ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ; ಜ.31 ಕ್ಕೆ ಬ್ಲಡ್'ಮೂನ್ ಡೇ

By Suvarna Web DeskFirst Published Jan 18, 2018, 4:36 PM IST
Highlights

150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಪರೂಪದ ಖಗೋಳ ವಿದ್ಯಮಾನವೊಂದಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬರುವುದೇ ಅಪರೂಪ. ಅಂತಹ ಅಪರೂಪದ ಹುಣ್ಣಿಮೆ ದಿನವೇ ಜ.31 ರಂದು ಸಂಪೂರ್ಣ ಚಂದ್ರಗ್ರಹಣ ಘಟಿಸುತ್ತಿದೆ.

ನವದೆಹಲಿ (j.18): 150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಪರೂಪದ ಖಗೋಳ ವಿದ್ಯಮಾನವೊಂದಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬರುವುದೇ ಅಪರೂಪ. ಅಂತಹ ಅಪರೂಪದ ಹುಣ್ಣಿಮೆ ದಿನವೇ ಜ.31 ರಂದು ಸಂಪೂರ್ಣ ಚಂದ್ರಗ್ರಹಣ ಘಟಿಸುತ್ತಿದೆ.

ಜ.31 ರಂದು ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಚಂದ್ರ ಸೂರ್ಯನಿಗೆ ಅಡ್ಡಬಂದು ಸಂಪೂರ್ಣ ಕಿತ್ತಳೆ ಬಣ್ಣಕ್ಕೆ ತಿರುಗಲಿದ್ದಾನೆ. ಆ ಕಾರಣಕ್ಕೆ ಈ ಬೆಳವಣಿಗೆಯನ್ನು ‘ಬ್ಲಡ್ ಮೂನ್’ ಎಂದು ಬಣ್ಣಿಸಲಾಗುತ್ತಿದೆ. ಒಂದೇ  ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಕಾಣಿಸಿಕೊಂಡರೆ ಅದನ್ನು ‘ಬ್ಲೂಮೂನ್’ ಎಂದು ಕರೆಯುವ ರೂಢಿ ಇದೆ. 150 ವರ್ಷಗಳ ಬಳಿಕ ಘಟಿಸುತ್ತಿರುವ ಅಪರೂಪದ ವಿದ್ಯಮಾನಕ್ಕೆ ‘ಸೂಪರ್ ಬ್ಲೂ ಬ್ಲಡ್ ಮೂನ್’ ಎಂದು ಗಗನ  ಕುತೂಹಲಿಗಳು ಕರೆಯುತ್ತಿದ್ದಾರೆ.

ಭಾರತ, ಮಧ್ಯಪ್ರಾಚ್ಯ, ಪೂರ್ವ ಯುರೋಪ್‌ನಲ್ಲಿ ಜ.31 ರಂದು ಚಂದ್ರೋದಯವಾಗುವಾಗಲೇ ಗ್ರಹಣ ಪ್ರಾರಂಭವಾಗಿರುತ್ತದೆ. ಕೊನೆಯದಾಗಿ ಈ ರೀತಿ ಬ್ಲಡ್ ಬ್ಲೂ ಮೂನ್ ಘಟಿಸಿದ್ದು 1866 ರ ಮಾ.31  ರಂದು.

 

click me!