ಸಿಎಂ'ನನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲಬೇಕು ಎಂದ ರೆಡ್ಡಿ

By Suvarna Web DeskFirst Published Aug 5, 2017, 5:48 PM IST
Highlights

ರೈತರ, ಮಹಿಳೆಯರ, ನಿರುದ್ಯೋಗಿಗಳ ಹಾಗೂ ಅಲ್ಪಸಂಖ್ಯಾತರ ಕೇವಲ ಒಂದು ಭರವಸೆಯನ್ನು ಈಡೇರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಕೇವಲ ಮತಗಳಿಸಲು ಆಶ್ವಾಸನೆ ನೀಡುತ್ತಾರೆ. ಇಬ್ಬಿಗೆ ನೀತಿ, ವಿಶ್ವಾಸದ್ರೋಹ ಬಗೆಯುವದರಲ್ಲಿ ಅವರು ಪ್ರಸಿದ್ಧಿಯಾಗಿದ್ದಾರೆ. ಮತ್ತೇ ಅದೇ ಉದ್ದೇಶಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ. ಇಂತಹವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲಬೇಕು.

ಹೈದರಾಬಾದ್(ಆ.05): ಆಂಧ್ರಪ್ರದೇಶದಲ್ಲಿ ರಾಜಕೀಯ ವಾದವಿವಾದಗಳು ರಂಗೇರುತ್ತಿದ್ದು, ನಾಯಕರುಗಳ ಮಾತುಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿಪಡೆಯುತ್ತಿವೆ.

ನಂದ್ಯಾಲ ಉಪಚುನಾವಣಾ ಪ್ರಯುಕ್ತ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೈ'ಎಸ್'ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್'ಮೋಹನ್ ರೆಡ್ಡಿ 'ಜನರಿಗೆ ಮೋಸ ಮಾಡುವ, ಎರಡು ಮಾತನಾಡುವ ಹಾಗೂ ಖಾಲಿ ಭರವಸೆ ನೀಡುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

ಕರ್ನೂಲ್ ಜಿಲ್ಲೆಯ ನಂದ್ಯಾಲ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಆಗಸ್ಟ್ 23 ರಂದು ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ನಾಯ್ಡು ಅವರು ರೈತರ, ಮಹಿಳೆಯರ, ನಿರುದ್ಯೋಗಿಗಳ ಹಾಗೂ ಅಲ್ಪಸಂಖ್ಯಾತರ ಕೇವಲ ಒಂದು ಭರವಸೆಯನ್ನು ಈಡೇರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಕೇವಲ ಮತಗಳಿಸಲು ಆಶ್ವಾಸನೆ ನೀಡುತ್ತಾರೆ. ಇಬ್ಬಿಗೆ ನೀತಿ, ವಿಶ್ವಾಸದ್ರೋಹ ಬಗೆಯುವದರಲ್ಲಿ ಅವರು ಪ್ರಸಿದ್ಧಿಯಾಗಿದ್ದಾರೆ. ಮತ್ತೇ ಅದೇ ಉದ್ದೇಶಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ. ಇಂತಹವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲಬೇಕು. ಈತ ಮುಖ್ಯಮಂತ್ರಿಯಲ್ಲ, ಮುಖ್ಯಕಂತ್ರಿ ಎಂದು ಬೈಗುಳಗಳ ಸುರಿಮಳೆಗರೆದರು.

ಈತ ಅಮರಾವತಿಯಲ್ಲಿ ವಿವಿಧ ಅಕ್ರಮಗಳನ್ನು ನಡೆಸಿ 3.5 ಲಕ್ಷ ಕೋಟಿ ಸಂಪಾದಿಸಿದ್ದಾರೆ. ನಮ್ಮ ಪಕ್ಷದ 21 ಶಾಸಕರನ್ನು ವಿವಿಧ ಹುದ್ದೆ ಹಾಗೂ ಹಣ ಕೊಟ್ಟು ತಮ್ಮ ಲಕ್ಷಕ್ಕೆ ಕೊಂಡುಕೊಳ್ಳಲು ಬಯಸಿದ್ದರು. ಜನರು ಇಂತಹ ಭ್ರಷ್ಟರನ್ನು ನಿರ್ಮೂಲ ಮಾಡಲು ಪ್ರತಿಜ್ಞೆ ಮಾಡಬೇಕು' ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಕೆಲವು ದಿನಗಳ ಹಿಂದೆ ಸಾರ್ವಜನಿಕ ಭಾಷಣದಲ್ಲಿ ವೈಎಸ್'ಆರ್ ಕಾರ್ಯಕರ್ತರನ್ನು ನೇರವಾಗಿ ಬೆದರಿಕೆ ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು.

click me!