
ನವದೆಹಲಿ(ಜ.10): ಮೊಬೈಲ್ ಹ್ಯಾಂಡ್'ಸೆಟ್ ತಯಾರಕ ಕಂಪೆನಿಯಾದ ಜಿಯೋನಿ ಇಂಡಿಯಾ ತನ್ನ ಉತ್ಪನ್ನದ ಪ್ರಚಾರ ರಾಯಭಾರಿಯಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಆಯ್ಕೆಮಾಡಿಕೊಂಡಿದೆ.
ಈಗಾಗಲೇ ನಟಿ ಅಲಿಯಾ ಭಟ್ ಅವರನ್ನೂ ಪ್ರಚಾರ ರಾಯಭಾರಿಯನ್ನಾಗಿ ಆರಿಸಿರುವ ಜಿಯೋನಿ, ಕಳೆದ ನಾಲ್ಕು ವರ್ಷಗಳಲ್ಲಿ 1.2 ಕೋಟಿ ರು. ವ್ಯವಹಾರ ನಡೆಸಿದೆ.
‘‘ವಿರಾಟ್ ಹಾಗೂ ಅಲಿಯಾ ಇಬ್ಬರೂ ಜಿಯೋನಿ ಉತ್ಪನ್ನದ ಪ್ರಚಾರ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಇಬ್ಬರು ಸ್ಟಾರ್ ಸಂಗಮ ಜಿಯೋನಿಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವ ವಿಶ್ವಾಸವಿದೆ'' ಎಂದು ಜಿಯೋನಿ ಇಂಡಿಯಾ ಸಿಇಒ ಮತ್ತು ನಿರ್ವಹಣಾ ನಿರ್ದೇಶಕ ಎಂ.ಡಿ. ಅರವಿಂದ್ ಆರ್. ವೊಹ್ರಾ ತಿಳಿಸಿದ್ದಾರೆ.
ಕಂಪನಿ ವಿರಾಟ್ ಕೊಹ್ಲಿಯೊಂದಿಗೆ ಮಾಡಿಕೊಂಡ ಒಪ್ಪಂದದ ಮೊತ್ತವನ್ನು ಬಹಿರಂಗ ಪಡಿಸಿಲ್ಲ. 2016ರ ದೀಪಾವಳಿ ಸಂದರ್ಭದಲ್ಲಿ 200 ಕೋಟಿ ರೂಪಾಯಿ ವ್ಯವಹಾರ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.