ರಾಹುಲ್ ಕಾರಿಗೆ ಕಲ್ಲು: ಬಿಜೆಪಿ ಕಾರ್ಯಕರ್ತ ಪೊಲೀಸ್ ವಶಕ್ಕೆ

Published : Aug 05, 2017, 07:00 PM ISTUpdated : Apr 11, 2018, 12:46 PM IST
ರಾಹುಲ್ ಕಾರಿಗೆ ಕಲ್ಲು: ಬಿಜೆಪಿ ಕಾರ್ಯಕರ್ತ ಪೊಲೀಸ್ ವಶಕ್ಕೆ

ಸಾರಾಂಶ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ   ಪ್ರತಿಭಟನೆ ಕೈಬಿಟ್ಟು ನೆರೆ ಪರಿಹಾರ ಕಡೆ ಗಮನ ಹರಿಸಲು ಕಾರ್ಯಕರ್ತರಿಗೆ ರಾಹುಲ್ ಕರೆ

ಅಹಮದಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದಿದ್ದಾರೆ.

ಪ್ರವಾಹದಿಂದ ತತ್ತರಿಸಿರುವ ಗುಜರಾತಿನ ಬನಶಂಕರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕಾರಿಗೆ ಶುಕ್ರವಾರ ಕಲ್ಲೆಸೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತ ಜಯೇಶ್ ದಾರ್ಜಿಯನ್ನು ವಶಕ್ಕೆ ಪಡೆದಿದ್ದಾರೆ.

ರಾಹುಲ್ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡುವಾಗ ಕೆಲವರು ಕಪ್ಪುಬಾವುಟವನ್ನು ತೋರಿಸಿದ ಘಟನೆಯೂ ನಡೆದಿತ್ತು. ಆದರೆ ಕಲ್ಲೆಸೆತಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಪ್ರಕರಣವನ್ನು ದಾಖಲಿಸದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಆದರೆ ರಾಹುಲ್, ಪ್ರತಿಭಟನೆಯನ್ನು ಕೈಬಿಟ್ಟು ನೆರೆ ಪರಿಹಾರಕ್ಕೆ ಗಮನ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರ: ಕಬ್ಬು ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಸ್ಥಳದಲ್ಲೇ ಸವಾರ ದುರ್ಮರಣ
ಬೆಡ್‌ಶೀಟ್ ಒಂದೇ ಸಾಕು ನಿಮ್ಮ ಮನೆ ಲಕ್ಸುರಿ ವಿಲ್ಲಾ ಆಗಲು: ಸ್ಪ್ರಿಂಗ್ ಸೀಸನ್‌ಗಾಗಿ ಇಲ್ಲಿವೆ 5 ಸೂಪರ್ ಡಿಸೈನ್ಸ್!