
ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಈಗ ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಕದನ ನಡೆಯುತ್ತಿದೆ. ರಾಜಕಾರಣದ ಜತೆಗೆ ಇಲ್ಲಿ ಸಂಬಂಧಿಕರ ನಡುವೆ ಹಣಾಹಣಿಯೂ ಇದ್ದು, ಪ್ರತಿ ಚುನಾವಣೆಯಲ್ಲೂ ಕುತೂಹಲ ಕೆರಳಿಸುತ್ತದೆ.
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ಸಿನ ಪ್ರಭಾವಿ ನಾಯಕರು. ಅವರಿಗೆ ಬಿಜೆಪಿಯಿಂದ ಎದುರಾಳಿಯಾಗಿರುವವರು ಸಂಬಂಧದಲ್ಲಿ ಬೀಗರೇ ಆಗಿರುವ ಸಂಸದ ಜಿ.ಎಸ್. ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್. ಎರಡೂ ಪಕ್ಷಗಳಿಗೆ ಸಂಬಂಧಿಕರಿಗೇ ಸಾರಥಿಗಳಾಗಿರುವುದರಿಂದ ಇದೊಂದು ರೀತಿ ಕುಟುಂಬಗಳ ನಡುವಣ ರಾಜಕೀಯ ಕದನ.
ಒಂದು ಕಾಲದಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಗೆಲ್ಲುತ್ತಿತ್ತು. 2008ರಲ್ಲಿ ಚಿತ್ರಣ ಬದಲಾಯಿತು. 27ಕ್ಕೆ ಮೋದಿ ಅವರು ದಾವಣಗೆರೆ ಬರುತ್ತಿದ್ದಾರೆ. ಅಸ್ತಿತ್ವ ಸಾಬೀತಿಗೆ ಜೆಡಿಎಸ್ ಹೋರಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.