
ಚೆನ್ನೈ(ಸೆ.01): ಆತ್ಮಹತ್ಯೆಯ ಆನ್'ಲೈನ್ ಆಟ ಬ್ಲೂವೇಲ್ ಚಾಲೆಂಜ್'ಗೆ ತಮಿಳುನಾಡಿನ 19 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.
ವಿಘ್ನೇಶ್ ಎಂಬಾತ ಮಧುರೈನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಕೈ ಮೇಲೆ ವೇಲ್‌ನ ಚಿತ್ರವೊಂದನ್ನು ಕೊರೆದುಕೊಂಡಿದ್ದು, ತಮಿಳುನಾಡಿನಲ್ಲಿ ಬ್ಲೂವೇಲ್ ಆಟದಿಂದ ಸಾವು ಸಂಭವಿಸಿದ ಮೊದಲ ಪ್ರಕರಣ ಇದಾಗಿದೆ. ವಿಘ್ನೇಶ್ ಬ್ಲೂವೇಲ್ ಆಟ ಆಡುತ್ತಿದ್ದ 75 ಸ್ನೇಹಿತರ ವಾಟ್ಸಪ್ ಗ್ರೂಪ್'ವೊಂದರ ಸದಸ್ಯನಾಗಿದ್ದ. 75 ಮಂದಿ ಈ ಆಟವನ್ನು ಆಡುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಾವಿಗೂ ಮುನ್ನ ವಿಘ್ನೇಶ್ ಬರೆದಿರುವ ಪತ್ರವೊಂದು ಲಭ್ಯವಾಗಿದ್ದು, ಅದರಲ್ಲಿ ‘ಬ್ಲೂವೇಲ್ ಬರೀ ಆಟವಲ್ಲ, ಅಪಾಯಕಾರಿ ಆಟ. ಒಮ್ಮೆ ನೀವು ಇದನ್ನು ಪ್ರವೇಶಿಸಿದರೆ ಹೊರ ಬರುವುದು ಸಾಧ್ಯವೇ ಇಲ್ಲ ಎಂದು ಬರೆದಿದ್ದಾನೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮದುರೈ ಪೊಲೀಸ್ ಅಧಿಕಾರಿ ಮಣಿವಣ್ಣನ್ ಮಕ್ಕಳು ಬ್ಲೂವೇಲ್ ಆಟದಲ್ಲಿ ತೊಡಗಿರುವುದು ಕಂಡು ಬಂದರೆ ವಾಟ್ಸಪ್ ನಂಬರ್ 7708806111 ಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.