ಎಂಬುದೂ ಗಮನಾರ್ಹ.

ಅಚ್ಚರಿಗೆ ಮುಹೂರ್ತ:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮೂರನೇ ಸುತ್ತಿನ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಈ ಸಂಪುಟ ವಿಸ್ತರಣೆ ವೇಳೆ ಕರ್ನಾಟಕದ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ (49), ಮಾಜಿ ಐಎಫ್'ಎಸ್ ಅಧಿಕಾರಿ ಹರ್ದೀಪ್ ಸಿಂಗ್ ಪುರಿ (65), ಉತ್ತರ ಪ್ರದೇಶದ ಭಾಗಪತ್ ಕ್ಷೇತ್ರದ ಸಂಸದ ಸತ್ಯಪಾಲ್ ಸಿಂಗ್ (ಮುಂಬೈನ ಮಾಜಿ ಪೊಲೀಸ್ ಆಯುಕ್ತ - 61ವರ್ಷ), ಕೇರಳ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಅಲ್ಪೋನ್ಸ್ ಕಣ್ಣನ್‌ತಾನಮ್ (64) ಪಟ್ಟಿಯಲ್ಲಿದ್ದಾರೆ. ಅಲ್ಲದೆ, ಬಿಹಾರದ ಸಂಸದ ಅಶ್ವಿನಿ ಕುಮಾರ್ ಚೌಬೆ (64), ಮಧ್ಯಪ್ರದೇಶದ ವೀರೇಂದ್ರ ಕುಮಾರ್ (63), ಉತ್ತರಪ್ರದೇಶದ ಶಿವಪ್ರತಾಪ್ ಶುಕ್ಲಾ (65), ಜೋ‘ಧಪುರ ಕ್ಷೇತ್ರದ ಸಂಸದ ಗಜೇಂದ್ರ ಸಿಂಗ್ ಶೆಖಾವತ್ (49), ಬಿಹಾರದ ಅರ‌್ರಾ ಕ್ಷೇತ್ರದ ಸಂಸದ ರಾಜ್‌ಕುಮಾರ್ ಸಿಂಗ್ (ನಿವೃತ್ತ ಐಎಎಸ್ - 64 ವರ್ಷ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾನುವಾರ ಸಂಪುಟ ವಿಸ್ತರಣೆ ಜೊತೆಗೆ ಖಾತೆಗಳಲ್ಲೂ ಭಾರೀ ಬದಲಾವಣೆ ಆಗಲಿದೆ ಎನ್ನಲಾಗಿದೆ. ಹಾಲಿ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್'ಗೆ ಮಹತ್ವದ ನಗರಾಭಿವೃದ್ಧಿ ಖಾತೆಗೆ ಬಡ್ತಿ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಅರುಣ್ ಜೇಟ್ಲಿ ಸೇರಿದಂತೆ ನಾಲ್ವರು ಸಚಿವರಿಗೆ ಹೆಚ್ಚುವರಿ ಖಾತೆಗಳ ಜವಾಬ್ದಾರಿ ಇದ್ದು, ಆ ಹೊಣೆಗಾರಿಕೆಯನ್ನು ಹಿಂಪಡೆದು ನೂತನ ಸಚಿವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗಿದೆ. ಜೇಟ್ಲಿ ಬಳಿ ಇರುವ ರಕ್ಷಣಾ ಖಾತೆಗೆ ಓಂ ಮಾಥೂರ್, ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಹೆಸರು ಕೇಳಿಬರುತ್ತಿದೆ. ಸುರೇಶ್ ಪ್ರಭು ಬಳಿ ಇರುವ ರೈಲ್ವೆ ಖಾತೆಯನ್ನು ಹಿಂಪಡೆದು ಅದನ್ನು ಸಾರಿಗೆ ಖಾತೆ ಜತೆಗೂಡಿಸಿ ಒಂದೇ ಖಾತೆ ಮಾಡಿ, ಅದಕ್ಕೆ ನಿತಿನ್ ಗಡ್ಕರಿ ಅವರನ್ನು ಮಂತ್ರಿಯಾಗಿಸುವ ಪ್ರಸ್ತಾವ ಇದೆ ಎಂದು ಹೇಳಲಾಗಿದೆ. ಪೀಯೂಷ್ ಗೋಯೆಲ್, ಧರ್ಮೇಂದ್ರ ಪ್ರದಾನ್, ಮನೋಜ್ ಸಿನ್ಹಾಗೆ ಸಂಪುಟ ದರ್ಜೆಗೆ ಬಡ್ತಿ ನೀಡುವ ಸಂಭವವಿದೆ.

ಇನ್ನೂ 5 ಸ್ಥಾನ ಖಾಲಿ:

ನಿಯಮದ ಅನ್ವಯ ಕೇಂದ್ರ ಸಂಪುಟದಲ್ಲಿ 81 ಸಚಿವರಿಗೆ ಅವಕಾಶವಿದೆ. ಇದುವರೆಗೆ 73 ಸ್ಥಾನ ಭರ್ತಿ ಮಾಡಲಾಗಿತ್ತು. ಆದರೆ ಸಂಪುಟ ಪುನಾರಚನೆಗೂ ಮುನ್ನ 6 ಸಚಿವರು ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಸಚಿವರ ಸಂಖ್ಯೆ 67ಕ್ಕೆ ಇಳಿದಿತ್ತು. ಇದೀಗ ಮತ್ತೆ 9 ಸಚಿವರನ್ನು ಸೇರಿಸಿಕೊಂಡರೆ ಒಟ್ಟಾರೆ ಸಚಿವರ ಸಂಖ್ಯೆ 76ಕ್ಕೆ ಏರಲಿದೆ. ಹೀಗಾಗಿ ಇನ್ನೂ 5 ಸ್ಥಾನ ಖಾಲಿ ಉಳಿಯಲಿದೆ. ಈ ಸ್ಥಾನಗಳನ್ನು ಮುಂದಿನ ವಿಸ್ತರಣೆ ವೇಳೆ ಜೆಡಿಯು, ಎಐಎಡಿಎಂಕೆ ಮತ್ತು ಶಿವಸೇನೆಗೆ ಹಂಚುವ ಸಾಧ್ಯತೆ ಇದೆ.

click me!