
ನವದೆಹಲಿ(ಜ.08): ಭಾರತೀಯರು ದೇಶದೊಳಗೆ ಮತ್ತು ವಿದೇಶಗಳಲ್ಲಿ ಹೊಂದಿರುವ ಕಪ್ಪುಹಣದ ಬಗೆಗಿನ ವರದಿಯನ್ನು ಬಹಿರಂಗಪಡಿಸಲಾಗದು ಎಂದು ಈ ಕುರಿತು ಅಧ್ಯಯನ ನಡೆಸಿದ ಮೂರು ಪ್ರಮುಖ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ದೆಹಲಿ ಮೂಲದ ನ್ಯಾಷನಲ್ ಇನ್'ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ‘ಅಕ್ರಮ ಸಂಪತ್ತು ಗಳಿಕೆ’ ಕುರಿತು ಅಧ್ಯಯನ ನಡೆಸಿವೆ.
2011ರಲ್ಲಿ ಅಂದಿನ ಯುಪಿಎ ಸರ್ಕಾರವೇ ಈ ಸಂಸ್ಥೆಗಳಿಗೆ ಕಪ್ಪುಹಣದ ಮಾಹಿತಿ ಕಲೆಹಾಕುವ ಹೊಣೆಯನ್ನು ವಹಿಸಿತ್ತು. ಅದರಂತೆ ಸಂಸ್ಥೆಗಳು 2013ರ ಡಿಸೆಂಬರ್ 30, 2014ರ ಜುಲೈ 18 ಮತ್ತು 2014ರ ಆಗಸ್ಟ್ 21ರಂದು ಸಚಿವಾಲಯಕ್ಕೆ ತಮ್ಮ ವರದಿಯನ್ನು ನೀಡಿದ್ದವು.
ಆದರೆ, ಈಗ ಆರ್'ಟಿಐ ಕಾಯ್ದೆಯನ್ವಯ ಕೇಳಿದ ಪ್ರಶ್ನೆಗೆ, ‘‘ಕಪ್ಪು ಹಣದ ಕುರಿತಾದ ಯಾವುದೇ ಮಾಹಿತಿಯನ್ನು ಸಚಿವಾಲಯದ ಅನುಮತಿ ಇಲ್ಲದೇ ನೀಡುವ ಅಧಿಕಾರ ತಮಗಿಲ್ಲ,’’ ಎಂದು ಸಂಸ್ಥೆಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.