ಬ್ಲೂವೇಲ್ ಆಟದ ರೂವಾರಿ ಯವತಿ ರಷ್ಯಾದಲ್ಲಿ ಸೆರೆ..!

By Suvarna Web DeskFirst Published Aug 31, 2017, 11:34 PM IST
Highlights

ಯುವತಿ ತಾನೇ ಸ್ವತಃ ಬ್ಲೂವೇಲ್ ಆಟವನ್ನು ಆಡಿದ್ದಾಗಿ ಹೇಳಿಕೊಂಡಿದ್ದಾಳೆ. ಆಟದ ನಿಯಮದಂತೆ ಆತ್ಮಹತ್ಯೆ ಮಾಡಿಕೊಳ್ಳುವ ಕೊನೆಯ ಟಾಸ್ಕ್ ಅನ್ನು ಪೂರ್ಣಗೊಳಿಸಿಲ್ಲ. ಬದಲಾಗಿ ತಾನೇ ‘ಎಡ್ಮಿನ್’ ಆಗಿದ್ದಳು.

ಮಾಸ್ಕೋ(ಆ.31): ಆತ್ಮಹತ್ಯೆಗೆ ಪ್ರೇರಣೆ ನೀಡುವ ಬ್ಲೂ ವೇಲ್ ಆಟದ ಮಾಸ್ಟರ್ ಮೈಂಡ್ ಎಂದು ಹೇಳಲಾದ 17 ವರ್ಷದ ಯುವತಿಯನ್ನು ರಷ್ಯಾದ ಖಬರೋವಸ್ಕ್ ಕರೈ ಪ್ರದೇಶದಲ್ಲಿ ಬಂಧಿಸಲಾಗಿದೆ.

ಬ್ಲೂವೇಲ್ ಚಾಲೆಂಜ್ ಹೆಸರಿನಲ್ಲಿ ನಡೆಯುತ್ತಿರುವ ಹಲವಾರು ಗುಂಪುಗಳನ್ನು ಯುವತಿ ಮುನ್ನಡೆಸುತ್ತಿದ್ದಳು. ಒಂದು ವೇಳೆ ತನ್ನ ಸೂಚನೆಗಳನ್ನು ಪಾಲಿಸದೇ ಇದ್ದರೆ ಕುಟುಂಬದ ಸದಸ್ಯರನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಹೇಳಲಾಗಿದೆ. ಪೊಲೀಸರು ಆಕೆಯ ಮನೆ ಮತ್ತು ಪುಸ್ತಕಗಳನ್ನು ತಪಾಸಣೆ ಮಾಡಿದ್ದು, ಆತ್ಮಹತ್ಯೆಗೆ ಸಂಬಂಧಿಸಿದ ಚಿತ್ರಗಳು ಪತ್ತೆಯಾಗಿವೆ. ಈ ಆಟವನ್ನು ಕಂಡುಹಿಡಿದವನು ಎನ್ನಲಾದ 22 ವರ್ಷದ ಫಿಲಿಪ್ ಬುಡೆಕಿನ್ ಬಿಡಿಸಿದ ಚಿತ್ರಗಳನ್ನು ಈಕೆ ಪಡೆದುಕೊಂಡಿದ್ದಳು.

ಯುವತಿ ತಾನೇ ಸ್ವತಃ ಬ್ಲೂವೇಲ್ ಆಟವನ್ನು ಆಡಿದ್ದಾಗಿ ಹೇಳಿಕೊಂಡಿದ್ದಾಳೆ. ಆಟದ ನಿಯಮದಂತೆ ಆತ್ಮಹತ್ಯೆ ಮಾಡಿಕೊಳ್ಳುವ ಕೊನೆಯ ಟಾಸ್ಕ್ ಅನ್ನು ಪೂರ್ಣಗೊಳಿಸಿಲ್ಲ. ಬದಲಾಗಿ ತಾನೇ ‘ಎಡ್ಮಿನ್’ ಆಗಿದ್ದಳು. ತನ್ನನ್ನು ಅನುಸರಿಸುವ ಸಂತ್ರಸ್ತರಿಗೆ ತನ್ನನ್ನು ಒಬ್ಬ ಪುರುಷ ಎಂದು ಯುವತಿ ಪರಿಚಯಿಸಿಕೊಂಡಿದ್ದಳು.

ಆಟವನ್ನು ಕಂಡುಹಿಸಿದ ಫಿಲಿಫ್ ಬುಡೆಕಿನ್ ಸೈಬೀರಿಯಾದ ಜೈಲಿನಲ್ಲಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ವಿಶ್ವದೆಲ್ಲೆಡೆ 130 ಮಕ್ಕಳ ಪ್ರಾಣವನ್ನು ಬಲಿ ಪಡೆದಿದ್ದಾನೆ ಎಂದು ಹೇಳಲಾಗಿದೆ.

click me!