
ದಾವಣಗೆರೆ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಹಾಲಿ ಕಾಂಗ್ರೆಸ್ ಶಾಸಕ. ಅವರು ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತ. ಬಿಜೆಪಿಯಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಎದುರಾಳಿಯಾಗಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು.
ಸಂಬಂಧದಲ್ಲಿ ರವೀಂದ್ರನಾಥಗೆ ಮಲ್ಲಿಕಾರ್ಜುನ ಅಳಿಯ ಆಗಬೇಕು. ಚುನಾವಣೆಯಲ್ಲಿ ಈ ಇಬ್ಬರ ನಡುವೆಯೇ ಹಣಾಹಣಿ ನಿಶ್ಚಿತ.
ಜೆಡಿಎಸ್‌ನಿಂದ ನಾಯಕ ಜನಾಂಗದ ಟಿ. ಗಣೇಶ ದಾಸಕರಿಯಪ್ಪ ಆಕಾಂಕ್ಷಿಯಾಗಿದ್ದಾರೆ. ನಗರ ಪ್ರದೇಶದಲ್ಲಿ ಮಲ್ಲಿಕಾರ್ಜುನ, ಗ್ರಾಮೀಣ ಭಾಗದಲ್ಲಿ ರವೀಂದ್ರನಾಥ ಪ್ರಾಬಲ್ಯ ಹೊಂದಿದ್ದಾರೆ. 2008ರಲ್ಲಿ ಕಾಂಗ್ರೆಸ್ಸಿನ ಗೊಂದಲದಿಂದಾಗಿ ಬಿಜೆಪಿಯ ರವೀಂದ್ರನಾಥ ಸುಲಭವಾಗಿ ಗೆದ್ದಿದ್ದರು. 2013ರಲ್ಲಿ ಬಿಜೆಪಿ ವಿಭಜನೆಯಿಂದಾಗಿ ಮಲ್ಲಿಕಾರ್ಜುನ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.